ಈ ಪುಟವನ್ನು ಪ್ರಕಟಿಸಲಾಗಿದೆ
೧೪
ಶ್ರೀ ರಾಮಕೃಷ್ಣ ಪರಮಹ೦ಸರ

ರಾಮೇಶ್ವರಕ್ಕೆ ಹೊರಟನು. ಆ ಕಾಲದಲ್ಲಿ ಈಗಿನಹಾಗೆ ಪ್ರಯಾಣಕ್ಕೆ ರೈಲು ಮುಂತಾದ ಅನುಕೂಲಗಳಿರಲಿಲ್ಲ. ಆದರೂ ದಕ್ಷಿಣ ದೇಶದಲ್ಲಿದ್ದ ತೀರ್ಥ ಕ್ಷೇತ್ರಗಳನ್ನೆಲ್ಲಾ ಸುತ್ತಿಕೊಂಡು ಸುಮಾರು ಒಂದುವರ್ಷದ ತರುವಾಯ ಹಿಂತಿರುಗಿ ಬಂದನು. ಇದಾದ ಕೆಲವು ದಿನಗಳಲ್ಲಿ ಶ್ರೀಮತಿ ಚಂದ್ರಾದೇವಿಯು ಗರ್ಭಧಾರಣಮಾಡಿ ಒಬ್ಬ ಮಗನನ್ನು ಹೆತ್ತಳು (೧೮೨೬). ರಾಮೇಶ್ವರಯಾತ್ರೆ ಮಾಡಿಕೊ೦ಡು ಬ೦ದತರುವಾಯ ಹುಟ್ಟಿದನಾದ ರಿಂದ ಈ ಹುಡುಗನಿಗೆ ರಾಮೇಶ್ವರನೆಂದು ನಾಮಕರಣ ಮಾಡಿದರು.

ಇದಾದ ಏಳೆಂಟುವರ್ಷಗಳ ತರುವಾಯ ಖುದಿರಾಮನಿಗೆ ಪುನಃ ತೀರ್ಥಯಾತ್ರೆ ಮಾಡಬೇಕೆಂನಬ ಅಭಿಲಾಷೆ ಹುಟ್ಟಿತು. ಸನ್ ೧೮೩೫ ನೆಯ ಇಸವಿಯ ಫಾಲ್ಗುಣ ಮಾಸದಲ್ಲಿ ಹೊರಟು ಕಾಶಿಗೆ ಹೋಗಿ ಅಲ್ಲಿ ವಿಶ್ವೇಶ್ವರನ ದರ್ಶನಮಾಡಿಕೊಂಡು ಚೈತ್ರ ಮಾಸದಲ್ಲಿ ಗಯಾ ಕ್ಷೇತ್ರವನ್ನು ಸೇರಿದನು. ಈ ತಿಂಗಳಲ್ಲಿ ಗಯಾಕ್ಷೇತ್ರದಲ್ಲಿ ಪಿಂಡಪ್ರದಾನ ಮಾಡಿದರೆ ಪಿತೃಗಳಿಗೆ ಅಕ್ಷಯತೃಪ್ತಿಯಾಗುವುದೆಂದು ಹೇಳಿರುವುದರಿಂದ ಈ ತಿಂಗಳಿಗೆ ಸರಿಯಾಗಿ ಅಲ್ಲಿಗೆ ಒ೦ದನು. ಅಲ್ಲಿ ಸುಮಾರು ಒಂದುತಿ೦ಗಳು ಇದ್ದು ಯಥಾವಿಧಿಯಾಗಿ ತೀರ್ಥಕ್ಷೇತ್ರಗಳಲ್ಲಿ ಮಾಡಬೇಕಾದ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಕೊನೆಗೆ ಗದಾಧರನ ಶ್ರೀ ಪಾದಪದ್ಮಗಳಲ್ಲಿ ಪಿಂಡಪ್ರದಾನಮಾಡಿದನು. ಈ ರೀತಿಯಲ್ಲಿ ಶಾಸ್ತ್ರೀಯವಾಗಿ ಪಿತೃಕರ್ಮಗಳನ್ನು ಮುಗಿಸಿದರಿ೦ದ ಅವನ ಹೃದಯದಲ್ಲಿ ಎಷ್ಟು ತೃಪ್ತಿಯೂ ಶಾ೦ತಿಯೂ ನೆಲಗೊಂಡವೋ ಅದನ್ನು ಹೇಳಬೇಕಾದ್ದಿಲ್ಲ. ಭಗವಂತನು ತನ್ನಂಥ ದೀನನಿಗೆ ಈ ಕಾವ್ಯವನ್ನು ನಡೆಸಲು ಶಕ್ತಿ ಕೊಟ್ಟನಲ್ಲಾ ಎಂಬ ಆಲೋಚನೆಯಿಂದ ಅವನಲ್ಲಿ ಕೃತಜ್ಞತೆಯೂ ಭಕ್ತಿಯೂ ತುಂಬಿಹೋದುವು. ಹಗಲೆಲ್ಲಾ ಇದೇ ಯೋಚನೆಯಲ್ಲಿಯೇ ಇದ್ದು ರಾತ್ರಿ ಮಲಗಿಕೊಂಡಮೇಲೆ ನಿದ್ರೆ ಹತ್ತಿತೋ ಇಲ್ಲವೋ ಆಗ ಅವನಿಗೆ ಒಂದು ಸ್ವಪ್ನವಾಯಿತು. ಅದರಲ್ಲಿ