ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬ ಶ್ರೀಮದ್ಭಾಗವತವು [ಅಧ್ಯಾ, ೬೯: ಡನೆಯೂ,ಹೆಣ್ಣು ಮಕ್ಕಳಿಗೆ ತಕ್ಕ ವರರೊಡನೆಯೂ ಸಕಾಲದಲ್ಲಿ ಶಾಸ್ಕೋ ಕವಾದ ವಿವಾಹವನ್ನು ನಡೆಸಿ, ಆ ಹೆಣ್ಣುಮಕ್ಕಳನ್ನೂ , ಅಳಿಯಂದಿರನ್ನೂ ಉ ಚಿತಸತ್ಕಾರಗಳೊಡನೆ ಅವರವರಮನೆಗೆ ಕಳುಹಿಸಿಕೊಡುವುದರಲ್ಲಿಯೂ, ತನ್ನ ಗಂಡುಮಕ್ಕಳನ್ನೂ , ಸೊಸೆಯರನ್ನೂ ಸಂಭ್ರಮದಿಂದ ತನ್ನ ಮನೆಗೆ ಕರೆತರು ವುದರಲ್ಲಿಯೂ,ಉತ್ಸಾಹವಿಶಿಷ್ಯನಾಗಿರುವನು.ಓ ಪಕ್ಷಿ ವಾಜಾ'ಯೋಗೇ ಶ್ವರನಾದ ಕೃಷ್ಣನು, ಈ ವಿಧವಾಗಿ ತನ್ನ ಮಕ್ಕಳುಮರಿಗಳೊಡನೆ ಕಲೆತು, ಅವರ ವಿವಾಹಾದಿಕಾರ್ಯಗಳಿಗಾಗಿ ಆತುರಪಡುತ್ತಿರುವುದನ್ನು ನೋಡಿ, ಎಂತವರಿಗೆ ಈ ಸೇ ಜಶ್ಚರ್ಯವುಂಟಾಗದು ? ಹೀಗೆಯೆ ಕೃಹ್ಮನು ಒಂದು ಮನೆಯಲ್ಲಿ ಯಜ್ಞಯಾಗಾದಿಗಳಿಂದ ತನಗೆ ಒ೦ಥ ಬತ 1 ಹುಟ್ಟಿದ ದೇವಳಮ್ಮ ಈನೇ ಆರಾಧಿಸುವುದು,ಇನೊಂದು ಕಡೆ ಯಲ್ಲಿ ಸತ್ರ.ದೆವಾ ಲಯ,ಕರೆ,ಬಾವಿ,ಮುಂತಾದ ಪೂರ್ತಿ ಧರ್ಮಗಳನ್ನು ನಡೆಸುವುದು ಮತ್ತೂಂ ದು ಕಡೆಯಲ್ಲಿ ಕುದುರೆಯಮೇಲೆ ಕುಳಿತು ಯಾರವರೊಡನೆ ಬೇಟೆಗೆ ಹೊರ ಟು, ಕಾಡಿನಲ್ಲಿ ಪವಿತ್ರಗಳಾದ ಮೃಗಗಳನ್ನು ಕೊಂದು ತರುವುದು, ಇನ್ನೊಂ ದುಕಡೆಯಲ್ಲಿ ಮಂತ್ರಿ ಮೊದಲಾದ ತನ್ನ ಪ್ರಕೃತಿಗಳಿಗೂ, ಅಂತಃಪರಸೇವ ಕರಿಗೂ ತನ್ನ ನಿಜಸ್ಥಿತಿಯನ್ನು ತಿಳಿಯಿಸದಂತೆ ವೇಷವನ್ನು ಮರೆಸಿಕೊಂಡು, ಅವರವರ ಮನೋಭಿಪ್ರಾಯವನ್ನು ತಿಳಿದುಕೊಳ್ಳುವುದು, ಹೀಗೆ ಬೇರೆಬೇರೆ ಮನೆಗಳಲ್ಲಿ ಬೇರೆಬೇರೆ ವಿಧವಾದ ಕಾರ್ಯಗಳಿಂದ ವಿನೋದಿ ಸುತ್ತ, ಆ ಹದಿನಾರುಸಾವಿರಮಂದಿ ಸ್ತ್ರೀಯರನ್ನೂ, ಸದಾ ಕಾಲದಲ್ಲಿಯೂ ಸಂತೋಷಪಡಿಸುತ್ತಿದ್ದನು. ಇದನ್ನು ನೋಡಿ ಮನುಷ್ಯಾವತಾರದಲ್ಲಿಯೂ ಆತ ನು ತೋರಿಸತಕ್ಕ ಆಶ್ಚರ್ಯಶಕ್ತಿಗಾಗಿ ನಾರದನು ವಿಸ್ಮಿತನಾಗಿ ಆ ಕೃಷ್ಣನೊಡನೆ ಹೀಗೆಂದು ಹೇಳುವನು. << ಓ ಯೋಗೀಶ್ವರಾ ! ನಿನ್ನ ಆಶ್ಚ ರಶಕ್ತಿಯು ಯೋಗಿಗಳಿಗೂ ಅಗೋಚರವಾಗಿದ್ದರೂ, ನಿನ್ನ ಪಾದ ಸೇನಾಬಲದಿಂದ ಈಗ ನನಗೆ ಕಣ್ಣಾರೆ ನೋಡುವಂತಾಯಿತು.ಓ ದೇವಾ ! ನಿನ್ನ ಮಾಯಾಪ್ರವಾಹದಲ್ಲಿ ಮುಳುಗಿ ತೇಲುತ್ತಿರುವ ಲೋಕಗಳಲ್ಲಿ, ಜಗತ್ಪಾ ವನಗಳಾದ ನಿನ್ನ ಲೀಲೆಗಳನ್ನು ಹಾಡುತ್ತ ಸಂಚರಿಸುತ್ತಿರುವಂತೆ,ನನ್ನನ್ನು ಆ ನುಗ್ರಹಿಸಿ ಕಳುಹಿಸಬೇಕು” ಎಂದನು. ಅದಕ್ಕಾ ಕೃಷ್ಣನು,” ಓ ಬ್ರಾಹ್ಮ