ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೪೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೨೪೦೨ ಶ್ರೀಮದ್ಭಾಗವತವು [ಅಧ್ಯಾ, ೯೦. ವಿಖ್ಯಾತವಾದ ಯಶಸ್ಸಿಗೆ ಭಾಗಿಗಳಾದರು. ಪ್ರದ್ಯುಮ್ನ ,ಅನಿರುದ್ಧ, ದೀಪ್ತಿ ಮಂತ, ಭಾನು, ಸಾಂಬ, ಮಧು,ಬೃಹದ್ಭಾನು,ಚಿತ್ರಭಾನು,ವೃಕ, ಆರುಣ, ಪುಷ್ಕರ, ದೇವಬಾಹು,ಶ್ರುತದೇವ, ಸುನಂದನ, ಚಿತ್ರಬಾಹು, ವಿರೂಪ,ಕಲಿ, .ನ್ಯಗೊಧರೆಂದು ಅವರಿಗೆ ಹೆಸರು, ಕಂಸವಧಕ್ಕೆ, ಮೊದಲು ಕೃಷ್ಣನಿಗೆ ಗಂಧವನ್ನೊಪ್ಪಿಸಿ, ಅವನನ್ನು ಮೋಹಿಸಿದ ತ್ರಿವಯೆಂಬ ಕುಬೈಯಲ್ಲಿ, ಉ ಪಕೊ ಶನೆಂಬ ಪುತ್ರನಾದನು.ಇವನು ನಾರದಮುನಿಗೆ ಪ್ರಿಯಶಿಷ್ಯನಾಗಿ ದ್ವು.ಕೃಷ್ಣನಿಗೆ ಅಭಿನ್ನ ಭಕ್ತನಾಗಿ, ತನ್ನ ಮನಸ್ಸನ್ನು ಆ ಭಗವತ್ಸಮಾಧಿ ಯಲ್ಲಿಯೇ ನೆಲೆಗೊಳಿಸಿದನು, ಈತನೇ ಪಾಂಚರಾತ್ರದಲ್ಲಿ ಸಾತ್ವತತಂತ್ರವ ನ್ನು ನಿಶ್ಚಯಿಸಿದವನು. ಆ ಸಾತ್ವತಸಂಹಿತೆಯನ್ನು ಅಧ್ಯಯನಮಾಡಿದವರು ತಪ್ಪದೆ ಮುಕ್ತಿಯನ್ನು ಹೊಂದುವರು.ಆಸಾತ್ವತಸಂಹಿತೆಯಲ್ಲಿಯೇ ವೇದಾಥಿ ಕಾರವಿಲ್ಲದ ಸ್ತ್ರೀಯರಿಗೂ,ಶೂದ್ರರಿಗೂ,ದಾಸರಿಗೂ, ತಾಪಪುಂಡ್ರಾದಿ ವೈ ವ್ಯವಸಂಸ್ಕಾರಗಳು ವಿಧಿಸಲ್ಪಟ್ಟಿರುವುವು, ಕೃಷ್ಣನಿಗೆ ಜನಿಸಿದ ಅನೇಕ ಮಂದಿಪುತ್ರರಲ್ಲಿ, ರುಕ್ಕಿಣಿಯ ಪ್ರಥಮಪುತ್ರನಾದ ಪ್ರದ್ಯುಮ್ನನು, ರೂ `ಪದಲ್ಲಿಯೂ, ಪರಾಕ್ರಮದಲ್ಲಿಯೂ ತನ್ನ ತಂದೆಯಾದ ಕೃಷ್ಣನಿಗೆ ಸಾಟಿ ಯೆನಿಸಿಕೊಂಡಿದ್ದನು. ಈತನು ರುಕ್ಕಿಯ ಮಗಳನ್ನು ಮದುವೆಯಾಗಿ,ಅವಳಲ್ಲಿ ಸಾವಿರಾನೆಗಳ ಬಲವುಳ್ಳ ಅನಿರುದ್ಧನೆಂಬ ಪತ್ರವನ್ನು ಪಡೆದು ಈ ಅನಿ `ರುದ್ಯನು ರುಕ್ಕಿಯ ಪೌತ್ರಿಯನ್ನು (ಮಗನ ಮಗಳನ್ನು ) ವಿವಾಹಮಾಡಿ ಕೊಂಡು, ವಜ್ರನೆಂಬ ಮಗನನ್ನು ಪಡೆದನು. ಮೌಸಲ ಶಾಪದಿಂದುಂಟಾದ ಯಾದವಕುಲಕ್ಷಯದಲ್ಲಿ, ಇವನೊಬ್ಬನೇ ಕೃಷ್ಣಾನುಗ್ರಹದಿಂದ ಬದುಕಿ ದವನು, ಇವನಿಗೆ ಪ್ರತಿಬಾಹುವೆಂಬ ಮಗನಾದನು, ಹಾಗೆಯೇ ವಂಶಾನು ಕ್ರಮವಾಗಿ ಪ್ರತಿಬಾಹುವಿನಿಂದ ಸುಬಾಹುವೂ, ಅವನಿಂದ ಧರಸೇನನೂ,ಅ ವನಿಂದ ಶ್ರುತಸೇನನೂ ಜನಿಸಿದರು.ಓ ಪರೀಕ್ಷಿದ್ರಾಜಾ! ಹೀಗೆ ಯಾದವಕು ಲವು ಅನಂತವಾಗಿ ವಿಸ್ತರಿಸಿದ್ದರೂ, ಅದರಲ್ಲಿ ಬಡವನಾಗಲಿ, ಸಂತಾನ ಸಮೃದ್ಧಿಯಿಲ್ಲದವನಾಗಲಿ, ಅಲ್ಪಾಯುಸ್ಸಿನಿಂದ ಸತ್ತವನಾಗಲಿ, ಅಲ್ಪ ವೀರವುಳ್ಳವನಾಗಲಿ, ಬ್ರಾಹ್ಮಣಪ್ರಿಯನಲ್ಲದವನಾಗಲಿ ಒಬ್ಬನಾದರೂ 'ಇರಲಿಲ್ಲ. ಈ ಯಾದವವಂಶದಲ್ಲಿ ಹುಟ್ಟಿ, ವೀರಕಾರೈಗಳಿಂದ ಪ್ರಖ್ಯಾತಿ