ಈ ಪುಟವನ್ನು ಪ್ರಕಟಿಸಲಾಗಿದೆ

ಐದನೆಯ ಅಧ್ಯಾಯ

ಸಾಧನಾ


ಶ್ರೀ ರಾಮಕೃಷ್ಣ ಪರಮಹಂಸರವರು ಕಲ್ಕತ್ತೆಗೆ ಬಂದು ದಕ್ಷಿ ಹೇಶ್ವರದಲ್ಲಿ ನಿಂತಾಗಿನಿಂದ ಅವರ “ಸಾಧನಕಾಲ” ವಾರಂಭ ನಾಯಿತೆಂದು ಹೇಳಬಹುದು. ಅವರು ಕಾಳೀದೇವಸ್ಥಾನದಲ್ಲಿ ಅರ್ಚಕರ ಕೆಲಸವನ್ನು ವಹಿಸಿದಮೇಲೆ ಹನ್ನೆರಡು ವರ್ಷಕಾಲ ವಿಧ ವಿಧವಾದ ಸಾಧನಗಳನ್ನು ಕೈಕೊಂಡು ಅವುಗಳಲ್ಲಿ ಸಿದ್ದರಾದದ್ದನ್ನು ವಿವರಿಸುವುದಕ್ಕೆ ಮೊದಲು "ಸಾಧನ” ವೆಂದರೇನು ಎಂಬುದನ್ನು ಇಲ್ಲಿ ಸ್ವಲ್ಪ ವಿಚಾರಮಾಡುತ್ತೇವೆ.

“ಸರ್ವಂಖಲ್ವಿದಂಬ್ರಹ್ಮ"––ಜಗತ್ತಿನಲ್ಲಿರುವ ಸ್ಥೂಲ, ಸೂಕ್ಷ್ಮ, ಚೇತನ, ಅಚೇತನ, ವಸ್ತುಗಳೆಲ್ಲವೂ ಒಂದೇ ಅದ್ವಯಬ್ರಹ್ಮ ವಸ್ತು : ಕಲ್ಲು, ಮಣ್ಣು, ಮನುಷ್ಯ, ಪಶು, ಗಿಡ, ಮರ, ದೇವತೆಗಳು ಈ ಸಮಸ್ತವೂ ಬೇರೆಬೇರೆಯಾಗಿ ಕಂಡರೂ ಅವೆಲ್ಲವೂ ಒಂದೇ ವಸ್ತು ಎಂದು ಶಾಸ್ತ್ರವು ಹೇಳುತ್ತದೆ. ಅದೇ ಮಾತನ್ನೇ ಜ್ಞಾನಿಗಳು "ಅಂತಾ ರಾಮಮಯಂ, ಈ ಜಗಮಂತಾ ರಾಮಮಯಂ" ಎಂದು ಹೇಳಿದ್ದಾರೆ. ಆದರೆ ಎಷ್ಟು ಪರೀಕ್ಷಿಸಿ ನೋಡಿದರೂ ಜಗತ್ತಿನಲ್ಲಿ ಬೇರೆಬೇರೆ ಪದಾರ್ಥಗಳು ಕಾಣುವುದೇ ಹೊರತು ನಮಗೆ ದೇವರು ಎಲ್ಲಿಯೂ ಕಂಡುಬರುವುದಿಲ್ಲ. ಹೀಗಾಗಲು ನಮ್ಮಭ್ರಾಂತಿಯೇ ಕಾರಣ; ಭ್ರಾಂತಿಗೆ ಅಜ್ಞಾನವೇ ಕಾರಣ ; ಎಂದಿನವರೆಗೆ ಅಜ್ಞಾನವು ನಾಶವಾಗಿ ಜ್ಞಾನ ಹುಟ್ಟುವುದಿಲ್ಲವೋ ಅಂದಿನವರೆಗೂ ಜಗತ್ಸಂಬಂಧವಾದ ನಮ್ಮ ತಿಳಿವಳಿಕೆಯು ಭ್ರಾಂತಿಯುಕ್ತವಾದದ್ದೆಂದು ನಮಗೆ ಗೊತ್ತಾಗುವುದಿಲ್ಲ. ಸ್ವಪ್ನದಲ್ಲಿ ಕಾಣುವುದೆಲ್ಲಾ ಆಗ್ಗೆ ನಿಜವೆಂದೇ ತೋರುತ್ತಿರುತ್ತದೆ. ಅದು ಮಿಥ್ಯೆಯೆಂದು