ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೧೩ ಶ್ರೀಮದ್ಭಾಗವತವು [ಅಧ್ಯಾ, 44, ಕೃಷ್ಯನು ತನ್ನ ಚಕ್ರಾದ್ಯಾಯುಧಗಳಿಂದ ಆ ಸೌಂಡ್ರಕ ಕಾಶೀರಾಜರ ಚತು ರಂಗಸೈನ್ಯವನ್ನೂ ನಾನಾವಿಧವಾಗಿ ಪ್ರಹರಿಸುತ್ತ, ಪ್ರಳಯಕಾಲದಲ್ಲಿ ಕಾ ಲಾಗ್ನಿ ಯು ಪ್ರಜೆಗಳನ್ನು ಹೇಗೋ ಹಾಗೆ,ಅವೆಲ್ಲವನ್ನೂ ನಾಶಮಾಡುತ್ತ ಬಂ ದನು, ಅಲ್ಲಿ ಕೃಷ್ಣನ ಚಕ್ರಾದ್ಯಾಯುಧಗಳಿಂದ ತುಂಡುತುಂಡಾಗಿ ಕತ್ರ ರಿಸಿಬಿದ, ರಥಗಜತುರಗಪದಾತಿಗಳಿಂದಲೂ, ಒಂಟಿ,ಕತ್ತೆ,ಮೊದಲಾದ ಇತರ ಯುದ್ಧಸಾಧನಗಳಿಂದಲೂ ತುಂಬಿದ ಆ ರಣಭೂಮಿಯು, ರುದ್ರನ ವಿಹಾರ ಸ್ಥಾನವಾದ ಸ್ಮಶಾನದಂತೆ ಅತಿಘೋರವಾಗಿ, ವೀರರಿಗೆ ಉತ್ಸಾಹವನ್ನು ಹೆಚ್ಚಿಸುವಂತಿದ್ದಿತು. ಆಗ ಕೃಷ್ಣನು ಪೌಂಡ್ರಕನನ್ನು ಕುರಿತು ಎಲ ಪೌಂಡ್ರಕಾ! ನೀನು ದೂತನಮೂಲಕವಾಗಿ ಯಾವ ನನ್ನ ಆಯುಧಗಳನ್ನು ಕೃತ್ರಿಮಚಿಹ್ನಗಳೆಂದು ಹೇಳಿದೆಯೋ, ಅದೇ ಅಸ್ತ್ರಗಳ ಪ್ರಭಾವವನ್ನು ತೋರಿಸುವೆನು ನೋಡು ! ಎಲಮೂಢಾ ! ನೀನು ಸುಳ್ಳು ಸುಳ್ಳಾಗಿ ಆರೋ ಪಿಸಿಕೊಂಡಿರುವ ವಾಸುದೇವನೆಂಬ ಹೆಸರನ್ನೂ ನಿನಗೆ ಈಗಲೇ ತಪ್ಪಿ ಸುವೆನು ! ಒಂದುವೇಳೆ ನಿನ್ನೊಡನೆ ಯುದ್ಧ ಮಾಡುವುದರಲ್ಲಿ ನನಗೆ ಪರಾ ಭವವುಂಟಾದರೆ, ನೀನು ಹೇಳಿದಂತೆ ನಿನ್ನಲ್ಲಿ ಶರಣಾಗತಿಯನ್ನೇ ಮಾಡು ವೆನು” ಎಂದು ಹೇಳುತ್ತ, ಕೆಲವು ತೀಕ ಬಾಣಗಳಿಂದ ಅವನ ರಥವನ್ನು ಮುರಿದುಬಿಟ್ಟನು. ಒಡನೆಯೇ ತನ್ನ ಚಕ್ರಾಯುಧವನ್ನು ಪ್ರಯೋಗಿಸಿ, ದೇವೇಂದ್ರನ ವಜ್ರಾಯುಧದಿಂದ ಪಕ್ವತಶಿಖರವನ್ನು ಭೇದಿಸಿದಂತೆ ಆ ಪೌಂಡ್ರಕನ ತಲೆಯನ್ನು ಕತ್ತರಿಸಿ ಕೆಡಹಿದನು. ಬೇರೆ ಬಾಣಗಳಿಂದ ಕಾಶೀರಾಜನ ತಿರಸ್ಸನ್ನೂ ಕತ್ತರಿಸಿದನು. ಬಿರುಗಾಳಿಯಿಂದ ಮುರಿದು ಬಿದ್ದ ಕಮಲದ ಮೊಗ್ಗಿನಂತೆ, ಕಾಶೀರಾಜನ ತಲೆಯು ಅಲ್ಲಿಂದ ಹಾರಿಬಂದು, ಆ ಕಾಶೀಪಟ್ಟಣದ ಅರಮನೆಯ ಬಾಗಿಲಲ್ಲಿ ಬಿದ್ದಿತು. ಹೀಗೆ ಕೃಷ್ಣನು ಪಂಢಕಕಾಶೀರಾಜರಿಬ್ಬರನ್ನೂ ಸಂಹರಿಸಿದಮೇಲೆ, ಆಕಾಶದಲ್ಲಿ ಸಿದ್ಧ ಚಾರಣಾದಿದೇವಗಣಗಳಿಂದ ಸುತ್ತಿಸಲ್ಪಡುತ್ತ, ಹಿಂತಿರುಗಿ ಬ್ಯಾರಕೆಗೆ ಬಂದು ಸೇರಿದನು. ಆತ್ತಲಾಗಿ ಪೌಂಡ್ರಕನು, ಹುಟ್ಟಿದುದು ಮೊದಲು ಕೃಷ್ಣನಲ್ಲಿ ದ್ವೇಷಬುದ್ಧಿಯುಳ್ಳವನಾಗಿ, ಅನವರತವೂ ಅವನನ್ನೇ ಚಿಂತಿಸು ತಿದ್ದುದರಿಂದ, ತನ್ನ ಪಾಪಶೇಷವೆಲ್ಲವನ್ನೂ ನೀಗಿ, ಕೊನೆಗೆ ಆ ಭಗವಂತನ