ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೨ ಶ್ರೀಮದ್ಭಾಗವತವು [ಅಧ್ಯಾ, ೮೫ವಸುದೇವನಿಗೆ, ಹಿಂದೆ ಸ್ಯಮಂತಕ್ಷೇತ್ರದಲ್ಲಿ ಮಹರ್ಷಿಗಳು ತನಗೆ ಸೂಚಿಸಿದ್ದ ರಾಮಕೃಷ್ಣರ ಪ್ರಭಾವವು ನೆನಪಿಗೆ ಬಂದಿತು.ಆ ಮಹರ್ಷಿಗಳ ಮಾತಿನಿಂದ ಅವನಿಗೆ ತನ್ನ ಮಕ್ಕಳು ಮಹಾಪ್ರಭಾವವುಳ್ಳವರೆಂಬ ನಂಬಿಕೆ ಹುಟ್ಟಿತು, ಆಗೆ ವಸುದೇವನು ಆ ಪತ್ರರಿಬ್ಬರನ್ನೂ ಕುರಿತು ಹೀಗೆಂದು ಹೇಳುವನು. ಕೃಷ್ಣಾ ! ಕೃಷ್ಣಾ! ನಿನ್ನ ಯಾಥಾತ್ಮವು ಈಗೀಗಲೇ ನನಗೆ ತಿಳಿಯುತ್ತಿರುವುದು. ನೀನು ಯೋಗೀಶ್ವರರಿಗೆಲ್ಲಾ ಈಶ್ವರನೆನಿಸಿರುವೆ. ಓ ಬಲರಾಮಾ ! ಪುರಾಣಪುರುಷನಾದ ಸಂಕರ್ಷಣನೇ ನೀನು' ನೀವಿಬ್ಬರೂ ಈ ಜಗತ್ತಿಗೆಲ್ಲಾ ಕಾರಣಭೂತವಾದ ಸಾಕ್ಷಾತ್ಪಕೃತಿಪುರುಷಶರೀರಕ ರೆಂಬುದನ್ನೂ , ಅವೆರಡಕ್ಕೂ ವಿಲಕ್ಷಣವೆನಿಸಿದ ಪರಮಾತ್ಮಸ್ವರೂಪರೆಂಬು ದನ್ನೂ ನಾನು ತಿಳಿದೆನು, ಈ ಪ್ರಪಂಚದಲ್ಲಿ, “ಎಲ್ಲಿ,ಯಾವಾಗ, ಯಾವುದ ರಿಂದ, ಯಾವುದರಮೂಲಕವಾಗಿ, ಯಾವಕಾರಣಕ್ಕಾಗಿ, ಯಾವುದರ ಸಂಬಂಧವುಳ್ಳ ಯಾವಯಾವ ವಸ್ತುವು, ಹೇಗೆ ಹುಟ್ಟಿರುವುದೋ, ಅವೆ ಲ್ಲವೂ, ಪ್ರಕೃತಿಪುರುಷೇಶ್ವರರೆನಿಸಿಕೊಂಡ ನೀವೇಹೊರತು ಬೇರೆಯಲ್ಲ ! ಓ ಅಧೋಕ್ಷಜಾ ! ಪರಮಾತ್ಮಸ್ವರೂಪಾ ! ಹೀಗೆ ನಿನ್ನಿಂದ ಸೃಷ್ಟಿಸಲ್ಪಟ್ಟ ನಾನಾವಿಧವಾದ ಪ್ರಪಂಚದಲ್ಲಿ, ನಿನಗೆ ಶರೀರಭೂತವಾದ ಜೀವನೊಡನೆ ನೀನೂ ಪ್ರವೇಶಿಸಿ, ಅವುಗಳನ್ನು ರಕ್ಷಿಸುತ್ತಿರುವೆ ! ಅದರೊಳಗಣ ಪ್ರಾಣ ಜೀವಗಳೆರಡೂ ನಿನಗೆ ಶರೀರವೆನಿಸಿದ್ದರೂ,ಆ ಶರೀರಗತವಾದ ದೋಷಗಳಿಗಾ ಗಲಿ,ವಿಕಾರಗಳಿಗಾಗಲಿ ನೀನು' ಈಡಾಗತಕ್ಕವನಲ್ಲ! ಸೃಷ್ಟಿ ಸಾಧನಗಳಾದ ಪ್ರಾಣಗಳು, ಪಂಚಭೂತಗಳು, ಏಕಾದಶೇಂದ್ರಿಯಗಳು, ಮಹದಹಂಕಾರ ತತ್ವಗಳು, ಇವೆಲ್ಲಕ್ಕೂ ಸೃಷ್ಟಿ ಕಾರೊಪಯುಕ್ತಗಳಾದ ಯಾವಯಾವ ಶಕ್ತಿಗಳುಂಟೋ, ಅವೆಲ್ಲವೂ ಅಂತರಾತ್ಮನಾದ ನಿನ್ನ ಶಕ್ತಿಗಳೇ ! ಏಕೆಂದರೆ ಆ ಪ್ರಾಣಾದಿಗಳೆಲ್ಲವೂ ಅಸ್ವತಂತ್ರಗಳು ! ಅವುಗಳಲ್ಲಿ ಒಂದೊಂದಕ್ಕೆ ಒಂದೊಂದು ಶಕ್ತಿಯುಮಾತ್ರ ನಿನ್ನಿಂದ ನಿಯಮಿತವಾಗಿರುವುದು, ಆ ಜೀವ ಪ್ರಾಣಗಳಲ್ಲಿ ಒಂದರ ಕಾಠ್ಯವನ್ನು ಮತ್ತೊಂದು ನಡೆಸಲಾರದು. ಹೀಗೆ ಅವುಗಳ ಶಕ್ತಿಯಲ್ಲಿಯೆ ಒಂದಕ್ಕೊಂದಕ್ಕೆ ಹೊಂದಿಕೆಯಿಲ್ಲದಿರುವಾಗ,

  • ಇಲ್ಲಿ ಅಧಿಕರಣ ಮೊದಲಾದ ಕಾರಕಗಳೆಲ್ಲವೂ ನೀನೇ ಎಂದು ಭಾವವು.