ಈ ಪುಟವನ್ನು ಪ್ರಕಟಿಸಲಾಗಿದೆ
೧೦೬
ಶ್ರೀ ರಾಮಕೃಷ್ಣ ಪರಮಹಂಸರ

ಉಳ್ಳವನಾಗಿರಬೇಕು. ಹೀಗೆ ಮುಮುಕ್ಷುತ್ವವಿದ್ದರೆ ಮಹಾಪುರುಷ ಸಂಶಯವೂ ಉಂಟಾಗಿಯೇ ಆಗುವುದು-ಆಗಲೇಬೇಕು. ಆಧ್ಯಾತ್ಮಿಕ ವಿಚಾರಗಳಲ್ಲಿ ಮಾತ್ರ ಇಂದಿಗೂ ನಾಳೆಗೂ, ಹಸಿದು ಬಾಯಾರಿ ಬೇಸತ್ತು ಬಂದು “ ದೇಹಿ” ಎಂದರೆ [೧] ಧರ್ಮಭೂಮಿಯಾದ ನಮ್ಮದೇಶದಲ್ಲಿ “ ನಾಸ್ತಿ" ಎನ್ನುವಹಾಗಿಲ್ಲ. ನಾವೇ ಸಂಶಯಾತ್ಮರು. ನಮ್ಮಲ್ಲಿಯೇ ನಮಗೆ ನಂಬುಗೆಯಿಲ್ಲ. ದೇವರಲ್ಲಿ ಕೇಳಬೇಕೆ ? ಅಲ್ಲದೆ ನಮ್ಮಲ್ಲಿ ತೀವ್ರ ವೈರಾಗ್ಯವು ಹುಟ್ಟಿ ಬಿಟ್ಟ೦ತೆ ಕಾಣುತ್ತದೆ. ಆ ವೈರಾಗ್ಯವು ಅಭಾವ ವೈರಾಗ್ಯವೋ ಸ್ಮಶಾನ ವೈರಾಗ್ಯವೋ ಅಥವಾ ನಮ್ಮ ನಮ್ಮ ಕರ್ತವ್ಯವನ್ನು ಮಾಡುವುದಕ್ಕೆ ಕೈಯಲ್ಲಿ ಹರಿಯದೆ ಹುಟ್ಟಿದ ಸುಳ್ಳು ವೈರಾಗ್ಯವೋ ಹೊರತು ನಿಜವಾದ ವೈರಾಗ್ಯವಲ್ಲ. ಈ ವಿಚಾರದಲ್ಲಿ ನಮ್ಮ ಕಳ್ಳಮನಸ್ಸೇ ನಮ್ಮನ್ನು ಮೋಸ ಪಡಿಸುವುದು. ಏಕೆಂದರೆ ಉತ್ತರ ಕ್ಷಣದಲ್ಲಿಯೇ ಪರಮಹಂಸರು ಆಜೀವನವೂ ಮಾತುಮಾತಿಗೂ ಒತ್ತಿಒತ್ತಿ ಪ್ರಸ್ತಾಪಿಸುತ್ತಿದ್ದ ಕಾಮಿನೀಕಾಂಚನಗಳು ಬಾಧಿಸ ತೊಡಗುವುವು. ನಿಜವಾದ ವೈರಾಗ್ಯಕ್ಕೆ ಕಾಮಿನೀಕಾಂಚನಗಳ ಮೇಲಣ ಆಶೆಯು ಪೂರ್ತಿಯಾಗಿ ಹೋಗುವುದೇ ಲಕ್ಷಣ. ನಿಜವಾದ ವೈರಾಗ್ಯ, ಶ್ರದ್ಧೆ, ಅಭ್ಯಾಸಗಳಿದ್ದು ಕಾಮಿನೀಕಾಂಚನಗಳನ್ನು ತ್ಯಜಿಸಿ' ಮೋಕ್ಷವನ್ನು ಸಾಧಿಸಬೇಕೆಂದು ಆಸಕ್ತಿ ಇರುವವನಿಗೆ ಸಕಾಲದಲ್ಲಿ ಗುರುವು ದೊರೆತೇ ದೊರೆಯುವನು. ಅವಶ್ಯನಿದ್ದರೆ ಗುರುವೇ ಶಿಷ್ಯನನ್ನು ಹುಡುಕಿಕೊಂಡು ಹೋಗುವನು. ಪರಮಹಂಸರ ಜೀವನ ಚರಿತ್ರೆಯಿಂದಲೇ ಇದಕ್ಕೆ ಉದಾಹರಣೆಗಳನ್ನು ಕೊಡಬಹುದು.

ಈಗಿನ ಕಾಲದಲ್ಲಿ ಹಿಂದೂಧರ್ಮವು ನಮ್ಮದೇಶದ ಅವ ನತಿಗೆ ಮುಖ್ಯ ಕಾರಣವೆಂದೂ, ದೇಶೋನ್ನತಿಗೆ ದೊಡ್ಡ ಅಡಚಣೆ

  1. "Ask, and it shall be given".—Christ.