ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ಥ್ಯಾ, ೬೭.] ದಶಮಸ್ಕಂಧವು. ೨೨೮೯ ಸಾಲ್ವನು ಶಸ್ತ್ರಸಮೂಹಗಳಿಂದ ಪ್ರಹರಿಸುತ್ತಿರುವಾಗಲೇ ಅಮೋಘು. ಪರಾಕ್ರಮವುಳ್ಳ ಶ್ರೀ ಕೃಷ್ಣನು, ಅವನ ಕವಚವನ್ನೂ, ಧನುಸ್ಸನ್ನೂ, ಶಿರೋರತ್ನ ವನ್ನೂ ಭೇದಿಸಿ, ತನ್ನ ಗದೆಯಿಂದ ಆತನ ಸೌಭವಿಮಾನವನ್ನೂ ಪ್ರಹರಿಸಿದನು. ಈ ಗದಾಪ್ರಹಾರದಿಂದ ಆ ಸೌಭವು ಸಹಸ್ರಶಕಲಗ ಳಾಗಿ ಸಮುದ್ರದಲ್ಲಿ ಬಿದ್ದು ಹೋಯಿತು. ಆಮೇಲೆ ಸಾಲ್ವನು, ಆ ವಿಮಾನ ದಿಂದ ಥಟ್ಟನೆ ಕೆಳಕ್ಕೆ ಧುಮುಕಿ, ನೆಲದಲ್ಲಿಯೇ ನಿಂತು, ಗದಾಪಾಣಿಯಾಗಿ 'ಕೃಷ್ಣನನ್ನಿ ದಿರಿಸಿಬಂದನು. ಒಡನೆಯೇ ಕೃಷ್ಣನು ಭಲ್ಲಾ ಯುಧದಿಂದ ಆ ಸಾಲ್ವನ ಭುಜಗಳನ್ನು ಕತ್ತರಿಸಿ, ಆತನನ್ನು ವಧಿಸುವುದಕ್ಕಾಗಿ ಕಲ್ಪಾಂತ. ಸೂಯ್ಯನಂತೆ ಜ್ವಲಿಸುತ್ತಿರುವ ತನ್ನ ಚಕ್ರಾಯುಧವನ್ನು ಕೈಗೆತ್ತಿಕೊಂಡನು. ಆಗ ಚಕ್ರಧಾರಿಯಾದ ಕೃಷ್ಣನು ಸೂರನೊಡಗೂಡಿದ ಉದಯಪಕ್ವತ. ದಂತೆ ಪ್ರಕಾಶಿಸುತ್ತಿದ್ದನು. ಒಡನೆಯೇ ಆತನು, ತನ್ನ ಚಕ್ರವನ್ನು ಪ್ರಯೋ ಗಿಸಿ, ಇಂದ್ರನು ವಜ್ರಾಯುಧದಿಂದ ವೃತ್ರನ ತಲೆಯನ್ನು ಹೇಗೋಹಾಗೆ, ಮಹಾಮಾಯಾವಿಯಾದ ಆ ಸಾಲ್ವನ ತಿರಸ್ಸನ್ನು ಭೇದಿಸಿ, ಕಿರೀಟಕುಂಡ ಲಗಳೊಡನೆ ಅದನ್ನು ಕೆಳಕ್ಕೆ ಕೆಡಹಿದನು. ಜನರೆಲ್ಲರೂ ಹಾಹಾಕಾರವನ್ನು ಮಾಡುತಿದ್ದರು. ಪಾಪಿಯಾದ ಸಾಲ್ವನು ಸೌಭವಿಮಾನದೊಡನೆ ಹತನಾಗಿ ಬಿದ್ದುದನ್ನು ನೋಡಿ, ಆಕಾಶದಲ್ಲಿ ದೇವತೆಗಳು ಸಂತೋಷದಿಂದ ದುಂದುಭಿ ವಾದ್ಯಗಳನ್ನು ಮೊಳಗಿಸಿದರು. ಇಷ್ಟರಲ್ಲಿಯೇ ಆತನಿಗೆ ಮಿತ್ರನಾದ ದಂತ ವನು, ತನಗೆ ಇಷ್ಯರಾದ ಶಿಶುಪಾಲಾದಿಗಳೆಲ್ಲರನ್ನೂ ಕೊಂದ ಕೃಷ್ಣನ ಮೇಲೆ ಹಗೆ ತೀರಿಸಿಕೊಳ್ಳಬೇಕೆಂಬ ಕೋಪದಿಂದ, ಮುಂದೆ ಬಂದನು. ಇದು ಎಪ್ಪತ್ತೇಳನೆಯ ಅಧ್ಯಾಯವು. ಮಹಾಭಾರತದಲ್ಲಿ ಹೇಳಲ್ಪಟ್ಟಿರುವುದು, ಇಲ್ಲಿನ ಸಂದರ್ಭಗಳು ಅದಕ್ಕೆ ವಿರುದ್ಧವಾ "ಗಿರುವುದರಿಂದ,ಋಷಿಗಳ ಮಾತಿನಲ್ಲಿ ಪೂರಾಪರವಿರೋಧಗಳೆಂದು ಭಾವವು.

  • ಳ ಮುಂದೆ ಹೇಳಿದ ವಿಷಯವೇ ಯದಾರ್ಥವಾದತದೇಹೊರತು ಕೃಷ್ಣನು ಮೂರ್ಛಿತನಾದುದು ಸುಳ್ಳೆಂದು ಭಾವವು.