ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೪] ದಶಮಸ್ಕಂಧನ, ೨೩೩೬? ವನ್ನೂ , ಪುತ್ರಲಾಭದಿಂದ ಪಿತೃಋಣವನ್ನೂ ತೀರಿಸಬೇಕು. ಹೀಗಿಲ್ಲದವನು ನರಕದಲ್ಲಿ ಬೀಳುವನು. ಓ ! ವಸುದೇವಾ ! ಈಗ ನೀನು ನಿನ್ನ ವರ್ಣಾಶ್ರ ಮೋಚಿತವಾದ ಅಧ್ಯಯನಾದಿಗಳಿಂದ ಋಷಿಋಣವನ್ನು ತೀರಿಸಿದಂತಾ ಯಿತು. ಬಲರಾಮಕೃಷ್ಣರನ್ನು ಪುತ್ರರನ್ನಾಗಿ ಪಡೆದುದರಿಂದ ಪುತ್ರಋಣ ವನ್ನೂ ತೀರಿಸಿದಂತಾಯಿತು. ಈಗ ನೀನು ಭಗವದಾರಾಧನರೂಪವಾದ ಯಜ್ಞಗಳಿಂದ ದೇವತೆಗಳ ಋಣವನ್ನು ತೀರಿಸಬೇಕಾದುದೊಂದೇ ಉಳಿದಿ ರುವುದು, ಆ ಋಣವನ್ನು ತೀರಿಸಿದಮೇಲೆ, ಗೃಹಾದಿಗಳಲ್ಲಿ ಸಂಬಂಧಗಳ ನ್ನು ತೊರೆದು, ವಿರಕ್ತನಾಗಿ ತಪೋವನಕ್ಕೆ ಹೋಗಿ, ಮೋಕ್ಷಸುಖಕ್ಕೆ ಯತ್ನಿ ಸಬೇಕು. ವಸುದೇವಾ ! ಭಗವಂತನಲ್ಲಿ ನಿನಗಿರುವ ಭಕ್ತಿಯು ಲೋಕಪ್ರಸಿ ವ್ಯವಾದುದು.ನಿನ್ನ ಭಕ್ತಿಗೆ ವಶನಾಗಿಯೇ ಆತನು ಕೃಷ್ಣರೂಪದಿಂದ ನಿನ ಗೆ ಪುತ್ರನಾಗಿ ಅವತರಿಸಿರುವನು ” ಎಂದರು. ಈಮಾತನ್ನು ಕೇಳಿದೊಡನೆ ವಸುದೇವನು, ಆಋಷಿಗಳ ಉಪದೇಶದಂತೆ ಪರಮಪುರುಷನನ್ನು ಯಜ್ಞಗ ಳಿಂದಾರಾಧಿಸಬೇಕೆಂದು ನಿಶ್ಚಯಿಸಿ, ಆ ಮಹರ್ಷಿಗಳಿಗೆ ನಮಸ್ಕರಿಸಿ,ಮುಂದೆ ತಾನು ನಡೆಸಬೇಕಾದ ಯಜ್ಞಗಳಿಗೆ ಆಮಹರ್ಷಿಗಳನ್ನೇ ಋತ್ವಕ್ಕುಗಳನ್ನಾ ಗಿರಬೇಕೆಂದು ಪ್ರಾರ್ಥಿಸಿಕೊಂಡನು. ಧಾರ್ಮಿಕೊತ್ಸಮನಾದ ಆ ವಸು. ದೇವನ ಪ್ರಾರ್ಥನೆಯಂತೆ ಆ ಋಷಿಗಳೆಲ್ಲರೂ ಅಲ್ಲಿಯೇ ನಿಂತು, ಅವನಿಂದ ಆ ಸ್ಯಮಂತಕವಂಚಕ ಕ್ಷೇತ್ರದಲ್ಲಿಯೇ, ಮಂತ್ರ, ತಂತ್ರ, ಪ್ರತ್ಯಾದಿ.. ಲೋಪಗಳಿಲ್ಲದೆ,ಶಾಸೊಕ್ಕವಾಗಿ ಯಜ್ಞಗಳನ್ನು ಮಾಡಿಸಿದರು. ವಸುದೇ ವನು ಯಜ್ಞದೀಕ್ಷೆಯನ್ನು ವಹಿಸಿ ಯಾಗವನ್ನು ಮಾಡುವ ಕಾಲದಲ್ಲಿ, ಸಮ ಸ್ವಯಾದವರೂ ಸ್ನಾನಮಾಡಿ, ವಸ್ತ್ರಪುಷ್ಪಾಭರಣಗಳಿಂದಲಂಕೃತರಾಗಿ ಆ ವನನ್ನ ನುವರ್ತಿಸುತ್ತಿದ್ದರು. ಆಗ ವಸುದೇವನ ಅಂತಃಪುರಸ್ತಿಯರು ಸ್ಯ ರ್ಣಾಭರಣಗಳಿಂದಲೂ, ಗಂಧಪುಷ್ಪವಸ್ಸಾದಿಗಳಿಂದಲೂ ಆಲಂಕೃತರಾಗಿ, ಕೈ ಕಾಣಿಕೆಗಳೊಡನೆ ದೀಕ್ಷಾಶಾಲೆಗೆ ಬಂದು ಸಿದ್ಧರಾಗಿದ್ದರು. ಮೃದಂಗ, ಪಟಹ, ಶಂಖ, ಭೇರಿ, ಆನಕ ಮೊದಲಾದ ಮಂಗಳವಾದ್ಯಗಳು ಮೊಳಗುತಿ ದ್ದುವು. ನಟನರ್ತಕಿಯರು ನರ್ತನಮಾಡುತ್ತಿದ್ದರು, ಪುರಾಣಪಠನಮಾಡ ತಕ್ಕ ಸೂತರೂ, ವಂಶಾವಳಿಯನ್ನು ಕೀರ್ತಿಸತಕ್ಕ ಮಾಗಧರೂ, ವಸುದೇ: