ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೫ ] ದಶಮಸ್ಕಂಧವು. ೨೩೪೧ ನಾಡಿದ್ದು, ಎಂದು ನಿರ್ಬಂಧಿಸುತಿದ್ದುದರಿಂದಲೂ, ಬಲರಾಮಕೃಷ್ಣರಲ್ಲಿ ತನಗಿದ್ದ ಪ್ರೀತಿಯಿಂದಲೂ, ಅಲ್ಲಿಂದ ಬಿಟ್ಟು ಹೋಗಲಾರದೆ, ಮೂರು ತಿಂಗಳವರೆಗೆ ಅವರೊಡನೆಯೇ ವಾಸಮಾಡುತ್ತಿದ್ದನು. ಈ ಮೂರುತಿಂಗ ಳಾದಮೇಲೆ ವಸುದೇವನೂ, ಉಗ್ರಸೇನನೂ, ಬಲರಾಮಕೃಷ್ಣರೂ, ಉದ್ಯವನೂ, ತಮತಮಗೆ ತೋರಿದಂತೆ ವಸ್ತ್ರಾಭರಣಗಳನ್ನೂ, ಇನ್ನೂ ಬೇಕುಬೇಕಾದ ಅಮೂಲ್ಯ ವಸ್ತುಗಳನ್ನೂ ಕೊಟ್ಟು, ನಂದನನ್ನು ಸತ್ಕರಿಸಿದ ರು.ಆಮೇಲೆ ಅವನು ತನ್ನ ಪರಿವಾರಗಳೊಡನೆ ಗೋಕುಲಕ್ಕೆ ಪ್ರಯಾಣಮಾ ಡಿದನು. ಹೀಗೆ ನಂದನೂ, ಗೋಸಸ್ತೀಯರೂ, ಗೋಪಾಲಕರೂ, ಅಲ್ಲಿಂದ ಬಿಟ್ಟು ಬರುವಾಗ,ಆ ಶ್ರೀ ಕೃಷ್ಣನ ಪಾದಾರವಿಂದಗಳಲ್ಲಿ ನಟ್ಟ ಮನಸ್ಸನ್ನು ತಿರುಗಿಸಲಾರದೆ, ಅನವರತವೂ ಅವನನ್ನೇ ಚಿಂತಿಸುತ್ತ, ದಾರಿಯುದ್ದಕ್ಕೂ ಆ ಕೃಷ್ಣನ ಗುಣಗಳನ್ನೇ ಕೊಂಡಾಡುತ್ತ, ಮಧುರೆಯ ಕಡೆಗೆ ಬಂದರು. ಹೀಗೆ ಯಜ್ಞಾರ್ಥವಾಗಿ ಬಂದಿದ್ದ ವಸುದೇವನ ಬಂಧುಗಳೆಲ್ಲರೂ ಅವರವರ ಸ್ಥಾನಗಳಿಗೆ ಹಿಂತಿರುಗಿದಮೇಲೆ, ಕೃಷ್ಣನನ್ನೇ ಪರದೈವವೆಂದು ನಂಬಿ ಅವನ ಆಶ್ರಯದಲ್ಲಿದ್ದ ವೃಷ್ಟಿಗಳೆಲ್ಲರೂ, ಮಳೆಗಾಲವು ಸಮೀಪಿಸಿದುದನ್ನು ನೋಡಿ ದ್ವಾರಕಾಪುರಿಗೆ ಹಿಂತಿರುಗಿ ಬಂದು, ಅಲ್ಲಿದ್ದ ಜನರೆಲ್ಲರಿಗೂ, ಆ ತೀರ್ಥಯಾತ್ರೆಯ ಮಹಿಮೆಯನ್ನೂ , ವಸುದೇವನು ಅಲ್ಲಿ ನಡೆಸಿದ ಯಜ್ಞದ ವೈಭವವನ್ನೂ , ತಾವು ಅಲ್ಲಿ ಬಹುಕಾಲದಿಂದಗಲಿದ್ದ ಇಷ್ಟಮಿತ್ರ ಬಂಧುಗಳ ಸಮಾಗಮದಿಂದ ಸಂತೋಷಿಸಿದುದನ್ನೂ, ಹೇಳಿಹೇಳಿ ಕೊಂ ರಾಡುತಿದ್ದರು. ಇದು ಎಂಬತ್ತು ನಾಲ್ಕನೆಯ ಅಧ್ಯಾಯವು. { ವಸುದೇವನು ಶ್ರೀ ಕೃಷ್ಣನ ಯಾಧಾತ್ಮವನ್ನು | ವರ್ಣಿಸಿದುದು. ಓ ಪರೀಕ್ಷಿದ್ರಾಜಾ ! ಅದರಿಂದಾಚೆಗೆ, ಒಮ್ಮೆ ಬಲರಾಮಕೃಷ್ಣ ರಿಬ್ಬರೂ ತಂದೆಯಾದ ವಸುದೇವನ ಬಳಿಗೆ ಬಂದು, ಅವನಿಗೆ ಪಾದಾಭಿ ವಂದನವನ್ನು ಮಾಡಿದರು. ವಸುದೇವನು ತನ್ನ ಕುಮಾರರಿಬ್ಬರನ್ನೂ ಪ್ರೀತಿಯಿಂದಾಲಿಂಗಿಸಿ ಮನ್ನಿಸಿದನು. ಶ್ರೀ ಕೃಷ್ಣನನ್ನು ನೋಡಿದೊಡನೆ