ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೨೧

ಮಗುವು ಬಹು ಮುದ್ದಾಗಿದ್ದುಗಿದರಿಂದ ಆ ವೂರಿನ ಗಂಡಸರು ಹೆಂಗಸರೆಲ್ಲರೂ ಮಗುವನ್ನು ಎತ್ತಿಕೊಂಡು ಆಡಿಸುತ್ತಾ ಆನಂದ ಪಡುತ್ತಿದ್ದರು. ಹೀಗೆನಾದುವರ್ಷಗಳು ಕಳೆದುವು. ಇನ್ನೂ ಈ ಚಿಕ್ಕವಯಸ್ಸಿನಲ್ಲಿಯೇ ಗದಾಧರನ ಬುದ್ದಿಯೂ ಜ್ಞಾಪಕಶಕ್ತಿಯೂ ಅದ್ಭುತವಾಗಿದುವು. ಇದನ್ನು ನೋಡುತ್ತಿದ್ದ ಖುದಿರಾಮನ ವಿಸ್ಮಯವನ್ನೂ ಆನಂದವನ್ನೂ ಹೇತೀರದು. ಅವನು ಚ೦ಚಲನಾದ ಈ ಬಾಲಕನನ್ನು ತೊಡೆಯಮೇಲೆ ಕೊ೦ಡು ತಮ್ಮ ಪೂರ್ವ ಪುರುಷ ನಾಮಾವಳಿ, ದೇವದೇವಿಯರ ಸಣ್ಣ ಸಣ್ಣ ಸ್ತೋತ್ರಗಳು, ಅಥವಾ ರಾಮಾಯಣ ಮಹಾಭಾರತಗಳ ವಿಚಿತ್ರವಾದ ಕಥೆಗಳು ಇವನ್ನು ಹೇಳಿಕೊಡುತ್ತಿದನು. ಒಂದುಸಲ ಹೇಳಿದ ಮಾತ್ರದಿಂದಲೇ ಗದಾಧರನಿಗೆ ಮುಕ್ಕಾಲು ಪಾಲೆಲ್ಲ ಬಾಯಿಗೆ ಬಂದುಬಿಡುತ್ತಿತ್ತು. ಎಷ್ಟೋ ದಿನ ಬಿಟ್ಟು ಕೇಳಿದರೂ ಅವುಗಳನ್ನು ಅದೇರೀತಿಯಲ್ಲಿ ನೀರುಕುಡಿದ೦ತೆ ಹೇಳುತ್ತಿದನು. ದಲ್ಲಿಯೇ ಖುದಿರಾಮನಿಗೆ ಇನ್ನೊಂದು ವಿಶೇಷ ಸಂಗತಿಯೂ ಕಂಡುಬಂತು. ಹುಡುಗನಿಗೆ ಕೆಲವು ವಿಷಯಗಳಲ್ಲಿ ಶ್ರದ್ಧೆಯೂ, ಆಸಕ್ತಿಯೂ ವಿಶೇಷವಾಗಿರುವ, ಮತ್ತೆ ಕೆಲವು ವಿಚಾರಗಳಲ್ಲಿ ಅವನು ಕೇವಲ ಉದಾಸೀನನಾಗಿರುತ್ತಿದ್ದನು. ನೂರಾರಸಲ ಹೇಳಿದರೂ ಅವುಗಳಲ್ಲಿ ಸ್ವಲ್ಪವೂ ಮನಸ್ಸೇ ಇಡುತ್ತಿರಲಿಲ್ಲ. ಇಂಥ ವಿಚಾರಗಳಲ್ಲಿ ಗಣಿತಒಂದು. ಇದನ್ನು ಕಂಡು ಖುದಿರಾ ಮನು “ ಹುಡುಗನು ಇನ್ನೂ ಚಿಕ್ಕವನು. ಇನ್ನೂ ಕೇವಲ ಆಟಪಾಟದ ಮೇಲೆಯೇ ಗಮನ. ಈಗಾಗಲೇ ಅನನಿಗೆ ಇದೆಲ್ಲವನ್ನೂ ಹೇಳಿ ಕೊಟ್ಟು ಏಕೆ ಗೋಳಾಡಿಸಬೇಕು" ಎಂದು ಯೋಚಿಸಿ ಐದನೆಯ ವರ್ಷದಲ್ಲಿ ಶಾಸ್ತ್ರೀಯವಾಗಿ ವಿದ್ಯಾರ೦ಭಮಾಡಿಸಿ, ಹತ್ತಿರದಲ್ಲಿದ ಪಾಠಶಾಲೆಗೆ ಕಳುಹಿಸಿದನು. ಅಲ್ಲಿದೆ ಹುಡುಗರನ್ನು ಬೇಗ ಪರಿಚಯಮಾಡಿಕೊ೦ಡು ಗದಾಧರನು ಸಂತೋಷವಾಗಿ ಓಡಾಡಿಕೊಂಡಿರುತ್ತಿದನಲ್ಲದೆ ಬೇಗ ಉಸಾಧ್ಯಾಯರಿಗೂ ಅಚ್ಚು ಮೆಚ್ಚಾದನು.