ಈ ಪುಟವನ್ನು ಪ್ರಕಟಿಸಲಾಗಿದೆ
೯೨
ಶ್ರೀ ರಾಮಕೃಷ್ಣ ಪರಮಹಂಸರ

ಪರಮಹಂಸರೇ ಆಗಬೇಕು. ಇದರ ಮೇಲೆ ವಿವಾಹದ ಉದಾರನಾದ ಉದ್ದೇಶವನ್ನು ಮರೆತು, ಇಂದ್ರಿಯ ಸುಖವೊಂದೇ ಅದರ ಉಪಯೋಗವೆಂದು ತಿಳಿದುಕೊಂಡು "ಋಣಂಕೃತ್ವಾ೯ತಂಘೃತಂಪಿಬೇತ್" ಎಂದು ಹೇಳುತ್ತ ಸರ್ವ ಪ್ರಯತ್ನದಿಂದಲೂ ಧನಸಂಪಾದನೆ ಮಾಡಿ ಅದರಿಂದ ಐಹಿಕ ಭೋಗವನ್ನು ಹೆಚ್ಚಿಸಿಕೊಳುವುದು ಹೇಗೆ ಎಂದೇ ' ಸದಾಧ್ಯಾನಮಾಡುತ್ತ, ಅದನ್ನು ಬಿಟ್ಟು ಮತ್ತೆ ಯಾವುದನ್ನೂ ಯೋಚಿಸಲೇ ಆರದ ನಮ್ಮಗಳಿಗೆ ಕಾಮಿನೀಕಾಂಚನಗಳನ್ನು ತ್ಯಾಗಮಾಡಬೇಕೆಂದು ಎಷ್ಟು ಒತ್ತಿ ಹೇಳಿದರೆ ತಾನೇ ಸಾಕಾದೀತು ? ಬ್ರಹ್ಮಚಾರವನ್ನು ಸರಿಯಾಗಿ ಕಾಪಾಡಿಕೊಳ್ಳದೆ ಕೇವಲ ಅಶಕ್ತರಾಗಿ ನಾನಾ ವಿಧದಲ್ಲಿಯೂ ದೇಶದ ಅವನತಿಗೆ ಕಾರಣರಾದ ನಮಗೆ, ಆಮುಸ್ಮಿಕ ಸಾಧನದಲ್ಲಿ ಪತಿ ಪತ್ನಿಯರು ಸರಸ್ಪರ ಸಹಾಯಕರಾಗದೆ ದೇವರೆಂಬುದನ್ನೇ ಮರೆತು ವಿಲಾಸ ವೈಭವಗಳಲ್ಲಿ ಮೆರೆಯುತ್ತಿರುವ ನಮಗೆ, ಇದನ್ನು ಎಷ್ಟು ಬಾರಿ ಹೇಳಿದರೆ ತಾನೇ ಸಾಕಾದೀತು? ಇದರಿಂದ ಎಲ್ಲರೂ ರಾಮಕೃಷ್ಣರ೦ತಾಗಬೇಕೆಂದಲ್ಲ.--ಅದು ಸಾಧ್ಯವೂ ಅಲ್ಲ, ಈ ಸಂದರ್ಭದಲ್ಲಿ ಅವರು, "ಎಲಾ ನಾನು ಹದಿನಾರಾಣೆಯ ಪಾಲುಮಾಡಿದರೆ ನೀವು ಒಂದು ಪಾಲನಾದರೂ ಮಾಡಿರೊ!” ಎಂದು ಹೇಳುತ್ತಿದ್ದರು. ಅದರಂತೆ ಅವರನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಎಷ್ಟು ಸಾಧನೆ ಮಾಡುತ್ತ ಒ೦ದರೆ ಅಷ್ಟು ಶ್ರೇಯಸ್ಕರ ವೆಂಬುದರಲ್ಲಿ ಸಂದೇಹವಿಲ್ಲ.

ಕಾಮಿನೀಕಾಂಚನಗಳನ್ನು ತ್ಯಾಗಮಾಡುವ ವಿಚಾರ ಬ೦ದಾಗ “ಹಾಗಾದರೆ ಶ್ರೀ ರಾಮಕೃಷ್ಣ ಪರಮಹಂಸರವರು ಮದುವೆಯನ್ನೇಕೆ ಮಾಡಿಕೊಂಡರು?” ಎಂದು ಕೇಳಬಹುದು. ಪರಮಹಂಸರ ಇತರ ಕಾರ್ಯಗಳಂತೆ ಅವರ ವಿವಾಹವೂ ಲೋಕಕಲ್ಯಾಣಾರ್ಥವಾಗಿಯೇ ಕೈಕೊಂಡದ್ದೆಂದು ತೋರುತ್ತದೆ. ಈಗಿನ ಕಾಲದಲ್ಲಿ ನಮ್ಮಗಳಿಗೆ ವಿವಾಹವಿಚಾರದಲ್ಲಿರತಕ್ಕ ಒಂದು ವಿಧವಾದ