ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೦ ಶ್ರೀಮದ್ಭಾಗವತವು [ಅಧ್ಯಾ, ೨೪. ಹೇಳುವನು ( ಅಣ್ಣಾ ! ಪ್ರಾಣಿಗಳನ್ನೆಲ್ಲಾ ಈಶ್ವರನು,ಸ್ನೇಹವೆಂಬ ಒಂದಾ ನೊಂದು ದೃಢವಾದ ಪಾಶದಿಂದ ಬಿಗಿದಿರುವನು. ಎಂತಹ ಧೀರರಾದರೂ ಅದನ್ನು ಕಿತ್ತು ಹಾಕಲಾರರು. ದೇವತೆಗಳಿಗಾಗಲಿ, ಜ್ಞಾನಿಗಳಾದ ಯೋಗಿ ಗಳಿಗಾಗಲಿ, ಅದನ್ನು ಬಿಡಿಸಿಕೊಳ್ಳುವುದು ಸಾಧ್ಯವಲ್ಲವೆಂದೇ ನನಗೆ ತೋರುವುದು, ಈ ವಿಷಯದಲ್ಲಿ ಈಗ ನಿನ್ನನ್ನೇ ನಿದರ್ಶನವಾಗಿ ಹೇಳ ಬಹುದು, ಏಕೆಂದರೆ, ಹಿಂದೆ ನಿನ್ನಿಂದ ನಾನು ಎಣೆಯಿಲ್ಲದ ಉಪಕಾರವನ್ನು ಪಡೆದೆನು. ಆ ಉಪಕಾರಕ್ಕೆ ಇದುವರೆಗೆ ನಾನು ತಕ್ಕ ಪ್ರತ್ಯುಪಕಾರವನ್ನು ನಡೆಸಲಾರದೆ ಹೋದುದರಿಂದ, ನನ್ನನ್ನು ಉಪಕಾರಸ್ಮರಣೆಯಿಲ್ಲದ ಆಜ್ಞರ ಗುಂಪಿನಲ್ಲಿಯೇ ಸೇರಿಸಬೇಕಾಗಿರುವುದು, ಹೀಗೆ ನೀನು ಮಾಡಿದ ಉಪಕಾರವು ನಮ್ಮಲ್ಲಿ ನಿಷ್ಪಲವೇ ಆಗಿದ್ದರೂಡ, ಈಗಲೂ ನೀನು ನನ್ನ ↑ ಆ ಪೂJಸ್ನೇಹವನ್ನು ಬಿಡದಿರುವೆಯಲ್ಲವೆ ? ಇದರಿಂದಲೇ ಈಶ್ವರ ನಿರ್ಮಿತವಾದ ಸ್ನೇಹಪಾಶವು ಎಂದಿಗೂ ಬಿಟ್ಟು ಹೋಗತಕ್ಕುದಲ್ಲವೆಂದು ತೋರುವುದು, ಅಣ್ಣಾ ! ಮೊದಲು ನಾವು ಕಂಸನ ಬಾಧೆ ಯಲ್ಲಿ ಸಿಕ್ಕಿಬಿದ್ದಿ ಬ್ಲಾಗ, ನಿನಗೆ ಯಾವವಿಧವಾದ ಸಹಾಯವನ್ನೂ ಮಾಡಲಾರದಿದ್ದೆವು. ಈಗ ನಾವು ಮೊದಲಿನ ಸ್ಥಿತಿಗೆ ಬಂದಿದ್ದರೂ, ಆ ಐಶ್ವರಮದದಿಂದ ಕುರುಡರಾಗಿ, ಹಿಂದೆ ನೀನು ಮಾಡಿದ ಉಪಕಾರವನ್ನೇ ಮರೆತಂತೆ ಉದಾ ಸೀನರಾಗಿರುವೆವು.ಇದರಿಂದ ನನ್ನ ಮನಸ್ಸಿಗೆ ತೋರುವುದೇನೆಂದರೆ,ಶ್ರೇಯಃ ಕಾಂಕ್ಷಿಯಾದ ಪುರುಷನಿಗೆ, ಎಂದಿಗೂ ಈ ವಿಧವಾದ ರಾಜ್ಯಾಧಿಕಾರವುಂ ಟಾಗಬಾರದು. ಐಶ್ವರ ಮದದಿಂದ ಕೊಬ್ಬಿದವನು, ದೊಡ್ಡವರೆಂದೂ, ಬಂಧುಗಳೆಂದೂ, ಇಷ್ಟಮಿತ್ರರೆಂದೂ, ಸಾಧುಗಳೆಂದೂ, ನೋಡಲಾರನು” ಎಂದು ಹೇಳಿ, ಆ ವಸುದೇವನು, ಹಿಂದೆ ನಂದನು ತನಗೆ ಮಾಡಿದ ಉಪಕಾ ರವನ್ನು ಸ್ಮರಿಸಿಕೊಂಡು, ಧಾರೆಧಾರೆಯಾಗಿ ಕಣ್ಣೀರುಬಿಡುತ್ತ ಅಳುವುದ ಕ್ಕೂ ಆರಂಭಿಸಿದನು.ಆಗ ನಂದನು.ವಸುದೇವನಿಗೆ ನಾನಾವಿಧಸಮಾಧಾ ನೋಕ್ತಿಯನ್ನು ಹೇಳಿ, ದುಃಖಶಾಂತಿಯನ್ನು ಮಾಡಿದನು. ಆಮೇಲೆ ನಂದನು ತನ್ನ ಪರಿವಾರಗಳೊಡನೆ ಹೊರಡುವುದಕ್ಕೆ ಯತ್ನಿಸಿದಾಗಲೆಲ್ಲಾ -ವಸುದೇವನೇ ಮೊದಲಾದ ಯಾದವರೆಲ್ಲರೂ, ಈ ಹೊತ್ತು, ನಾಳೆ