ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೪೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೧೦ ಶ್ರೀಮದ್ಭಾಗವತವು [ಅಧ್ಯಾ, ೮೧. ಕಾರ, ಕುಮುದಾದಿ ಪುಷ್ಪಗಳಿಂದ ತುಂಬಿದ ಸರೋವರಗಳು ಕಾಣು ವುವು, ಆ ಮನೆಯ ನಾನಾಕಡೆಗಳಲ್ಲಿಯೂ ವಸ್ತ್ರಾಭರಣಗಳಿಂದಲಂಕೃತ ರಾದ ಸಿಯರೂ, ಪುರುಷರೂ, ಸಂಭ್ರಮದಿಂದ ಸಂಚರಿಸುತ್ತಿರುವರು. ಅಲ್ಲಿನ ಸನ್ನಿವೇಶವು ಸಾಕ್ಷಾನ್ಮಹೇಂದ್ರಭವನದಂತೆ ಕಾಣುತ್ತಿರುವುದು. ಅದನ್ನು ನೋಡಿ ಕುಚೇಲನಿಗೆ ದಿಗೃಮೆ ಹಿಡಿದಂತಾಯಿತು. ಆಹಾ ! ಏನಿದು ! ಇದು ಯಾರ ಮನೆ! ಇದು ಮೊದಲು ನಾನಿದ್ದ ಸ್ಥಳವೇ ಅಲ್ಲವೆ? ಇದಕ್ಕೆ ಈ ವಿಧವಾದ ಸ್ಥಿತಿಯು ಬಂದುದು ಹೇಗೆ!”ಎಂದು ಹಿಂದುಮುಂದು ತೋರದೆ ಚಿಂತಿಸುತ್ಯ, ಭ್ರಾಂತನಾಗಿ ಅಲ್ಲಿಯೇ ನಿಂತುಬಿಟ್ಟನು. ಇಷ್ಟ ರಲ್ಲಿ ಕೆಲವುಮಂದಿ ದಿವ್ಯತೇಜಸ್ಸುಳ್ಳ ಪುರುಷರೂ, ಸ್ತ್ರೀಯರೂ ಇವನನ್ನು ಕರೆದುಕೊಂಡುಹೋಗುವುದಕ್ಕಾಗಿ ಗೀತವಾದ್ಯಗಳೊಡನೆ ಇದಿರು ಗೊಂಡುಬಂದರು. ಆ ಬ್ರಾಹ್ಮಣನ ಪತ್ನಿ ಯೂಕೂಡ, ಪತಿಯು ಹಿಂತಿರುಗಿ ಬಂದನೆಂಬ ವೃತ್ತಾಂತವನ್ನು ಕೇಳಿ, ಪರಮಸಂಭ್ರಮಗೊಂಡು ಕಮಲವನದಿಂದ ಹೊರಟುಬರುವ ಲಕ್ಷ್ಮಿದೇವಿಯಂತೆ ಮನೆಯಿಂದಹೊರಗೆ ಬಂದಳು.. ಪತಿಯನ್ನು ಕಂಡೊಡನೆ ಅವಳ ಕಣ್ಣುಗಳಲ್ಲಿ ಆನಂದಬಾಷ್ಪವು ತುಂಬಿ,ಕಣೆ ಕಾಣದಂತಾಯಿತು, ಹಾಗೆಯೇ ಸ್ವಲ್ಪ ಹೊತ್ತಿನವರೆಗೆ ಆ ಸಾಧೀಮಣಿಯು, ಕಣ್ಣು ಮುಚ್ಚಿ ,ಮನಸ್ಸಿನಿಂದಲೇ ಪತಿಯಪಾದಗಳಿಗೆ ನಮ ಸ್ಕರಿಸಿ, ಆತನ ದೇಹಾಲಿಂಗನಸೌಖ್ಯವನ್ನೂ ಮನಸ್ಸಿನಿಂದಲೇ ಅನುಭವಿಸಿ ದಳು, ಈ ಬ್ರಾಹ್ಮಣನೂಕೂಡ, ವಿಮಾನದಲ್ಲಿರುವ ದೇವತಾಸ್ತಿಯಂತೆ ಅಪೂರೈಕಾಂತಿಯಿಂದ ಶೋಭಿಸುತ್ತಿರುವ ತನ್ನ ಪತ್ನಿ ಯನ್ನು ಕಂಡನು. ಈ ತಮವಾದ ಕಂಠಾಭರಣವನ್ನು ಧರಿಸಿದ ಅನೇಕಸ್ತಿಯರು, ಗೌಡಿಯರಂತೆ ಅವಳ ಸುತ್ತಲೂ ನಿಂತು ಉಪಚರಿಸುತ್ತಿದ್ದರು, ಅದನ್ನು ನೋಡಿ ಆ ಬ್ರಾ ಹ್ಮಣನಿಗೆ ಮತ್ತಷ್ಟು ಆಶ್ರವುಂಟಾಯಿತು. ಪರಮಸಂತೋಷದಿಂದ ಅವ ಳೊಡನೆ ತನ್ನ ಮನೆಯೊಳಗೆ ಪ್ರವೇಶಿಸಿದನು.ಆ ಮನೆಯ ಸೊಬಗನ್ನು ಕೇಳ ಬೇಕೆ ? ಆ ಕಟ್ಟಡವು ರತ್ನಖಚಿತವಾದ ನೂರಾರುಕಂಬಗಳಿಂದ ಇಂದ್ರ ಭವನದಂತೆ ಕಾಣುತ್ತಿರುವುದು, ಅದರ ನಡುನಡುವೆ ಚಿನ್ನದ ಚಿತ್ರಕಾರ ವುಳ್ಳ ಮಂಚಗಳು! ಅದರಮೇಲೆ ಹಾಲಿನ ನೊರೆಯಂತೆ ಬಿಳುಪಾದ ಹಾಸಿ