ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೮ ಶ್ರೀಮದ್ಭಾಗವತವು [ಅಧ್ಯಾ ೫೨. ಬಹಳಕೃಶವಾಗಿ, ಅಲ್ಪ ಪ್ರಮಾಣದಿಂದಿರುವುದನ್ನು ಕಂಡು, ಭೂಲೋಕ ದಲ್ಲಿ ಕಲಿಯುಗವು ಕಲೆಯೆತ್ತಿತೆಂದು ತಿಳಿದು, ಅಲ್ಲಿ ನಿಲ್ಲದೆ ಉತ್ತರಾಭಿಮುಖ ವಾಗಿ ಹೊರಟನು. ತಪಸ್ಸಿನಲ್ಲಿ ದೃಢಮನಸ್ಸುಳ್ಳವನಾಗಿ,ಇಂದ್ರಿಯಗಳನ್ನು ಜಯಿಸಿ, ಮನಸ್ಸಿನಲ್ಲಿರುವ ಕಲ್ಮಷಗಳನ್ನು ನೀಗಿ, ತಪಸ್ಸಿದ್ಧಿಯವಿಷಯಲ್ಲಿ ತನಗಿದ್ದ ಸಂದೇಹವನ್ನು ಬಿಟ್ಟು, ಕೃಷ್ಣನಲ್ಲಿಯೇ ನಟ್ಟ ಮನಸ್ಸುಳ್ಳವನಾಗಿ ಗಂಧಮಾದನಪಲ್ವತವನ್ನು ಪ್ರವೇಶಿಸಿದನು, ಅಲ್ಲಿ ನರನಾರಾಯಣರ ಸಾನ್ನಿಧ್ಯವುಳ್ಳ ಬದರಿಕಾಶ್ರಮವನ್ನು ಸೇರಿ, ಸುಖದುಃಖಾದಿದ್ವಂದ್ವಗ ಇನ್ನು ಜಯಿಸಿ, ತಪಸ್ಸಿನಿಂದ ಶ್ರೀವಿಷ್ಣುವನ್ನಾ ರಾಥಿಸುತಿದ್ದನು. ಇತ್ತಲಾಗಿ ಶ್ರೀಕೃಷ್ಣನೂಕೂಡ ಮುಚುಕುಂದನನ್ನ ಅನುಗ್ರಹಿಸಿದ ಮೇಲೆ ಮಧುರಾಪುರಿಗೆ ಬಂದನು, ಇಷ್ಟರಲ್ಲಿ ಮಧುರೆಯೆಲ್ಲವೂ ಮೃಚ್ಛಸೈನ್ಯದಿಂದ ಆಕ್ರಮಿಸಲ್ಪಟ್ಟಿದ್ದಿತು. ಆ ಮೇಚ್ಛಸೈನ್ಯ ವೆಲ್ಲವನ್ನೂ ಕೊಂದು, ಅವರು ಸಂಗ್ರಹಿಸಿಟ್ಟಿದ್ದ ದ್ರವ್ಯಗಳೆಲ್ಲವನ್ನೂ ಅಲ್ಲಿಂದ ದ್ವಾರಕೆಗೆ ಸಾಗಿಸುತ್ತಿದ್ದನು. ಹೀಗೆ ಕೃಷ್ಣನು ಎತ್ತುಗಳಮೇಲೆ ಯೂ, ಮನುಷ್ಯರಮೇಲೆಯೂ ದ್ರವ್ಯರಾಶಿಯನ್ನು ಸಾಗಿಸುತ್ತಿರುವಷ್ಟರಲ್ಲಿ, ಜರಾಸಂಧನು ಹದಿನೆಂಟನೆಯಸಾರಿಯೂ ಯುದ್ಧಕ್ಕಾಗಿ, ಇಪ್ಪತ್ತು ಮೂರು ಅಕ್ಷೆಹಿಣೀಸೈನ್ಯಗಳೊಡನೆ ಬಂದು ಇದಿರಿಸಿದನು. ಹೀಗೆ ಜರಾಸಂಧನು ಅತ್ಯಾಕ್ರೋಶದಿಂದ ಮೊದಲಿಗಿಂತಲೂ ಪ್ರಬಲವಾದ ದೊಡ್ಡ ಸೈನ್ಯ ದೊಡನೆ ಬರುತ್ತಿರುವುದನ್ನು ನೋಡಿ, ರಾಮಕೃಷ್ಣರಿಬ್ಬರೂ ತಾವು ಶಕ್ತರಾಗಿದ್ದರೂ, ಮನುಷ್ಯಲೀಲೆಯನ್ನು ತೋರಿಸುವುದಕ್ಕಾಗಿ, ಅವನಿಗೆ ಭಯಪಟ್ಟಂತೆ ನಟಿಸಿ, ತಾವು ಸಾಗಿಸುತ್ತಿದ್ದ ದ್ರವ್ಯರಾಶಿಯೆಲ್ಲವನ್ನೂ ಅಲ್ಲಲ್ಲಿ ಯೇ ಬಿಸುಟು, ಕಾಲ್ನ ಡೆಯಿಂದಲೇ ಬಹುಯೋಜನಗಳವರೆಗೆ ಪಲಾಯನ ಮಾಡಿದರು. ಮೂಢನಾದ ಜರಾಸಂಧನಾದರೆ ಅವರ ನಿಜಸ್ಥಿತಿಯನ್ನು ತಿಳಿಯದೆ, ನಿಜವಾಗಿ ಅವರು ತನಗೆ ಭಯಪಟ್ಟು ಪಲಾಯನಮಾಡುವರೆಂದೇ ನಿಶ್ಚಯಿಸಿ, ಅವರನ್ನು ಹಾಸ್ಯಮಾಡಿ ನಗುತ್ತ, ಸೇನಾಸಹಿತನಾಗಿ ಅವರನ್ನು ಬಹುದೂರದವರೆಗೆ ಬೆನ್ನಟ್ಟಿ ಹೋದನು. ರಾಮಕೃಷ್ಣರೂಕೂಡ ಬಹು ದೂರದವರೆಗೆ ಅಲೆದು ಆಯಾಸಪಟ್ಟಂತೆ ನಟಿಸುತ್ತ, ಪ್ರವರ್ಷವೆಂಬ