ಪರಮಹಂಸರಲ್ಲಿದ್ದ ಅನನ್ಯ ಸಾಮಾನ್ಯವಾದಗುಣ. ಪೂರ್ವದಲೂ ದೇವರನ್ನೂ ಸತ್ಯವನ್ನೂ ಪರೀಕ್ಷೆ ಮಾಡಬಾರದೆಂದು ಹೇಳುತ್ತಿರುವುದು ಸರಿಯಷ್ಟೆ. ಆದರೆ ಅವರುಮಾತ್ರ ನನ್ನು ಸಂದೇಹ ನಿವೃತ್ತಿಯಾಗುವುದಕ್ಕೆ ಎಷ್ಟು ಬೇಕೋ ಅಷ್ಟನ್ನೂ ಮಾಡುತ್ತಿದ್ದರು. ಬಂಗಾಳಿಯಲ್ಲಿ ಶ್ರೀ ಶ್ರೀ ಪರಮಹಂಸರವರ ಜೀವನ ಚರಿತ್ರೆಯನ್ನು ಬರೆದ ಶಾರದಾನಂದ ಸ್ವಾಮಿಗಳವರು ಶಿಷ್ಯರಲ್ಲನೇಕರು ಎಷ್ಟೆಷ್ಟೋ ಬುದ್ದಿವಂತಿಕೆಯಿಂದ ಪರೀಕ್ಷೆ ಮಾಡುತ್ತಿದ್ದರೆಂದೂ ಆದರೆ ಎಲ್ಲಾ ವೇಳೆಯಲ್ಲಿಯೂ ಗುರುಮಹಾರಾಜರೇ ಜಯಶೀಲರಾಗುತ್ತಿದ್ದರೆಂದೂ ಬರೆದಿದ್ದಾರೆ. ವಿವೇಕಾನಂದ ಸ್ವಾಮಿಗಳು ಪರಮಹಂಸರು ಕಾಣದಂತೆ ಅವರ ಹಾಸಿಗೆಯ ಕೆಳಗೆ ಒಂದು ರೂಪಾಯಿ ಹಾಕಿ ಅವರನ್ನು ಪರೀಕ್ಷೆ ಮಾಡಿದ ವಿಚಾರವು ಎಲ್ಲಿರಿಗೂ ಗೊತ್ತೇ ಇರಬಹುದು. ಅಲ್ಲದೆ ಅವರು ಆಗ್ಗಾಗ್ಗೆ *ಯಾರು ರಾಮನಾಗಿದ್ದನೋ ಯಾರು ಕೃಷ್ಣನಾಗಿದ್ದನೋ ಅವನೇ ಈಗ ಇಲ್ಲಿ ರಾಮಕೃಷ್ಣನಾಗಿದ್ದಾನೆ ” ಎಂದು ಹೇಳುತ್ತಿದ್ದರು. ವಿವೇಕಾನಂದರಿಗೆ ಇದರಲ್ಲಿ ನಂಬುಗೆ ಹುಟ್ಟಿಯೇ ಇರಲಿಲ್ಲ. ಕೊನೆಗೆ ಪರಮಹಂಸರು ಗಂಟಲೆಲ್ಲ ಹುಣ್ಣಾಗಿ ಮಾತನಾಡಲಾರದೆ ದೇಹ ತ್ಯಾಗಮಾಡಲು ಇನ್ನೆರಡುಗಳಿಗೆ ಇದೆ ಎನ್ನುವಾಗ ವಿವೇಕಾನಂದರು “ಗುರುಮಹಾರಾಜರು ನಿಜವಾಗಿ ಅವತಾರ ಪುರುಷರಾಗಿದ್ದರೆ ಈಗ ಇನ್ನೊಂದುಸಾರಿ ಆ ಮಾತು ಹೇಳಲಿ.” ಎಂದಂದುಕೊಂಡರಂತೆ. ಆ ಯೋಚನೆ ಹೊಳೆಯಿತೋ ಇಲ್ಲವೋ ಆ ಕೂಡಲೆ, "ಏನಪ್ಪಾ! ಇನ್ನೂ ನಂಬಿಕೆ ಬೇಡವೆ? ಯಾರು ರಾಮನಾಗಿದ್ದನೋ, ಯಾರು ಕೃಷ್ಣನಾಗಿದ್ದನೋ ಅವನೇ ಈಗ ಇಲ್ಲಿ ರಾಮಕೃಷ್ಣನಾಗಿದ್ದಾನೆ." ಎಂದು ಹೇಳಿದರಂತೆ.
ಬುದ್ಧ, ಶಂಕರಾಚಾರ, ರಾಮಾನುಜಾಚಾರ, ಕ್ರಿಸ್ತ ಮುಂತಾದ ಅವತಾರ ಪುರುಷರ ಚರಿತ್ರೆಯನ್ನು ವಿಚಾರಮಾಡಿ ನೋಡಿದರೆ ಅವರು ತಮ್ಮ ತಮ್ಮ ಕಾಲಗಳಲ್ಲಿ ಧರ್ಮಗ್ಲಾನಿಯುಂ