ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೩೬

ಈ ಪುಟವನ್ನು ಪ್ರಕಟಿಸಲಾಗಿದೆ
೨೦
ಶ್ರೀ ರಾಮಕೃಷ್ಣ ಪರಮಹ೦ಸರ

ದಯಕ್ಕಿಂತ ಸ್ವಲ್ಪ ಮುಂಚೆಯೇ ಶ್ರೀಮತಿ ಚಂದ್ರಾದೇವಿಯ ಒಬ್ಬ ಪುತ್ರನನ್ನು ಹೆತ್ತಳು. ಈತನೇ ಮುಂದೆ ಪ್ರಸಿದ್ಧನಾದ ಭಗವಾನ್ ಶ್ರೀರಾಮಕೃಷ್ಣ ಪರಮಹಂಸದೇನ. ಬೆಳಗಾದ ಮೇಲೆ ಖುದಿರಾಮನು ಜೋಯಿಸರನ್ನು ಕರೆದುಕೊ೦ಡುಬ೦ದು ಜನಪತ್ರಿಕೆಯನ್ನು ಬರೆಸಿ ನೋಡಲಾಗಿ ಎಲ್ಲವೂ ಬಹು ಪ್ರಶಸ್ತವಾಗಿ ಕಂಡುಬಂದಿತು. ಜೋಯಿಸರು “ ಇಂಥವನು ಧರ್ಮವಿತ್ತಾಗಿಯೂ ಮಹನೀಯನಾಗಿಯೂ ಆಗುವನು. ಯಾವಾಗಲೂ ಪುಣ್ಯ, ಕರ್ಮಾನಷ್ಠಾನದಲ್ಲಿ ನಿರತನಾಗಿರುವನು. ಬಹುಶಿಷ್ಯ ಪರಿವೃತನಾಗಿ ದೇವಮಂದಿರದಲ್ಲಿ ವಾಸಮಾಡುವನು. ನಾರಾಯಣಾಂ ಶಸಂಭೂತನಾದ ಮಹಾಪುರುಷನೆಂದು ಜಗತ್ತಿನಲ್ಲಿ ಪ್ರಸಿದ್ದಿ ಪಡೆದು ಸರ್ವತ್ರ ಸರ್ವಜನರಿಂದಲೂ ಪೂಜಿತನಾಗುವನು.” ಎಂದು ಹೇಳಿದರು. ಖುದಿರಾನಸಿಗೆ ಆಶ್ಚರ್ಯವಾಯಿತು. ತಾನು ಗದಾಧಾಮದಲ್ಲಿ ನೋಡಿದ ಸಪ್ನವು ಸತ್ಯವೆಂದು ನಂಬುಗೆ ಯುಂಟಾಯಿತು. ಅನಂತರ ಜಾತಕರ್ಮವನ್ನು ನಡೆಸಿ ಗಯೆಯಲ್ಲಿ ಆದ ಸ್ವಪ್ನವನ್ನು ಮನಸ್ಸಿನಲ್ಲಿಟ್ಟುಕೊಂಡು ಶಿಶುವಿಗೆ ಗದಾಧರನೆಂದು ನಾಮಕರಣ ಮಾಡಿದನು.

ಮಗುವಿಗೆ ಐದು ತಿಂಗಳು ತುಂಬಿತು. ಆರನೆಯತಿಂಗಳಲ್ಲಿ ಖುದಿರಾಮನು ಮಗನಿಗೆ ಅನ್ನಪ್ರಾಶನ ಮಾಡಬೇಕೆಂದು ಉದ್ದೇಶ. ಪಟ್ಟು ತನಗೆ ಕೇವಲಹತ್ತಿರ ಸಂಬಂಧಿಗಳಾದ ನಾಲ್ಕು ಜನರನ್ನು ಊಟಕ್ಕೆ ಕರೆದು ಆ ಕಾರ್ಯವನ್ನು ಮುಗಿಸಿಬಿಡಬೇಕೆಂದಿದ್ದನು. ಆದರೆ ಅವನು ಯೋಚಿಸಿದ್ದೇ ಒಂದಾಯಿತು; ನಡದದ್ದೇ ಒಂದಾಯಿತು. ಆ ಗ್ರಾಮದ ಜಮೀನುದಾರನಾದ ಆತನ ಸ್ನೇಹಿತ ಧರ್ಮದಾಸ ಲಾಹಾ ಎಂಬಾತನ ಪ್ರೇರಣೆಯಿಂದಲೂ ಸಹಾಯದಿ೦ದಲೂ ಖುದಿರಾಮನ ಮನೆಯಲ್ಲಿ ಆ ವೂರಿನ ಎಲ್ಲಾ ಬ್ರಾಹ್ಮಣರಿಗೂ ಬ್ರಾಹ್ಮಣೇತರರಿಗೂ ಸಂತರ್ಪಣೆ ನಡೆದುಹೋಯಿತು. ಎಷ್ಟೋಜನ ಬಡವರೂ ಭಿಕ್ಷುಕರೂ ತೃಪ್ತಿ ಹೊಂದಿದರು.