ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨9೯೫ ಅಧ್ಯಾ, ೭೯. ದಶಮಸ್ಕಂಧವು. ಗ್ಯಕ್ಕೂ ಕೊರತೆಯುಂಟಾಗಬಾರದು, ಅದರಿಂದ ಈತನ ಮರಣವೂ ಸುಳ್ಳಾಗಬಾರದು, ನಾವು ಈ ನಮ್ಮ ಸತ್ರಯಾಗವು ಮುಗಿಯುವವರೆಗೆ ಇವನಿಗೆ ದೀರ್ಘಾಯುಷ್ಯವಿರಬೇಕೆಂದು ಅನುಗ್ರಹಿಸಿದ ವರವೂ ಸು ಳ್ಳಾಗಬಾರದು, ಇವೆಲ್ಲವೂ ಸತ್ಯವಾಗುವಂತೆ ಮಾಡಬೇಕಾದುದು ನಿನ್ನ ಭಾರವು.” ಎಂದರು, ಅದಕ್ಕಾ ರಾಮನು” ಎಲೈ ಮಹರ್ಷಿಗಳೇ ! ಹಾಗೆಯೇ ಮಾಡುವೆನು. ವೇದಗಳು (ಅತ್ಯಾವೈ ಪುತ್ರನಾಮಾಸಿ” <<ತಂದೆ ಯೇ ಪುತ್ರನಾಗುವನು ” ಎಂದು ಹೇಳುವುವಲ್ಲವೆ ? ಆದುದರಿಂದ ಇವನ ಮಗನಾದ ಉಗ್ರಶ್ರವನೆಂಬವನು ಇದೇ ಬಹ್ಮಾಸನದಲ್ಲಿ ಕುಳಿತು, ನಿಮಗೆ ಪುರಾಣವನ್ನು ಹೇಳತಕ್ಕವನಾಗಲಿ!ನೀವು ಕೋರಿದಂತೆ ಅವನಿಗೆ ಆಯುಸ್ಸು, ಇಂದ್ರಿಯಪಟುತ್ವ ಮುಂತಾದುವವೂ ಉಂಟಾಗಲಿ! ಇನ್ನೂ ನಿಮಗೆ ಬೇರೆ ಕೋರಿಕೆಗಳೇನಾದರೂ ಇದ್ದರೆ ತಿಳಿಸಿ ! ಅದನ್ನೂ ನಡೆಸಿಕೊಡು ವೆನು, ಆದರೆ ನಾನು ತಿಳಿಯದೆ ಮಾಡಿದ ಈಗಿನ ಪಾಪಕ್ಕೆ ಶಾಸ್ಕೂಕ್ಕ ವಾದ ಪರಿಹಾರವೇನೆಂಬುದನ್ನು ನೀವೇ ಆಲೋಚಿಸಿ ತಿಳಿಸಬೇಕು”ಎಂದನು. ಅದಕ್ಕಾ ಋಷಿಗಳು « ಬಲರಾಮಾ ! ಕೇಳು ! ಇಲ್ವಲನ ಮಗನಾದ ಪಲ ನೆಂಬ ಕೊರೆದಾ ವವನೊಬ್ಬನಿರುವನು. ಅವನು ಆಗಾಗ ಪತ್ವಕಾಲಗಳಲ್ಲಿ ಇಲ್ಲಿಗೆ ಬಂದು, ಮಲಮೂತ್ರಗಳನ್ನೂ, ಮದ್ಯಮಾಂಸಗಳನ್ನೂ , ಕೀವು, ರಕ್ತ ಮುಂತಾದ ಕಲ್ಮಲಗಳನ್ನೂ ಸುರಿಸಿ, ನಮ್ಮ ಯಾಗವನ್ನು ಕೆಡಿಸುತ್ತಿರು ವನು. ಆ ಪ ಪಿ ಯನ್ನು ಮೊದಲು ನೀನು &ಂದರೆ, ನಮಗೆ ಎಷ್ಟೋ ಉಪ ಕಾರವನ್ನು ಮಾಡಿದಂತಾಗುವುದು. ಆಮೇಲೆ ನೀನು, ಅಹಿಂಸೆ, ಬಹ್ಮಚಯ್ಯ ಮೊದಲಾದ ವ್ರತವನ್ನು ಹಿಡಿದು, ತನ್ನ ದಡು ವರುಷಗಳವರೆಗೆ ತೀರ್ಥಯಾ ತ್ರೆಗಳನ್ನು ಮಾಡುತ್ತ ಭೂಪ್ರದಕ್ಷಿಣವನ್ನು ಮಾಡಿ ಬಂದರೆ ಶುದ್ಧ ನಾಗುವೆ” ಎಂದರು. ಇದು ಎಪ್ಪಂಟನೆಯ ಅಧ್ಯಾಯವು. wwwಲರಾಮನು ಇಲ್ವಲವನ್ನು ಕೊಂದುದು, ತೀರ್ಥಯಾತ್ರೆ.ww ಆಮೇಲೆ ಒಮ್ಮೆ ಪಠ್ಯದಿನವು ಬಂದಾಗ, ಬಲರಾಮನು ಆ ಯಜ್ಞ ವಾಟದಲ್ಲಿರುವಾಗಲೇ, ಪ್ರಚಂಡವಾದ ಬಿರ.ಗಾಳಿಯೊಂದು ತಲೆದೋರಿ, 145 B