ಯಿಂದ ಕೆಲವು ಅಗಳುಗಳನ್ನು ತೆಗೆದುಕೊಂಡು ಅದೂ ದೇವಿಯಪ್ರಸಾದವೆಂಬ ಬುದ್ಧಿಯಿಂದ ಸ್ವೀಕರಿಸಿದರು. ಮನಸ್ಸಿನಿಂದಅಹಂಕಾರಾಭಿಮಾನಗಳನ್ನು ದೂರಮಾಡುವುದಕ್ಕಾಗಿಯೂ ಮತ್ತುಹೊಲೆಯ ಮಾದಿಗ ಮುಂತಾದ ಜನಗಳಿಗಿಂತಲೂ ತಾವು ಯಾವಅ೦ಶದಲ್ಲಿಯೂ ದೊಡ್ಡವರಲ್ಲವೆಂದು ದೃಢಮಾಡಿಕೊಳ್ಳುವದಕ್ಕಾಗಿಯೂ ಹಲಾಲುಕೋರರು ತೊಳೆಯತಕ್ಕ ಅಶುಚಿಸ್ಥಾನವನ್ನು ಸ್ವಹಸ್ತದಿಂದ ಚೊಕ್ಕಟಮಾಡಿದರು. ಶ್ರೀಗಂಧ, ಅಮೇಧ್ಯ ಎರಡುಪದಾರ್ಥಗಳೂ ಪಂಚಭೂತ ವಿಕಾರಗಳೆಂದು ನಿರ್ಧರಮಾಡಿಕೊಂಡು ನಾಲಗೆಯಿಂದ ಅಮೇಧ್ಯವನ್ನು ಮುಟ್ಟಿದರು. ಇದೇಮೊದಲಾದ ನಾವು ಹಿಂದೆ ಎಂದೂ ಕೇಳಿಯೇ ಅರಿಯದ ಅನೇಕಸಾಧನೆಗಳನ್ನು ಈ ಕಾಲದಲ್ಲಿ ಮಾಡಿದರು. ದಕ್ಷಿಣೇಶ್ವರಕ್ಕೆಬಂದ ಒಬ್ಬ ಸಿದ್ಧ ಪುರುಷನ ಸಹಾಯದಿಂದ ಹಠಯೋಗವನ್ನು ಅಭ್ಯಾಸಮಾಡಿದ್ರೂ ಈ ಕಾಲದಲ್ಲಿಯೇ ಶಿಷ್ಯ ಮಂಡಲಿಯಲ್ಲಿದ್ದಕೆಲವರು ಈ ಹಠಯೋಗದಲ್ಲಿ ಉಪದೇಶಮಾಡಿಸಿಕೊಳ್ಳಬೇಕೆಂದು ಪರಮಹಂಸರ ಹತ್ತಿರಕ್ಕೆ ಹೋಗಿದ್ದಾಗ ಅವರಿಗೆ ಹೀಗೆಂದು ಉತ್ತರಕೊಡುತ್ತಿದ್ದರು :-(ಆ ಸಾಧನಗಳೆಲ್ಲಾ ಈ ಕಾಲಕ್ಕಲ್ಲವೋ ! ಕಲಿಗಾಲದಲ್ಲಿ ಜೀವಿಗಳು ಅಲ್ಪಾಯುಗಳು ಮತ್ತು ಅನಗತಪ್ರಾಣರು;ಈಗ ಹಠಯೋಗ ಅಭ್ಯಾಸಮಾಡಿ ದೇಹಗಟ್ಟಿ ಮಾಡಿಕೊಂಡು, ರಾಜಯೋಗ ಅಭ್ಯಾಸಮಾಡಿ ಈಶ್ವರನನ್ನು ಪ್ರಾರ್ಥಿಸುವುದಕ್ಕೆ ಸಮಯಎಲ್ಲಿದೆ ? ಅದೂ ಅಲ್ಲದೆ ಹಠಯೋಗವನ್ನು ಅಭ್ಯಾಸಮಾಡಬೇಕಾದರೆ ಅದರಲ್ಲಿ ಸಿದ್ದನಾದ ಗುರುವಿನ ಜೊತೆಯಲ್ಲಿಯೇ ಮೂರುಹೊತ್ತೂ ಇದ್ದುಕೊಂಡು ಊಟ ತಿಂಡಿತೀರ್ಥಗಳಲ್ಲೆಲ್ಲಾ ಅವನುಹೇಳಿದ ಹಾಗೆ ಕೇಳಿಕೊಂಡು ಬಹುಕಾಲ ಕಠೋರ ನಿಯಮದಿಂದಿರಬೇಕು. ನಿಯಮ ಮಾಡುವುದರಲ್ಲಿ ಒಂದಿಷ್ಟು ಹೆಚ್ಚು ಕಮ್ಮಿಯಾಯಿತು ಅಂದರೆ ಏನಾದರೂ ರೋಗಗಳು ತಲೆಹಾಕಿಕೊಳ್ಳುವುವು ; ಅನೇಕ ಸಮಯಗಳಲ್ಲಿ ಇಂಥಸಾಧಕರು ಸತ್ತೇಹೋಗುವರು
ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೭೩
ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೫೭