ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮೮ ಶ್ರೀಮದ್ಭಾಗವತವು [ಅಧ್ಯಾ, ೭೭, ಮೊದಲು ಬಂದಿದ್ದ ದೂತನಾಗಲಿ, ತನ್ನ ತಂದೆಯ ಮುಂಡವಾಗಲಿ ಯಾವುದೂ ಗೋಚರಿಸಲಿಲ್ಲ! ಅದೆಲ್ಲವೂ ಸ್ಪಷ್ಟ ಪ್ರಾಯವಾಗಿ ತೋರಿತು. ಆದರೆ ಆಕಾಶದಲ್ಲಿ ಸೌಭವೆಂಬ ವಿಮಾನದಲ್ಲಿ ಕುಳಿತಿದ್ದ ತನ್ನ ಶತ್ರುವೊಬ್ಬನ್ನು ಮಾತ್ರ ಗೋಚರಿಸಿದನು. ಒಡನೆಯೇ ಆ ಸಾಲ್ವನನ್ನು ಕೊಂದುಬಿಡಬೇ ಕೆಂದು ಕೃಷ್ಣನು ಸಂಕಲ್ಪಿಸಿಕೊಂಡನು. ಓ ಪರೀಕ್ಷಿದ್ರಾಜಾ ! ಈ ಸಾಲ್ವ ವೃತ್ಯಾಂತದಲ್ಲಿ ತತ್ವವಿರುದ್ಯಗಳಾದ ಕೆಲವು ಸಂದರ್ಭಗಳು ಕಾಣ) ವುವು. ಋಷಿಗಳು ಹಿಂದುಮುಂದಿನ ಸಂದರ್ಭಗಳನ್ನು ಸರಿಹೋಲಿಸಿ. ನೋಡದಹಾಗೆ ಹೇಳಿರುವಂತಿದೆ ! * ಕೇವಲಭಗವದ್ದಾನನಿರತರಾದ ಆ ಮಹರ್ಷಿಗಳು, ಇಂತಹ ಸಂದರ್ಭಗಳಲ್ಲಿ ತಮ್ಮ ಮಾತುಗಳು ಒಂದ ಕ್ಕೊಂದು ವಿರುದ್ಧವೆಂಬುದನ್ನೂ ಯೋಚಿಸಲಾರರು. ಅಖಂಡವಾದ ಜ್ಞಾ ನಕ್ಕೂ ಐಶ್ವಶ್ಯಕ ನೆಲೆಯಾದ ಆ ಶ್ರೀ ಕೃಷ್ಣನಿಗೆ ಶೋಕವಾಗಲಿ, ಮೋಹವಾಗಲಿ, ಸ್ನೇಹವಾಗಲಿ, ಅಜ್ಞಾನದಿಂದುಂಟಾಗತಕ್ಕ ಭಯವಾಗಲಿ, “ ಎಲ್ಲಿಯದು ! ಯಾವನ ಪಾದಾರವಿಂದಗಳನ್ನು ಸೇವಿಸುವುದರಿಂದ ಪರಮಾತ್ಯೋಪಾಸನವೆಂಬ ಆತ್ಮವಿದ್ಯೆಯೇ ಕೈವಶವಾಗಿ, ಅನಾದಿಯಾಗಿ ಬಂದ ದೇಹಾತ್ಮಭಾಂತಿ ಮೊದಲಾದ ಪಿಶಾಚಗಳನ್ನು ನೀಗಿಸುವುದೋ, ಯಾವನ ಉಪಾಸನೆಯಿಂದ ಪ್ರಕೃತಿಬದ್ಧರಾದ ಚೇತನರೂ ಕೂಡ, ಪಾಪ ನಿವೃತ್ತಿ ಮೊದಲಾದ ಅಷ್ಟಗುಣಗಳಿಂದ ಕೂಡಿದ ಪರಮೈಶ್ವರವನ್ನು ಪಡೆಯುವರೋ, ಅಂತಹ ಪರಮಾತ್ಮ ಗೆ ಸಾಲ್ಯನ ಗದಾಪ್ರಹಾರದಿಂದ ಮೂರ್ಛಿಯೆಂದರೇನು ? ಕೃಷ್ಣನು ಮೂರ್ಛಿತನಾಗಿದ್ದನೆಂಬುದು ಸುಳ್ಳು!

  • ಇಲ್ಲಿ ಪೂಲ್ಯಾಪರವಿರೋಧಗಳೇನೆಂದರೆ, ಶ್ರೀ ಕೃಷ್ಣನು ರಾಜಸೂಯ ಯಾಗಕ್ಕೆ ಹೋಗುವಾಗ ಬಲರಾಮನೊಡನೆ ಹೋದವನಲ್ಲ, ಏಕೆಂದರೆ 'ಸಂಕರ್ಷ ಣಮನುಜ್ಞಾ” ಎಂದು ಹಿಂದೆ ಆ ಬಾಲರಾಮನ ಅನುಜ್ಞೆಯನ್ನು ಪಡೆದು ತಾನು ಇಂದ್ರಪ್ರಸ್ಥಕ್ಕೆ ಹೋದುದಾಗಿ ಹೇಳಲ್ಪಟ್ಟಿದೆ. ಇದಲ್ಲದೆ ಕೃಷ್ಣನು ಇಂದ್ರಪ್ರಸ್ಥ ದಲ್ಲಿರುವಾಗ, ಸಾಲ್ಮನು ದ್ವಾರಕಿಯಮೇಲೆ ದಂಡೆತ್ತಿ ಬಂದವನಲ್ಲ. ಏಕೆಂದರೆ ಕೃಷ್ಣ ನು ಕಾಮ್ಯಕವನದಲ್ಲಿ ಪಾಂಡವರನ್ನು ಕಂಡಾಗ, ತಾನು ಸಾಲ್ವನೊಡನೆ ಯುದ್ಧಕ್ಕೆ ನಿಂತಿದ್ದುದರಿಂದ ಅವರ ದೂತವೃತ್ತಾಂತವು ತನಗೆ ತಿಳಿಯದೆಂದು ಹೇಳಿದಹಾಗೆ