ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೭ ಅಧ್ಯಾ, ೫೨.] ದಶಮಸ್ಕಂಧವು. ತೋರಿಸಿದರೂ, ಅವರ ಬುದ್ಧಿಯು ಕದಲಲಾರದು.ಹಾಗಿಲ್ಲದೆ ಯಾರ ಮನಸ್ಸಿ ನಲ್ಲಿ ಭಕ್ತಿಯು ಪರಿಪಕ್ವವಾಗಿರುವುದಿಲ್ಲವೋ, ಅಂತವರುಪ್ರಾಣಾಯಾಮವೇ ಮೊದಲಾದ ಉಪಾಯಗಳಿಂದ ಮನಸ್ಸನ್ನು ನಿಗ್ರಹಿಸುತ್ತಿದ್ದರೂ ಕರ್ಮವಾ ಸನೆಯೆಂಬುದು ಅವರನ್ನು ಅಂಟಿಬರುತ್ತಿರುವುದರಿಂದ,ಎಂದಾದರೂ ಒಮ್ಮೆ ಅವರಿಗೆ ವಿಷಯಾಭಿಲಾಷೆಯಲ್ಲಿ ಬುದ್ದಿ ಹುಟ್ಟದಿರಲಾರದು, ಓರಾಜೇಂದ್ರಾ! ನಿನಗೆ ನನ್ನಲ್ಲಿ ಈಗಾಗಲೇ ದೃಢವಾದ ಭಕ್ತಿಯು ಅಂಕುರಿಸಿರುವುದು, ಎಂ ದೆಂದಿಗೂ ಅದು ನಿನಗೆ ಸ್ಥಿರವಾಗಿರುವಂತೆ ಅನುಗ್ರಹಿಸುವೆನು, ನೀನು ಯಾ ವಾಗಲೂ ನನ್ನಲ್ಲಿಯೇ ನವ್ಯ ಮನಸ್ಸುಳ್ಳವನಾಗಿ,ಯಥೇಚ್ಛವಾಗಿ ಭೂಮಿಯ ನ್ನು ಸಂಚರಿಸುತ್ತಿರು! ಭಕ್ತಿಯೊಂದಕ್ಕೆ ಸುಲಭವಾಗಿ ವಶನಾಗತಕ್ಕ ನಾ ನು, ಈಗ ನಿನಗೆ ಸುಲಭವಾಗಿ ಪ್ರತ್ಯಕ್ಷನಾಗಿದ್ದರೂ, ಈಗಲೇ ನಿನಗೆ ಮೋ ಕ್ಷವನ್ನೇಕೆ ಕೊಡಬಾರದೆಂದು ನೀನು ಶಂಕಿಸಬಹುದು, ಹಿಂದೆ ನೀನು ಬಹು ಕಾಲದವರೆಗೆ ಕ್ಷತ್ರಧರ್ಮದಲ್ಲಿದ್ದು, ಬೇಟೆ ಮೊದಲಾದುವುಗಳಿಂದ ಅನೇಕ ಪ್ರಾಣಿಗಳನ್ನು ಸಂಹರಿಸಿರುವೆ- ಆದುದರಿಂದ ಆ ಪಾಪನಿವೃತ್ತಿಗಾಗಿ ನೀನು ಇನ್ನೂ ಕೆಲವು ಕಾಲದವರೆಗೆ ನನ್ನಲ್ಲಿ ಭಕ್ತಿನಿಷ್ಟನಾಗಿ, ಭೂಸಂ ಚಾರವನ್ನು ಮಾಡುತ್ತಿರಬೇಕು, ಮುಂದಿನ ಜನ್ಮದಲ್ಲಿ ನೀನು ಬ್ರಾಹ್ಮಣ ಜನ್ಮವನ್ನು ಹೊಂದಿ, ಸತ್ವಭೂತದಯಾಪರನಾಗಿ, ಸಮಸ್ತ ಜಗತ್ತನ್ನೂ ಬ್ರ ಹ್ಮಸ್ವರೂಪದಿಂದಲೇ ತಿಳಿಯತಕ್ಕ ಜ್ಞಾನದೃಷ್ಟಿಯುಳ್ಳವನಾಗುವೆ. ಅದಕ್ಕೆ ಮೇಲೆ ನೀನು ಪ್ರಕೃತಿಮಂಡಲಕ್ಕಿಂತಲೂ ಆಚೆಗಿರುವ ನನ್ನ ಸಾನ್ನಿಧ್ಯ ವನ್ನು ಸೇರಬಹುದು.” ಎಂದನು. ಇದು ಐವತ್ತೊಂದನೆಯ ಅಧ್ಯಾಯವು. ++ ರುಶ್ಮಿಣೀ ಕಲ್ಯಾಣ ವೃತ್ತಾಂತವು. ww ಹೀಗೆ ಕೃಷ್ಣನಿಂದ ಅನುಗ್ರಹಿಸಲ್ಪಟ್ಟ ಮುಚುಕುಂದನು, ಸಂತೋ ಷದಿಂದ ಅವನಿಗೆ ಪ್ರದಕ್ಷಿಣನಮಸ್ಕಾರಗಳನ್ನು ಮಾಡಿ, ತಾನು ಬಹುಕಾಲ ದಿಂದ ಮಲಗಿದ್ದ ಗುಹೆಯನ್ನು ಬಿಟ್ಟು ಹೊರಟನು. ಹೊರಗೆ ಬಂದು ಪ್ರಪಂಚದ ಸ್ಥಿತಿಯನ್ನು ನೋಡಿದಾಗ, ಆಗಿದ್ದ ಮನುಷ್ಯವರ್ಗವೂ, ಪಶು ಪಕ್ಷಿಮೃಗಾದಿಗಳೂ, ಗಿಡುಬಳ್ಳಿಗಳೂ, ತಾನು ಹಿಂದೆ ನೋಡಿದಂತಿಲ್ಲದೆ,