ಈ ಪುಟವನ್ನು ಪ್ರಕಟಿಸಲಾಗಿದೆ
೨೨
ಶ್ರೀ ರಾಮಕೃಷ್ಣ ಪರಮಹಂಸರ

ಮನೆಯಲ್ಲಿ ಹೇಗೆಯೋ ಪಾಠಶಾಲೆಯಲ್ಲಿಯೂ ಹಾಗೆಯೇ ತನಗೆ ಬೇಕಾದ ಕೆಲವು ವಿಷಯಗಳಲ್ಲಿ ಕೇವಲ ಶ್ರದ್ಧೆ, ತನಗೆ ಬೇಡದವುಗಳಲ್ಲಿ ಅಶ್ರದ್ದೆ, ತನಗೆ ಇಷ್ಟವಿಲ್ಲದ್ದನ್ನು ಯಾರು ಏನು ರ್ಹೆದರೂ ಮಾಡುತ್ತಿರಲಿಲ್ಲ. ಒಹುಹಟ: ಆದರೆ ಯಾವುದಾ ದರೂ ಒಂದು ವಿಷಯವನ್ನು ಯುಕ್ತಿಯುಕ್ತವಾಗಿ ಸಕಾರಣವಾಗಿ ಅವನ ಮನಸ್ಸಿಗೆ ಹಿಡಿಯುವಂತೆ ತಿಳಿಸಿದ್ದೇ ಆದರೆ, ಅದಕ್ಕೆ ಎಂದಿಗೂ ವಿರೋಧವಾಗಿ ಹೋಗುತ್ತಿರಲಿಲ್ಲ. ಈ ಕಾಲದಲ್ಲಿ ಒಂದು ಸಂಗತಿಯನ್ನು ಇದಕ್ಕೆ ಉದಾಹರಣೆಯಾಗಿ ಬಹುದು. ಖುದಿರಾಮನ ಮನೆಯಹತ್ತಿರ ಒಂದು ಕೆರೆಯಿತ್ತು. ಊರಿನವರೆಲ್ಲರೂ ಅಲ್ಲಿ ಸ್ವಾನಪಾನಾದಿಗಳನ್ನು ಮಾಡುತ್ತಿದ್ದರು. ಹೆಂಗಸರಿಗೂ ಗಂಡಸರಿಗೂ ಬೇರೆಬೇರೆ ಸ್ನಾನಘಟ್ಟಗಳಿದ್ದುವು. ಆದರೆ ಗದಾಧರನಂಥ ಸಣ್ಣ ಹುಡುಗರು ಹೆಂಗಸರ ಘಟ್ಟಕ್ಕೆ ಹೋದರೆ ಆಕ್ಷೇಪಣೆ ಇರುತ್ತಿರಲಿಲ್ಲ. ಗದಾಧರನು ಒಂದುದಿನ ಒಬ್ಬಿಬ್ಬರು ಜೊತೆಯಹುಡುಗರನ್ನು ಕರೆದುಕೊಂಡು ಅಲ್ಲಿಗೆ ಹೋಗಿ, ನೀರಿನಲ್ಲಿ ಕುಣಿದಾಡುತ್ತ ಅಲ್ಲಿದ ಹೆಂಗಸರಿಗೆಲ್ಲಿ ನೀರನ್ನು ಸಿಡಿಸಿ ಬಹಳ ಗಲಭೆ ಮಾಡಿದನು. ಅವರು ಎಷ್ಟು ಬೇಡವೆಂದರೂ ಕೇಳ ಲಿಲ್ಲ. ಕೊನೆಗೆ ಅವರಲ್ಲೊಬ್ಬ ಮುದುಕಿಯು ಬಲುಬೇಸರಪಟ್ಟು ಕೊಂಡು “ ನಿಮಗೆ ಈ ಘಟ್ಟದಲ್ಲಿ ಏನು ಕೆಲಸ? ಗಂಡಸರ ಘಟ್ಟಕ್ಕೆ ಹೋಗಬಾರದೇ? ಹೆಂಗಸರು ಸ್ನಾನಮಾಡುತ್ತಿದ್ದಾಗ ನೋಡ ಬಾರದೆಂಬುದು ನಿಮಗೆ ಗೊತ್ತಿಲ್ಲವೇ ?” ಎಂದು ಗದರಿಸಿದಳು. ಅದಕ್ಕೆ ಗದಾಧರನು “ ನೋಡಿದರೇನು ? " ಎಂದು ಕೇಳಿದನು. ಪಾಪ ! ಆ ಚಿಕ್ಕ ಹುಡುಗನಿಗೆ ಹೆಂಗಸರು ಸ್ನಾನಮಾಡುವುದನ್ನು ನೋಡಿದರೆ ಏನುತಪ್ಪು ಎಂಬುದು ಗೊತ್ತಾಗಿರಲಿಲ್ಲ. ಅವನ ಪ್ರಶ್ನೆಗೆ ಉತ್ತರವನ್ನು ಆ ಮುದುಕಿಯು ಹೇಳಲಾರದೆ ಇನ್ನಷ್ಟು ಕೂಗಾಡಿಬಿಟ್ಟಳು. ಅಲ್ಲಿದ್ದ ಹೆಂಗಸರೆಲ್ಲರಿಗೂ ಸಿಟ್ಟು ಬಂತು. ಮಿಕ್ಕಹುಡುಗರು ತನ್ನ ತಾಯಿ ತಂದೆಗಳಿಗೆ ಈ ವಿಷಯ ತಿಳಿದೀ.