ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೧.] ದಶಮಸ್ಕಂಧವು. ೨೩೧೧ ಗೆಗಳು! ಅಲ್ಲಲ್ಲಿ ಸುವರ್ಣದಂಡವುಳ್ಳ ಚಾಮರಗಳು! ಬಂಗಾರದ ಹಿಡಿಗಳು ಕೃ ಬೀಸಣಿಗೆಗಳು! ಅಲ್ಲಲ್ಲಿ ಸುವರ್ಣಮಯವಾದ ಆಸನಗಳು! ಆದರಮೇಲೆ ಮೃದುವಾದ ಆಸ್ತರಣಗಳು, ಸುತ್ತಲೂ ಮುತ್ತಿನ ಜಾಲರಿಗಳಿಂದಲಂಕೃತ ವಾದ ಮೇಲುಕಟ್ಟುಗಳು!ಸ್ಪಟಿಕಮಯವಾದ ಗೋಡೆಗಳು.ಆ ಗೋಡೆಗಳಲ್ಲಿ ಇಂದ್ರನೀಲಮಣಿಗಳಿಂದ ಮಾಡಿದ ಚಿತ್ರಕೆಲಸಗಳು, ನಡುನಡುವೆ ರತ್ನ ಹೀ ಪಗಳನ್ನು ಕೈಯಲ್ಲಿ ಹಿಡಿದಿರುವ ಸಿ ಪ್ರತಿಮೆಗಳು!ಹೀಗೆ ಸಕಲಸಂಪತ್ನಮ್ಮ ದೃವಾದ ಆ ಸ್ಥಳಸನ್ನಿ ವೇಶವನ್ನು ನೋಡಿ, ಕುಚೇಲನು ಆಶ್ಚರದಿಂದ ಏ. ನೊಂದೂ ತೋರದೆ ಸಬ ನಾಗಿ ನಿಂತನು. ಅಕಸ್ಮಾತ್ತಾಗಿ ತನಗೆ ಲಭಿಸಿದ ಆ ಐಶ್ವರಸಮೃದ್ಧಿಯನ್ನು ಕುರಿತು, ತನ್ನಲ್ಲಿ ತಾನೇ ಹೀಗೆಂದು ಯೋಚಿಸ ತೊಡಗಿದನು. « ಆಹಾ ! ಏನಿದು ! ಹುಟ್ಟುದರಿದ್ರನಾದ ನನ್ನ ಮೊದಲಿನ ಸ್ಥಿತಿಯನ್ನು ಯೋಚಿಸಿದರೆ,ಆ ನನ್ನ ದಾರಿದ್ರದಶೆಯು ಜನ್ಮಾಂತಕ್ಕೂ ಬಿಟ್ಟು ಹೋಗುವಹಾಗೆ ತೋರಿರಲಿಲ್ಲ! ಮನಸ್ಸಿನಿಂದ ಯೋಚಿಸುವುದಕ್ಕೂ ಸಾಧ್ಯವಲ್ಲದ ಈ ಮಹಾಭಾಗ್ಯವು ನನಗೆ ಲಭಿಸಿದುದನ್ನು ನೋಡಿದರೆ, ಉಭ ಯವಿಭೂತಿಗಳಿಗೂ ಪ್ರಭುವಾದ ಆ ಶ್ರೀಕೃಷ್ಣನ ದರ್ಶನದ ಫಲವೇ ಈ ರೀತಿಯಾಗಿ ಪರಿಣಮಿಸಿರಬೇಕೇ ಹೊರತು ಇದಕ್ಕೆ ಬೇರೆ ಕಾರಣವನ್ನೂ ಊಹಿಸುವುದಕ್ಕಿಲ್ಲ. ಏನಾಶ್ಚರವಿದು ! ನಾನು ಆ ಶ್ರೀಕೃಷ್ಣನನ್ನು ಪ್ರತ್ಯ ಕ್ಷವಾಗಿಯೇ ಕಂಡುಬಂದೆನು. ಅವನು ಈ ವಿಷಯವಾಗಿ ನನ್ನೊಡನೆ ಯಾವ ಮಾತನ್ನೂ ಆಡಲಿಲ್ಲ. ಅಥವಾ ! ಮಾಯಾಮಾನುಷನಾದ ಆ ಕೃಷ್ಣ ನಲ್ಲಿ ಇದೊಂದಾಶ್ರವಲ್ಲ! ಮೇಫುಗಳು ಯಾರಿಗೂ ತಿಳಿಯದಹಾಗೆ ಬಂದು ಸುವೃಷ್ಟಿಯನ್ನು ಕರೆಯುವಂತೆ, ಆ ಭಗವಂತನೂಕೂಡ ಯಾಚಕ ರಮುಂದೆ ಯಾವಮಾತನ್ನೂ ಆಡದೆ, ತನ್ನ ಉದ್ದೇಶವನ್ನು ಸ್ವಲ್ಪ ಮಾತ್ರ ವೂ ಸೂಚಿಸದೆ ಪರೋಕ್ಷದಲ್ಲಿಯೇ ಇದ್ದು ಅವರಿಗೆ ಬೇಕಾದ ಇಷ್ಟಾರ್ಥಗ ಳನ್ನು ಕೊಡುವನು. ಆ ಭಗವಂತನು ಆಶ್ರಿತರಿಗೆ ತನ್ನನ್ನೇ ಒಪ್ಪಿಸಿ ಬಿಡುವಷ್ಟು ದಯಾಸ್ವಭಾವವುಳ್ಳವನು. ಅವನು ಅನುಭವಿ ಸತಕ್ಕ ನಿರತಿಶ ಯವಾದ ಐಶ್ವಠ್ಯದೊಡನೆ ಹೋಲಿಸಿನೋಡಿದರೆ, ಬ್ರಹ್ಮಾದಿಗಳ ಭೋಗವೂ ಅತ್ಯಲ್ಪವೆನಿಸುವುದು, ತನ್ನಲ್ಲಿ ಮರೆಹೊಕ್ಕವರಿಗೆ ಅಂತಹ ಅಲ್ಪಭೋಗ 146 B.