ಈ ಪುಟವನ್ನು ಪ್ರಕಟಿಸಲಾಗಿದೆ
೩೦
ಶ್ರೀ ರಾಮಕೃಷ್ಣ ಪರಮಹಂಸರ

ನಲ್ಲ" ಎಂದು ಹೇಳಿ ಹಟಹಿಡಿದನು. ಕೊನೆಗೆ ಅವರ ತಂದೆಗೆ ಸ್ನೇಹಿತನಾಗಿದ್ದ ಧರ್ಮದಾಸ ಲಾಹಾಬಾಬುವಿನ ಹೇಳಿಕೆಯಂತೆ ರಾಮಕುಮಾರನೇ ಸೋಲಬೇಕಾಯಿತು. ಯಥಾಕಾಲದಲ್ಲಿ ಉಪನಯನವು ನಡೆದುಹೋಯಿತು. ಧನಿಯು ಭಿಕ್ಷಾಮಾತೆಯಾಗಿ ಕೃತಕೃತ್ಯಳಾದಳು.

ಉಪನಯನವಾದ ಸ್ವಲ್ಪ ಕಾಲದಲ್ಲಿಯೇ ಗದಾಧರನ ಅಸಾಧಾರಣ ಬುದ್ಧಿ ಶಕ್ತಿಯನ್ನು ತೋರಿಸುವ ಒಂದು ಘಟನೆಯ ನಡೆಯಿತು. ಮೇಲೆ ಹೇಳಿದ ಧರ್ಮದಾಸ ಬಾಬುವಿನ ಮನೆಯಲ್ಲಿ ಯಾವುದೋ ಒಂದು ವಿಶೇಷದಿವಸ ಅನೇಕ ಪಂಡಿತರು ಬಂದು ಸೇರಿದ್ದರು. ಶಾಸ್ತ್ರವಿಷಯವಾದ ಚರ್ಚೆಗೆ ಆರಂಭವಾಯಿತು. ಎಷ್ಟು ಚರ್ಚೆಮಾಡಿದರೂ ಯಾವವಿಧದಲ್ಲಿಯೂ ವ್ಯವಸ್ಥೆಯಾಗಲಿಲ್ಲ. ಗದಾಧರನಂತೆ ಅಲ್ಲಿ ಅನೇಕ ಹುಡುಗರು ಬಂದು ನೆರೆದಿದ್ದರು. ಅವರು ಆಟಪಾಟಗಳನ್ನು ಆಡುತ್ತಲೋ ಪಂಡಿತರನ್ನು ಅಣಕಿಸುತ್ತಲೋ ಇಲ್ಲವೇ ಪಿಳಪಿಳನೆ ಕಣ್ಣು ಬಿಟ್ಟು ಕೊಂಡೋ ಕುಳಿತಿದ್ದರು. ಆದರೆ ಗದಾಧರನುಮಾತ್ರ ಶಾಸ್ತ್ರವಿಚಾರಕ್ಕೆ ಗಮನಕೊಟ್ಟು ಕೇಳುತ್ತಿದ್ದು ಎಲ್ಲವನ್ನೂ ಗ್ರಹಿಸಿ ಅವರ ವಾದಾನುವಾದವು ಕೊನೆಮುಟ್ಟದಿರಲು, ತನಗೆ ತೋರಿದ ಒಂದು ತೀರ್ಮಾನವನ್ನು ಹೇಳಿದನು. ಇದು ಕೇವಲ ತೃಪ್ತಿಕರವಾಗಿದ್ದದ್ದರಿಂದ ಪಂಡಿತರೆಲ್ಲರೂ ಆಶ್ಚರ್ಯಪಟ್ಟು ಖಂಡಿತವಾಗಿಯೂ ಅವನು ದೇವಾಂಶಸಂಭೂತನಾಗಿರಬೇಕೆಂದು ಹೊಗಳಿ ಆಶೀರ್ವಾದಮಾಡಿ ಕಳುಹಿಸಿದರು.

ಪಾಠಕರಿಗೆ ಇದು ಶುದ್ಧಾಂಗವಾಗಿ ಅಸಂಭವವೆಂದು ತೋರಬಹುದು. ಆದರೆ ಇಂಥ ಘಟನೆಗಳು ಇತರ ಅವತಾರ ಪುರುಷರ ಜೀವನ ಚರಿತ್ರೆಗಳಲ್ಲಿಯೂ ಕಂಡುಬರುವುದು. ಏಸು ಕ್ರಿಸ್ತನು ಹನ್ನೆರಡುವರ್ಷದ ಹುಡುಗನಾಗಿದ್ದಾಗ ಜೆರುಸಲೇಮಿನಲ್ಲಿ ಇದರಂತೆಯೇ ಪಂಡಿತರು ಚರ್ಚೆಮಾಡುತ್ತಿದ್ದ ಯಾವುದೋ