ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯೬ ಶ್ರೀಮದ್ಭಾಗವತವು [ಅಧ್ಯಾ, ೭೯. ಅತಿದುರ್ಗಂಧದೊಡನೆ ನಾನಾಕಡೆಗೆ ಮಣ್ಣನ್ನೆರಚುತ್ತ, ಭಯಂಕರವಾಗಿ ಬೀಸತೊಡಗಿತು. ಓ ರಾಜೇಂದ್ರಾ ! ಇದು ಆ ಪಲ್ವಲನ ಮಾಯೆಯೆಂದೇ ತಿಳಿ ! ಆ ಗಾಳಿಯೆದ್ಯ ಒಂದೆರಡುಗಳಿಗೆಯಮೇಲೆ, ಆ ಯಜ್ಞಶಾಲೆಯಲ್ಲಿ ಮಲಮಾತ್ರಗಳ ವರ್ಷವೂ ಸುರಿಯಲಾರಂಭಿಸಿತು. ಅದಕ್ಕೆ ಮೇಲೆ ಆ ಪಲ್ಪ ಲನೆಂಬ ರಾಕ್ಷಸನೇ ತ್ರಿಶೂಲವನ್ನು ಹಿಡಿದು, ಅಲ್ಲಿದ್ದವರ ಮುಂದೆ ಕಾಣಿಸಿ ಕೊಂಡನು. ಅವನ ಭಯಂಕರಾಕಾರವನ್ನು ಕೇಳಬೇಕೆ ? ಇದ್ದಲಿನಂತೆ ಕಪ್ಪಾಗಿ ಪಕ್ವತಾಕಾದಿಂದಿರುವ ಮೈ ! ಕಾಸಿದ ತಾಮ್ರದಂತೆ ಕೆಂಪಾದ ತಲೆಮೀಸೆಗಳು ! ಕೋರೆದಾಡೆಗಳಿಂದಲೂ, ಹುಬ್ಬುಗಂಟುಗಳಿಂದಲೂ ಭಯಂಕರವಾದ ಮೋರೆ ! ಇಂತಹ ಘೋರಾಕೃತಿಯುಳ್ಳ ರಾಕ್ಷಸನು ಕಾಣಿಸಿಕೊಂಡೊಡನೆ, ಬಲರಾಮನು, ಶತ್ರುಭೇದಕವಾದ ತನ್ನ ಮುಸಲಾ ಯುಧವನ್ನೂ, ದೈತ್ಯರನ್ನಡಗಿಸತಕ್ಕ ತನ್ನ ಹಲಾಯುಧವನ್ನೂ (ನೇಗಿಲನ್ನೂ ) ಮನಸ್ಸಿನಲ್ಲಿ ಸ್ಮರಿಸಿಕೊಂಡನು. ಒಡನೆಯೇ ಆ ಆಯುಧಗಳೆರಡೂ ಸಿದ್ಧ ವಾಗಿ ಬಂದು ನಿಂತುವು, ಬಲರಾಮನು ತನ್ನ ನೇಗಿಲನ್ನು ಕೈಗೆತ್ತಿಕೊಂಡು, ಅದರಿಂದ ಆಕಾಶದಲ್ಲಿ ಸಂಚರಿಸುತಿದ್ದ ಬ್ರಹ್ಮದ್ರೋಹಿಯಾದ ಆ ಪಲ್ವಲ ನನ್ನೆಳೆದು, ಮುಸಲಾಯುಧದಿಂದ ಅವನ ತಲೆಯಮೇಲೆ ಪ್ರಹರಿಸಿದನು. ಒಡನೆಯೇ ಆ ರಾಕ್ಷಸನ ಹಣೆಯು ಸೀಳಿಹೋಯಿತು.ಅವನು ಬಾಯಲ್ಲಿ ರಕ್ತ ವನ್ನು ಕಾರುತ್ತ,ಆರ್ತಸ್ವರದಿಂದ ಕೂಗಿ,ವಜ್ರಾಹತವಾದ ಪರೂತದಂತೆ ಕೆಳ ಗೆ ಬಿದ್ದು ಸತ್ತನು. ಆಗ ಋಷಿಗಳೆಲ್ಲರೂ ಬಲರಾಮನನ್ನು ಕೊಂಡಾಡುತ್ತ, ಅಮೋಘವಾದ ಆಶೀರ್ವಾದಗಳಿಂದ ಅವನನ್ನು ಮನ್ನಿಸಿ, ಪೂತ್ವದಲ್ಲಿ ವೃತ್ರಾಸುರನನ್ನು ಕೊಂದ ದೇವೇಂದ್ರನನ್ನು ದೇವತೆಗಳು ಹೇಗೋಹಾಗೆ, ಆ ಬಲರಾಮನಿಗೆ ಮಂಗಳಸ್ನಾನವನ್ನು ಮಾಡಿಸಿದರು. ಆಮೇಲೆ ಅವನಿಗೆ ದಿವ್ಯಕಾಂತಿವಿಶಿಷ್ಟಗಳಾಗಿ, ಎಂದಿಗೂ ಬಾಡದ ಕಮಲಗಳಿಂದ ಮಾಡಿದ ವೈಜಯಂತಿಮಾಲಿಕೆಯನ್ನೂ, ಎರಡು ದಿವ್ಯವಸ್ಯಗಳನ್ನೂ ಆಭರಣಗ ಳನ್ನೂ ಕೊಟ್ಟರು. ಆಮೇಲೆ ಬಲರಾಮನು ಆ ಮಹರ್ಷಿಗಳ ಅನುಜ್ಞೆ ಯನ್ನು ಪಡೆದು, ತನ್ನ ಸಂಗಡಿಗರಾದ ಬ್ರಾಹ್ಮಣರೊಡನೆ ಕೌಶಿಕೀಟಗೆ ಹೋಗಿ, ಅಲ್ಲಿ ಸ್ನಾನವನ್ನು ಮಾಡಿ, ಅಲ್ಲಿಂದ ಹೊರಟು, ಸರಯೂ ನದಿಯ