ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೩ ಶ್ರೀಮದ್ಭಾಗವತವು | [ಅಧ್ಯಾ, ಆಳ. ತಮಾ ! ಕರ್ಮಗಳಿಂದ ಕರ್ಮವು ನೀಗುವುದೆಂಬ ನೀತಿಯು ಸ್ಪಷ್ಟವಾಗಿ ಯೇ ನಿರೂಪಿಸಲ್ಪಟ್ಟಿರುವುದು ಹೇಗೆಂದರೆ,ಸಮಸ್ತಯಜ್ಞಗಳಿಗೂ ನಿರ್ವಾ ಹಕನಾದ ಭಗವಂತನನ್ನು , ಆಯಜ್ಞಗಳಿಂದಲೇ ಶ್ರದ್ದೆಯಿಟ್ಟು, ಆರಾಧಿಸಬೇ ಕೆಂಬುದೇ ಇದರ ಮುಖ್ಯತಾತ್ಸರವು, ಈ ಭಗವದಾರಾಧನರೂಪವಾದ ಕರ್ಮವು ಮನಸ್ಸಿಗೆ ಶಾಂತಿಯನ್ನುಂಟುಮಾಡುವುದು, ನಿರತಿಶಯವಾದ ಮೋಕ್ಷಸುಖವನ್ನೂ ಒಡಗೂಡಿಸುವುದು, ಆದುದರಿಂದ ಪುರಾತನಮಹರ್ಷಿ ಗಳು, ಶಾಸ್ತ್ರದೃಷ್ಟಿಯಿಂದ ಈ ಭಗವದಾರಾಧನರೂಪವಾದ ಕರ್ಮವೇ ಪ್ರಾರಬ್ಧ ಕರ್ಮಗಳನ್ನು ನೀಗಿಸತಕ್ಕ ಸುಲಭೋಪಾಯವೆಂದು ನಿಶ್ಚಯಿಸಿ ರುವರು. ಇತರಪ್ರಾಣಿಗಳಿಗೆ ಹಿಂಸೆಯಿಲ್ಲದೆ ಸಂಪಾದಿಸಿದ ಪರಿಶುದ್ಧವಾದ ಧನದಿಂದ, ಆ ಪರಮಪುರುಷನನ್ನು ಶ್ರದ್ಧೆಯಿಂದ ಯಜಿಸಬೇಕು, ಬ್ರಾಹ್ಮ ಣಕ್ಷತ್ರಿಯವೈಶ್ಯರೆಂಬ ಮೂರುವರ್ಣಗಳಲ್ಲಿರುವ ಗೃಹಸ್ಥರಿಗೂ ಶ್ರೇಯ ಸ್ನಾಧಕವಾದ ಮಾರ್ಗವೇ ಇದು! ವಿವೇಕಿಯಾದ ಪುರುಷನು, * ಯಜ್ಞ ಮತ್ತು 'ದಾನಗಳಲ್ಲಿ, ಕೈಹಿಡಿಯದೆ ಹಣವನ್ನು ವೆಚ್ಚ ಮಾಡುವುದರಿಂದ, ಹಣದಾಸೆಯನ್ನೂ, ಕುಟುಂಬ ಭೋಗಾನುಭವದಿಂದ ಹೆಂಡಿರುಮಕ್ಕಳ ಮೋಹವನ್ನೂ,ಕ್ಸ್‌ಪ್ರಕಾಲದಮೇಲೆ ಸ್ವರ್ಗಾದಿಸುಖಗಳನ್ನೂ ಕೊನೆಗಾಣಿ ಸತಕ್ಕ ಕಾಲದ ಮಹಿಮೆಯನ್ನು ಪರಿಶೋಧಿಸುವುದರಿಂದ, ಪರಲೋಕ ಸುಖ ದ ಆಸೆಯನ್ನೂ ನೀಗಬಹುದು. ಹೀಗೆ ಆ ನೇಕಧೀರರು ಗ್ರಾಮಗಳಲ್ಲಿದ್ದು, ಮೇಲೆ ಹೇಳಿದ ಈಷಣತ್ರಯಗಳಲ್ಲಿಯೂ ಜಿಹಾಸೆಹೊಂದಿ, ತಪೋವನಕ್ಕೆ ಹೋಗಿರುವರು. ತ್ರಿವರ್ಣಿಕನು, ಹುಟ್ಟುವಾಗಲೇ ದೇವ, ಋಷಿ, ಪಿತೃಯ ಣಗಳೆಂಬ ಮೂರು ಸಾಲಗಳನ್ನು ಹೊತ್ತೆ ಹುಟ್ಟುವನು. ಇವುಗಳಲ್ಲಿ ಯ ಜ್ಞಾದಿಗಳಿಂದ ದೇವಋಣವನ್ನೂ , ಅಧ್ಯಯನಾದಿಕರ್ಮಗಳಿಂದ ಋಷಿಋಣ

  • ದಾನಯಜ್ಞಾದಿಗಳಲ್ಲಿ ಕೈಹಿಡಿಯದೆ ಧನವನ್ನು ವೆಚ್ಚ ಮಾಡುವುದರಿಂದ, ಅದನ್ನು ರಕ್ಷಿಸಿಡಬೇಕಾದ ದುಃಖವು ತಪ್ಪುವುದು, ಸಂಸಾರದಲ್ಲಿ ಭಾರಾಪತ್ರಾದಿಗಳ ಸುಖವನ್ನನುಭವಿಸುವುದರಿಂದ,ಅದರ ಆಸೆಯೂ ತಪ್ಪವುದು, ಸ್ವರ್ಗಾದಿಸುಖಗಳೂ ಕಾಲಕ್ರಮದಿಂದ ಕ್ಷೇಣಿಸುವುದೆಂಬುದನ್ನು ತಿಳಿದಾಗ, ಅದರ ಆಸೆಯೂ ಬಿಟ್ಟು ಹೋ ಗುವುದೆಂದು ಭಾವವು.