ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ಶ್ರೀ ರಾಮಕೃಷ್ಣ ಪರಮಹಂಸರ

ಅವನು ಅದುವರೆಗೂ ಅನುಸರಿಸಿದ ಮಾರ್ಗ ಅವನ ಪ್ರಕೃತ ಸ್ಥಿತಿ, ಅವನು ಮುಂದೆ ಮಾಡಬೇಕಾದ ಕಾರ್ಯ, ಎಲ್ಲವನ್ನೂ ಗ್ರಹಿಸಿ ತಕ್ಕ ಚಿಕಿತ್ಸೆಯನ್ನು ಹೇಳುತ್ತಿದ್ದರು. ಇದರಿಂದ ಅನೇಕ ಸಂಪ್ರದಾಯದ ಸಾಧಕರು ಅವರಲ್ಲಿಗೆ ಬಂದು ಸಕಾಲದಲ್ಲಿ ಅವರ ಅಮೋಘವಾದ ಸಹಾಯವನ್ನು ಪಡೆದು ಕೃತಾರ್ಥರಾದರು. ತಮ್ಮ ಶಿಷ್ಯ ಮಂಡಲಿಯಲ್ಲಿಯೇ ಸ್ವಾಮಿ ವಿವೇಕಾನಂದರಿಗೆ ಬಲವಂತಪಡಿಸಿಯಾದರೂ ಜ್ಞಾನಮಾರ್ಗವನ್ನೂ ಮತ್ತೆ ಕೆಲವರಿಗೆ ಭಕ್ತಿ ಮಾರ್ಗವನ್ನೂ ಬೋಧಿಸುತ್ತಿದರು. ಸ್ವಾಮಿ ಅಭೇದಾನಂದರವರು ಭಕ್ತಿ ಮಾರ್ಗವನ್ನು ಅನುಸರಿಸುತ್ತಿದ್ದಾಗ ಮಧ್ಯೆ, ವಿವೇಕಾನಂದರವರು ಅವರನ್ನು ಜ್ಞಾನಮಾರ್ಗಕ್ಕೆ ತಿರುಗಿಸಲು, ಪರಮಹಂಸರು ಬಹಳ ಬೇಸರಪಟ್ಟುಕೊಂಡು ದಾರಿತಪ್ಪಿ ಹೋದ ಸಾಧಕನಿಗೆ ದಾರಿ ತೋರಿಸಿದರು. ಗಿರೀಶ ಚಂದ್ರಘೋಷರಿಗೆ ಇದಾವುದನ್ನೂ ಹೇಳದೇ “ ನನಗೆ ವಕಾಲತ್ತುನಾಮೆ ಕೊಟ್ಟುಬಿಡು. ನೀನು ಮಾಡಬೇಕಾದ ದೇವರ ಪೂಜೆ, ಪುರಸ್ಕಾರ, ಧ್ಯಾನ, ಜಪ ಮುಂತಾದ್ದನ್ನೆಲ್ಲಾ ನಾನು ಮಾಡಿಬಿಡುತ್ತೇನೆ, ನೀನು ಮಾಡುವ ಒಳ್ಳೆಯದು ಕೆಟ್ಟದ್ದೆಲ್ಲಾ ನನಗಿರಲಿ” ಎಂದು ಹೇಳಿ ಅವರ ಭಾರವನ್ನೆಲ್ಲ ತಾವು ಹೊತ್ತುಕೊಂಡರು. ಅಘೋರಮಣಿ ಅಥವಾ “ ಗೋಪಾಲಲೇರಮಾ” ( ಗೋಪಾಲನತಾಯಿ) ಎಂಬಾಕೆಗೆ ಭಕ್ತಿ ಮಾರ್ಗದಲ್ಲಿಯೇ ಕೊನೆಯವರೆಗೂ ಶಿಕ್ಷಣವನ್ನು ಕೊಟ್ಟರು. ಯೋಗಾನಂದ ಸ್ವಾಮಿಗಳು ಒಬ್ಬ ಹಠಯೋಗಿಯ ಹತ್ತಿರಕ್ಕೆ ಹೋಗಿಬರುತ್ತಿದ್ದದ್ದನ್ನು ಕಂಡುಹಿಡಿದು ಬಲವಂತವಾಗಿ ಅದನ್ನು ಬಿಡಿಸಿ “ ನೀನು ಅಲ್ಲಿಗೆ ಏಕೆ ಹೋದದ್ದು ? ಅಲ್ಲಿಗೆ ಹೋಗಬೇಡ ; ಅದೆಲ್ಲಾ ಕಲಿತು ಕೊಂಡರೆ ಶರೀರದ ಮೇಲೆಯೇ ಮನಸ್ಸು ಹೋಗುತ್ತದೆ; ದೇವರ ಕಡೆಗೆ ತಿರುಗುವುದೇ ಇಲ್ಲ” ಎಂದು ಹೇಳಿ ಹರಿಧ್ಯಾನ ಮಾಡುವ ಹಾಗೆ ಏರ್ಪಾಡುಮಾಡಿದರು. ಒಬ್ಬ ಹೆಂಗಸು ಬಂದು, ಧ್ಯಾನ ಜಪಮಾಡುವುದಕ್ಕೆ ಕುಳಿತುಕೊಂಡಾಗಲೆಲ್ಲಾ ಸಂಸಾರದ ಕಡೆಯೇ