ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಥ್ಯಾ, ೫೨] ದಶಮಸ್ಕಂಧನ, ೨೧೦೯ ಒಂದಾನೊಂದು ಬೆಟ್ಟವನ್ನು ಹತ್ತಿದರು. ರಾಜೇಂದ್ರಾ ! ಆ ಪಕ್ವತದ ಮೇಲೆ ಪರ್ಜನ್ಯದೇವನು ಯಾವಾಗಲೂ ಮಳೆಯನ್ನು ಕರೆಯುತ್ತಿರುವುದ ರಿಂದ ಅದು ಯಾವಾಗಲೂ ಸಸ್ಯಸಮೃದ್ಧವಾಗಿರುವುದು, ಹೀಗೆ ರಾಮ ಕೃಷ್ಣರು ಆ ಪಕ್ವತದಮೇಲೆ ಹತ್ತಿದುದನ್ನು ನೋಡಿದೊಡನೆ,ಜರಾಸಂಧನು ಅದರ ಬುಡದಲ್ಲಿ ನಿಂತು, 'ಆಪರೈತದ ಸುತ್ತಲೂ ಕಟ್ಟಿಗೆಗಳನ್ನಿಟ್ಟು, ಬೆಂಕಿ ಯನ್ನು ಹತ್ತಿಸಿದನು, ಆ ಪಕ್ವತವು ಹತ್ತಿಕೊಂಡು ಉರಿಯುತ್ತಿರುವಾಗಲೇ ರಾಮಕೃಷ್ಣರಿಬ್ಬರೂ ಅದರ ಶಿಖರದಿಂದ ಒಂದೇನೆಗೆತಕ್ಕೆ ಹನ್ನೊಂದು ಯೋಜನಗಳದೂರಕ್ಕೆ ಹಾರಿ, ಜರಾಸಂಧನ ಕಣ್ಣಿಗೆ ಬೀಳದಹಾಗೆಯೇ ಸ್ಥಲಮಾರ್ಗವಾಗಿ ಹೊರಟು, ಸಮುದ್ರಮಧ್ಯದಲ್ಲಿರುವ ದ್ವಾರ ಕಾಪುರಕ್ಕೆ ಬಂದುಸೇರಿದರು. ಇತ್ತಲಾಗಿ ಜರಾಸಂಧನು, ಆ ಪಕ್ವತ ವನ್ನು ಸಂಪೂರ್ಣವಾಗಿ ಸುಟ್ಟಮೇಲೆ, ರಾಮಕೃಷ್ಣರಿಬ್ಬರೂ ಅದರಲ್ಲಿ ದಗ್ಧರಾಗಿರಬೇಕೆಂದೇ ನಿಶ್ಚಯಿಸಿಕೊಂಡು, ತನ್ನ ಸೈನ್ಯದೊಡನೆ ಮಗಧ ದೇಶಕ್ಕೆ ಹಿಂತಿರುಗಿ ಹೊರಟುಹೋದನು. ಓ ಪರೀಕ್ಷಿದ್ರಾಜಾ ! ಆನರ್ತ ದೇಶಕ್ಕೆ ದೂರೆಯಾದ ರೈವತನೆಂಬ ರಾಜನು, ಬ್ರಹ್ಮನ ಪ್ರೇರಣೆಯಿಂದ ರೇ ವತಿಯೆಂಬ ತನ್ನ ಮಗಳನ್ನು ಬಲರಾಮನಿಗೆ ಕೊಟ್ಟು, ಮದಿವೆಮಾಡಿದುದಾಗಿ ನಿನಗೆ ನಾನು ಹಿಂದೆಯೇ (ನಮಸ್ಕಂಧದಲ್ಲಿ) ತಿಳಿಸಿರುವೆನಷ್ಟೆ? ಶ್ರೀ ಕೃಷ್ಣ ಪರಮಾತ್ಮನೂಕೂಡ, ಲಕ್ಷ್ಮಿಯ ಅಂಶಭೂತೆಯಾಗಿ, ಭೀಷ್ಟಕನ ಮಗಳೆನಿ ಸಿಕೊಂಡ ರುಕ್ಕಿಣಿಯನ್ನು ಸ್ವಯಂವರದಿಂದ ವರಿಸಿದನು. ಈ ಸ್ವಯಂವರ ಸಂದರ್ಭದಲ್ಲಿ ಕೃಷ್ಣನು, ಸಾಲ್ವನೇಮೊದಲಾಗಿ ಶಿಶುಪಾಲನ ಪಕ್ಷದವರಾದ ಅನೇಕದುಷ್ಪರಾಜರನ್ನು ಜಯಿಸಿ, ಪೂರದಲ್ಲಿ ಗರುಡನು ಅಮೃತವನ್ನು ಸಾಧಿಸಿತಂದಂತೆ ರುಕ್ಕಿಣಿಯನ್ನು ತನ್ನ ವಶಮಾಡಿಕೊಂಡನು” ಎಂದನು, ಆಗ ಪರೀಕ್ಷಿದ್ರಾಜನು. ಓ ಶುಕಮುನೀಂದ್ರಾ : ಶ್ರೀ ಕೃಷ್ಣನು ಭೀಷ್ಮ ಕನ ಮಗಳಾದ ರುಕ್ಷ್ಮಿಣಿಯನ್ನು, ರಾಕ್ಷಸವಿವಾಹದಿಂದ ವರಿಸಿದುದಾಗಿ ಕೇಳಿ ರುವೆನು, ಆ ವಿವರವನ್ನು ನನಗೆ ಚೆನ್ನಾಗಿ ತಿಳಿಸಬೇಕು. ಆ ಕೃಷ್ಣನೊಬ್ಬನೇ ಮಾಗಧರು, ಸಾಲ್ವರು ಮೊದಲಾದ ರಾಜರನ್ನು ಜಯಿಸಿ, ರುಕ್ಷ್ಮಿಣಿಯನ್ನು ಸಾಧಿಸಿತಂದುದು ಹೇಗೆ ? ಓ ಬ್ರಾಹ್ಮಣೋತ್ತಮಾ ! ಲೋಕಪಾವನಗ