ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೪೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಥ್ಯಾ. ೯೦.] ದಶಮಸ್ಕಂಧವು. ೨೪o೧ ತಂದುಬಿಡು ! ಆದರೆ ಯಾವತ್ತು ನಮ್ಮೆಲ್ಲರನ್ನೂ ವಂಚಿಸಿ, ತಾನೊಬ್ಬಳೇ ಆತನ ಸಹವಾಸಸುಖವನ್ನನುಭವಿಸುತ್ತಿರುವಳೋ, ಅ ಲಕ್ಷೆಗೆ ತಿಳಿಸದೆ: ಅವನನ್ನು ಮಾತ್ರ ಕರೆತರಬೇಕು, ಯಾವಾಗಲೂ ಅವನಿಗೆ ನಿತ್ಯಾನಪಾಯಿ ನಿಯಾಗಿ, ಅವನಲ್ಲಿ ಏಕನಿಷ್ಠೆಯಿಂದಿರುತ್ತಿರುವ ಆಕೆಯನ್ನು ವಂಚಿಸಿ ಕರೆ ತರುವುದು ಸಾಧ್ಯವೆ ?” ಎಂದು ನೀನು • ತಿಳಿಯಬೇಡ ! ಅವಳಿಗೆ ಮಾತ್ರ ಆ ಕೃಷ್ಣನಲ್ಲಿ ಏಕನಿಷ್ಠೆಯಿರುವುದೇನು"? ನಮಗಿಲ್ಲದುದೇನು ?” ಎಂದಳು. ಓ ಪರೀಕ್ಷಿದ್ರಾಜಾ ! ಹೀಗೆ ಆ ಕೃಷ್ಣಪತ್ನಿ ಯರೆಲ್ಲರೂ, 'ಯೋಗೇಶ್ವ ರೇಶ್ವರನಾದ ಆ ಭಗವಂತನಲ್ಲಿ ಅಸಾಧಾರಣಭಕ್ತಿಯನ್ನು ತೋರಿಸುತ್ತ, ಅದರಿಂದ ಕೃಷ್ಣಗತಿ (ಮುಕ್ತಿ) ಯನ್ನೂ ಹೊಂದಿದರು. ಒಂದಾವರ್ತಿ ಕಿವಿಯಿಂದ ಕೇಳಿದರೂ, ಬಾಯಿಂದ ನುಡಿದರೂ, ಶ್ರೀಕೃಷ್ಣನ ಗುಣಗಳು ಸ್ತ್ರೀಯರ ಮನಸ್ಸನ್ನು ಬಲವಾಗಿ ಆಕರ್ಷಿಸುವುವು. ಹೀಗಿರುವಾಗ ಅವನ ಲೀಲೆಗಳನ್ನು ಪ್ರತ್ಯಕ್ಷವಾಗಿ ಕಂಡನುಭವಿಸಿದ ಆ ರಾಜಕಫೈಯರ ಮನಸ್ಸು ಅವನ ವಿಷಯದಲ್ಲಿ ಆಕರ್ಷಿಸಲ್ಪಡುವುದೇನಾಶ್ಚ ಕ್ಯವು ? ತ್ರೈಲೋಕ್ಯ. ಪತಿಯಾದ ಆ ಕೃಷ್ಣನನ್ನು ತನ್ನ ಪತಿಯೆಂದು ಭಾವಿಸಿ, ಅವನ ಕಲೆ ಇುವುದೇ ಮೊದಲಾದ ಪರಿಚರೈಗಳಿಂದ ಅವನ ಸೇವೆಮಾಡುತಿದ್ದ ಆಸ್ತಿ ಯರ ತಪೋವಿಶೇಷವನ್ನು ಎಂದು ಹೇಳಬಹುದು ? ಸಜ್ಜನರಿಗೆ ತಾನೇ ಮುಖ್ಯಗತಿಯೆನಿಸಿಕೊಂಡ ಕೃಷ್ಣನು, ವೇದೋಕ್ತವಾದ ಕರಗಳನ್ನು ಯಧಾವಿಥಿಯಾಗಿ ಅನುಷ್ಠಿಸುತ್ಯ, ಧಾರಕಾಮಗಳಿಗೆ ಗೃಹಸ್ಥಾಶ್ರಮ ವೇ ಉತ್ತಮಸ್ಥಾನವೆಂಬದನ ಲೋಕಕ್ಕೆ ತೋರಿಸುತ್ತಿದ್ದನು. ಶ್ರೀ ಕೃಷ್ಣನು ಗೃಹಧನ್ಯದಲ್ಲಿದ್ದಾಗ, ಅವನಿಗೆ ಹದಿನಾರುಸಾವಿರದ ಎಂಟುನೂ ರುಮಂದಿ ಪತ್ರಿ ಯರಿದ್ದರು.ಅವರಲ್ಲಿ ಹಿಂದೆ ಹೇಳಿದಂತೆ ರುಕ್ಕಿಣಿ ಮೊದಲಾ ದ ಆಷ್ಟಮಹಿಷಿಯರು ಪ್ರಧಾನಭೂತರೆನಿಸಿಕೊಂಡಿದ್ದರು. ಈ ಸಮಸ್ಯ ಪತ್ನಿ ಯರಲ್ಲಿಯೂ ಒಬ್ಬೊಬ್ಬಳಿಗೆ ಹತ್ತು ಮಂದಿ ಪುತ್ರರಂತೆ ಜನಿಸಿದರು. ಈ ಮಕ್ಕಳೆಲ್ಲರೂ ಉದ್ಘಾಮವೀರವುಳ್ಳವರೆಂಬ ಪ್ರಖ್ಯಾತಿಹೊಂದಿದರು. ಅದರಲ್ಲಿ ಹದಿನೆಂಟುಮಂದಿಕುಮಾರರು ಮಹಾರಥರೆನಿಸಿಕೊಂಡು, ಲೋಕ