ಈ ಪುಟವನ್ನು ಪ್ರಕಟಿಸಲಾಗಿದೆ
೧೦
ಶ್ರೀ ರಾಮಕೃಷ್ಣ ಪರಮಹಂಸರ


ತಂದೆಯ ಮರಣಾನಂತರ ಸಂಸಾರದ ಭಾರವೆಲ್ಲ ಖುದಿ ರಾಮನಮೇಲೆ ಬಿತ್ತು. ಆತನು ಧರ್ಮಮಾರ್ಗವನ್ನು ಬಿಡದೆ ಸಾಧ್ಯವಾದ ಮಟ್ಟಿಗೆ ಸಂಸಾರವನ್ನು ಅನುಕೂಲವಾದ ರೀತಿ ಯಲ್ಲಿ ನಡೆಸಿಕೊಂಡು ಹೋಗುತ್ತಿದ್ದನು. ಇದಕ್ಕೆ ಮುಂಚೆಯೇ ಆತನಿಗೆ ಮದುವೆಯಾಗಿ ಹೆಂಡತಿ ತೀರಿಹೋಗಿದಳು. ಕ್ರಿ. ಶ. ೧೭೯೯ ರಲ್ಲಿ ಮತ್ತೆ ಮದುವೆಯಾಯಿತು. ಆಗ ಆತನಿಗೆ ಸುಮಾರು ೨೫ ವರ್ಷ. ಈ ಎರಡನೆಯ ಹೆಂಡತಿಯಾದ ಶ್ರೀಮತಿ ಚಂದ್ರಾದೇವಿಗೆ ಎಂಟು ವರ್ಷ. ಆಕೆಯು ಚಿಕ್ಕ ವಯಸ್ಸಿನಿಂದಲೂ ಸರಳಸ್ವಭಾವವುಳ್ಳವಳಾಗಿಯೂ ದೇವಬ್ರಾಹ್ಮಣರಲ್ಲಿ ಭಕ್ತಿ ಯುಳ್ಳವಳಾಗಿಯೂ ಪ್ರೇಮಮಯಿಯಾಗಿಯೂ ಇದ್ದಳು. ಆದರಿಂದ ಈಕೆಯನ್ನು ಕಂಡರೆ ಮನೆಯಲ್ಲಿ ಎಲ್ಲರಿಗೂ ಕೇವಲವಿಶ್ವಾಸ. ಹೀಗಿರಲು ಈಕೆಯ ಹೊಟ್ಟೆಯಲ್ಲಿ ೧೮೦೫ ರಲ್ಲಿ ರಾಮಕುಮಾರ ನೆಂಬೊಬ್ಬ ಮಗನೂ ೧೮೧೦ ರಲ್ಲಿ ಕಾತ್ಯಾಯನೀ ಎ೦ಬೊಬ್ಬ ಮಗಳೂ ಹುಟ್ಟಿದರು. ಹೀಗೆ ಸಂಸಾರವು ಹೆಚ್ಚಾದ್ದರಿಂದ ಖುದಿರಾಮನಿಗೆ ಜೀವನ ಮಾಡುವುದು ಕಷ್ಟವಾಗುತ್ತಬಂತು. ಸಾಲ ದ್ಕ್ಕೆ ಕಾತ್ಯಾಯನಿಯು ಹುಟ್ಟಿದ ಸ್ವಲ್ಪ ಕಾಲದಲ್ಲಿಯೇ ಅಕಸ್ಮಾತ್ತಾಗಿ ಆತನಿಗೆ ಇನ್ನೊಂದು ವಿಷಮಕಷ್ಟವು ಪ್ರಾಪ್ತವಾಯಿತು.

ಆವೂರಿನ ಜಮೀನುದಾರನಾದ ರಾಮಾನಂದರಾಯನು ಐಶ್ವರ್ಯಮತ್ತನಾಗಿ ತನಗಾಗದ ಜನರನ್ನೆಲ್ಲಾ ಕಿರುಕುಳಗುಟ್ಟಿಸುತ್ತಿದ್ದನು. ಇವನು ಒಂದುಕಾಲದಲ್ಲಿ ಯಾರಮೇಲೆಯೋ ಒಂದು ಸುಳ್ಳುದಾವಾಹಾಕಿ ಅದಕ್ಕೆ ಯೋಗ್ಯನಾದ ಸಾಕ್ಷಿ ಬೇಕಾಗಿದ್ದುದರಿಂದ ಖುದಿರಾಮನನ್ನು ಸಾಕ್ಷಿಯಾಗಿ ಕೋರಿದನು. ಪಾಪ! ಧರ್ಮ ಪರಾಯಣನಾದ ಖುದಿರಾಮನು ತನ್ನ ಸ್ವಭಾವಕ್ಕೆ ವಿರುಧ್ಧವಾಗಿ ಸುಳ್ಳುಸಾಕ್ಷ್ಯವನ್ನು ಕೊಡುವುದೆಂದರೆ ಹೇಗೆ? ಹೇಳದೇ ಹೋದರೋ, ರಾಮಾನಂದರಾಯನು ಯಾವುದಾದರೂ ಒಂದು ನೆಪದಲ್ಲಿ ತನ್ನನ್ನು ನಿರ್ಮೂಲ ಮಾಡಿಬಿಡುವುದು ನಿಶ್ಚಯ. ಆದರೂ ಸತ್ಯಕ್ಕೆಹೆದರಿ