ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೪೭

ಗೊತ್ತಾಗಬೇಕಾದರೆ ನಮಗೆ ಎಚ್ಚರವಾಗಿ ಜಾಗೃದವಸ್ಥೆಯೊಡನೆಅದನ್ನು ಹೋಲಿಸಿ ನೋಡಬೇಕು. ಅಲ್ಲಿಯವರೆಗೂ ಅದು ನಿಜನಾಗಿಯೇ ಕಾಣುತ್ತಿರುತ್ತದೆ. ಇಂಥ ಭ್ರಾಂತಿಜನಕವಾದ ಅಜ್ಞಾನವು ನಾಶವಾಗಿ ಈಶ್ವರಸಾಕ್ಷಾತ್ಕಾರವಾಗುವಂತೆ ನಾವು ಮಾಡಬೇಕಾದ ಪ್ರಯತ್ನಕ್ಕೆ 'ಸಾಧನ' ವೆಂದು ಹೆಸರು.

ಈ ಪ್ರಯತ್ನವನ್ನು ಮುಖ್ಯವಾಗಿ ಜ್ಞಾನಮಾರ್ಗ, ಭಕ್ತಿಮಾರ್ಗವೆಂದು ಎರಡು ಭಾಗ ಮಾಡಬಹುದು. ಅವುಗಳಲ್ಲಿ ಜ್ಞಾನಮಾರ್ಗವು ಬಹುಕಠಿಣ. ಜನ್ಮಜನ್ಮಾಂತರದ ಕುಸಂಸ್ಕಾರಗಳಿಂದ ತುಂಬಿದ ಮನಸ್ಸುಳ್ಳ ಮನುಷ್ಯ ನಾಮಾನ್ಯನಿಗೆ ಈ ಮಾರ್ಗವನ್ನು ಅವಲಂಬನೆಮಾಡುವುದು ಅಸಾಧ್ಯ. ಭಕ್ತಿ ಮಾರ್ಗವುಅಷ್ಟು ಕ್ಲೇಶಕರವಾದದ್ದಲ್ಲ. ಪ್ರತಿಯೊಬ್ಬನೂ ಅವನವನ ಯೋಗ್ಯತಾನುಸಾರವಾಗಿ ಈ ಮಾರ್ಗವನ್ನು ಅವಲಂಬಿಸಬಹುದು. ಕಲಿಯುಗಕ್ಕೆ ಈ ಮಾರ್ಗವನ್ನೇ ದೇವರು ವಿಧಿಸಿದ್ದಾನೆಂದು ಪರಮಹಂಸರು ಹೇಳುತ್ತಿದ್ದರು. ಈ ಮಾರ್ಗಗಳು ಬೇರೆಬೇರೆ ಎಂದು ಹೇಳಿದರೂ ಕೊನೆಗೆ ಅವೆರಡೂ ಒಂದೇ ಸ್ಥಳದಲ್ಲಿ ಕೂಡುತ್ತವೆ. ಜ್ಞಾನ ಮಾರ್ಗಾವಲಂಬಿಯೂ ಭಕ್ತಿಮಾರ್ಗಾವಲಂಬಿಯೂಇಬ್ಬರೂಕೊನೆಗೆ ಈಶ್ವರ ಸಾಕ್ಷಾತ್ಕಾರವನ್ನು ಪಡೆಯುತ್ತಾರೆ.

ಲೋಕಹಿತಾರ್ಥವಾಗಿ ಈಶ್ವರನು ಮನುಷ್ಯ ಜನ್ಮವನ್ನು ತಾಳಿದಾಗ ಆತನೂ ಸಾಧನೆ ಮಾಡಬೇಕಾಗುತ್ತದೆ. (ಅವತಾರಪುರುಷರ ಜೀವನ ಚರಿತ್ರೆಗಳಲ್ಲಿ ಸಾಧಕಭಾವಾಲೋಚನೆಯನ್ನುವಿಸ್ತಾರವಾಗಿ ಮಾಡಿಲ್ಲ. ಆದರೂ ರಾಮಾಯಣ, ಭಾಗವತಮುಂತಾದ ಗ್ರಂಥಗಳನ್ನು ವಿಮರ್ಶೆಮಾಡಿ ಓದಿದವರಿಗೆ ರಾಮ,ಕೃಷ್ಣ ಮೊದಲಾದ ಅವತಾರ ಪುರುಷರೂ ಸಾಧನೆ ಮಾಡಿದರೆಂಬುದು ಗೊತ್ತಾಗದೇ ಇರಲಾರದು).ಜ್ಞಾನಸ್ವರೂಪನೂ, ಮಾಯಾತೀತನೂ, ಆದ ಪರಮಾತ್ಮನೂ ಕೂಡ ಆಜ್ಞಾನಮಾಯೆಗಳಿಂದಮುಕ್ತನಾಗಲು ಸಾಧನೆ ಮಾಡುತ್ತಾನೆಂಬುದು ವಿಚಿತ್ರವಾಗಿ ಕಾಣ