ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯೪ ಶ್ರೀಮದ್ಭಾಗವತವು [ಅಧ್ಯಾ. ೭೮, ಇಷ್ಟಪಟ್ಟು ಇವನಿಗೆ * ಬ್ರಹ್ಮಾಸನವನ್ನು ಕೊಟ್ಟಿದ್ದೆವು. ಸತ್ರಯಾಗದಲ್ಲಿ ಪುರಾಣವನ್ನು ಹೇಳತಕ್ಕ ಬ್ರಾಹ್ಮಣನಿಗಾಗಿ ಈ ಆಸನವು ಕ್ಲಪ್ತವಾ ಗಿರುವುದು, ಈ ಆಸನದಲ್ಲಿ ಕುಳಿತವರು ಎಷ್ಟೇ ದೊಡ್ಡವರು ಬಂದರೂಪ್ರತ್ಯುತ್ತಾನಮಾಡಬೇಕಾದ ಅವಶ್ಯವಿಲ್ಲ! ಆದುದರಿಂದ ಈ ತನು ನಿನ್ನನ್ನು ಇದಿರೆದ್ದು ಗೌರವಿಸದೆ ಹೋದುದು ತಪ್ಪಲ್ಲ. ಈ ನಮ್ಮ ಸತ್ರಯಾಗವು ಮುಗಿಯುವವರೆಗೂ, ಇವನಿಗೆ ದೇಹಕ್ಕೇನೂ ಶ್ರಮವಿಲ್ಲದಹಾಗೆ ಪೂರ್ಣಾ ಯುಸ್ಸನ್ನೂ ಅನುಗ್ರಹಿಸಿದ್ದೆವು. ಇದೊಂದನ್ನೂ ತಿಳಿಯದೆ ನೀನು, ಬಹ್ಮ ಹತ್ಯೆಗೆ ಸಮಾನವಾದ ಈ ಪಾಪಕೃತ್ಯವನ್ನು ನಡೆಸಿಬಿಟ್ಟೆಯಲ್ಲಾ! ಆದರೆ! ಓ ! ದೇವಾ ! ನಿನ್ನ ನಿಜಾಂಶವನ್ನು ನಾವು ಬಲ್ಲೆವು, ಯೋಗೀಶ್ವರನಾದ ಭಗವಂತನ ಅಂಶವೇ ನಿನ್ನಲ್ಲಿರುವುದರಿಂದ, ನೀನು ಕರ್ಮವಶ್ಯನಲ್ಲ. ಬ್ರಾಹ್ಮಣ ರನ್ನು ಕೊಲ್ಲಬಾರದೆಂಬ ಶಾಸ್ತ್ರವಿಧಿಯೂ ನಿನ್ನನ್ನು ಕಟ್ಟಿಡಲಾರದು. ಹಾಗಿ ದರೂ, ಓ! ಲೋಕಪಾವನಾ ! ನೀನು ಈ ಬ್ರಹ್ಮಹತ್ಯೆಗೆ ಪ್ರಾಯಶ್ಚಿತ ವನ್ನು ನಡೆಸಿಕೊಳ್ಳದಿರಬಾರದು. ಈಗ ನೀನು ಅದನ್ನು ನಡೆಸಿದರೆ ಲೋಕಕ್ಕೆ ದಾರಿಯನ್ನು ತೋರಿಸಿಕೊಟ್ಟಂತಾಗುವುದು, ಲೋಕಾನುಗ್ರಹಾ ರ್ಥವಾಗಿಯಾದರೂ ನೀನು ಇದನ್ನು ನಡೆಸಿಯೇ ತೀರಬೇಕು, ದೊಡ್ಡವರು ಅನುಸರಿಸಿದ ಮಾರ್ಗವನ್ನೆ ಲೋಕವೂ ಅನುಸರಿಸುವುದಲ್ಲವೆ ?” ಎಂದರು ಅದಕ್ಕಾ ಬಲರಾಮನು ( ಎಲೈ ಮಹರ್ಷಿಗಳೇ ! ನೀವು ಹೇಳಿದಂತೆಯೇ ಆಗಲಿ!ಇದಕ್ಕೆ ಮುಖ್ಯವಾಗಿ ನಡೆಸಬೇಕಾದ ಪ್ರಾಯಶ್ಚಿತ್ಯವೇನೆಂಬುದನ್ನು ನಿವೇ ಉಪದೇಶಿಸಬೇಕು. ಇದಲ್ಲದೆ ಈ ರೋಮಹರ್ಷಣನಿಗಾಗಿ ದೀರ್ಘ ಯುಸ್ಸು, ದೇಹಬಲ , ಇಂದ್ರಿಯಪಟುತ್ವ, ಮುಂತಾದುವುಗಳಲ್ಲಿ ಯಾವು ದನ್ನು ನೀವು ಕೋರುವಿರೋ, ಅದನ್ನೂ ನನಗೆ ತಿಳಿಸಿದರೆ,ನನ್ನ ಯೋಗಶಕ್ತಿ ಯಿಂದ ಸಾಧಿಸಿಕೊಡುವೆನು” ಎಂದನು. ಆಗ ಋಷಿಗಳು, ಓ! ರಾಮಾ! ನೀನು ಈತನಮೇಲೆ ಪ್ರಯೋಗಿಸಿದ ದರ್ಭೆಯ ರೂಪವಾದ ಶಸದ ವೀ

  • ಬ್ರಹ್ಮಾಸನವೆಂದರೆ ಪುರಾಣ ಹೇಳತಕ್ಕ ಬ್ರಾಹ್ಮಣನು ಕುಳಿತು ಕೊಳ್ಳು ವ ಆಸನವು, ಇದರಮೇಲೆ ಕುಳಿತವನು ಎಂತವರಿಗೂ ಪ್ರತ್ಯುತ್ಥಾನಮಾಡಬೇಕಾದುದಿಲ್ಲ ವೆಂಬ ವಿಧಿಯುಂಟು.