ಈ ಪುಟವನ್ನು ಪ್ರಕಟಿಸಲಾಗಿದೆ
೬೨
ಶ್ರೀ ರಾಮಕೃಷ್ಣ ಪರಮಹಂಸರ

ಕಣ್ಣೀರನ್ನು ಒರಸಿಕೊಳ್ಳುತ್ತಾ "ನೀನು ಇಲ್ಲಿ ಇದ್ದೀಯೇನು? ನೀನು ಗಂಗಾತೀರದಲ್ಲಿರುವೆ, ಎಂದು ತಿಳಿದು ನಿನ್ನನ್ನು ಹುಡುಕಿಕೊಂಡು ತಿರುಗಾಡುತ್ತಿದ್ದೆನು. ಇಷ್ಟು ದಿನಗಳ ಮೇಲೆ ನಿನ್ನನ್ನು ನೋಡಿದೆನು"ಎಂದು ಹೇಳಿದಳು. ಪರಮಹಂಸರು “ ಅಮ್ಮಾ ನನ್ನ ಸುದ್ದಿನಿಮಗೆ ಹೇಗೆ ಗೊತ್ತಾಯಿತು ? ” ಎಂದು ಕೇಳಲು ಬ್ರಾಹ್ಮಣಿಯು "ಜಗದಂಬೆಯ ಅನುಗ್ರಹದಿಂದ ನನಗೆ ಬಹಳ ದಿನಗಳ ಹಿಂದೆ ಈಸುದ್ದಿಯು ಗೊತ್ತಾಯಿತು " ಎಂದು ಉತ್ತರಕೊಟ್ಟಳು. ಆಮೇಲೆ ಅವರು ಆಕೆಯ ಹತ್ತಿರ ಕುಳಿತು ಮಕ್ಕಳು ತಮ್ಮ ತಾಯಿಯ ಮುಂದೆ ಹೇಳುವ ಹಾಗೆ ತಮ್ಮ ಅಪೂರ್ವವಾದ ದರ್ಶನಗಳು, ಪೂಜೆ ಮಾಡುತ್ತ ಮಾಡುತ್ತ ಬಾಹ್ಯ ಜ್ಞಾನಹೋಗುವುದು, ಮೈಯರಿ, ನಿದ್ರೆಯಲ್ಲಿದಿರುವುದು, ಜನಗಳು ಹುಚ್ಚು ಹಿಡಿದಿದೆ ರೋಗ ಬಂದಿದೆ ಎಂದು ಹೇಳುವುದು ಮುಂತಾದ ವಿಷಯಗಳನ್ನೆಲ್ಲ ಮುಚ್ಚು ಮರೆ ಇಲ್ಲದೆ ಹೇಳಿ “ ನನಗೆ ಯಾಕೆ ಹೀಗಾಗುತ್ತದೆ? ನನಗೆ ನಿಜವಾಗಿಯೂ ಹುಚ್ಚು ಹಿಡಿದಿದೆಯೇ ? ದೇವಿಯನ್ನು ಮನಃಪೂರ್ವಕವಾಗಿ ಧ್ಯಾನಮಾಡಿದ್ದರಿಂದ ನನಗೆ ರೋಗಬಂದಿದೆಯೆ? ” ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಭೈರವಿಯು “ನಿನಗೆ ಹುಚ್ಚೆಂದು ಹೇಳಿದವರಾರಪ್ಪಾ! ನಿನಗೆ ಹುಚ್ಚು ಹಿಡಿದಿಲ್ಲ, ಇದು ಮಹಾಭಾವದಲಕ್ಷಣ. ನಿನ್ನ ಈ ಸ್ಥಿತಿಯು ಯಾರಿಗೂ ಗೊತ್ತಾಗುವುದಿಲ್ಲ. ಆದ್ದರಿಂದಲೇಅವರು ಹಾಗೆ ಹೇಳುವುದು. ರಾಧೆಗೂ ಚೈತನ್ಯನಿಗೂ ಹೀಗೆಯೇಆಗಿತ್ತು. ಇದೆಲ್ಲವೂ ಭಕ್ತಿಶಾಸ್ತ್ರದಲ್ಲಿ ಬರೆದಿದೆ. ಅದನ್ನೆಲ್ಲ ನಾನು ನಿನಗೆ ಓದಿಹೇಳುತ್ತೇನೆ. ” ಎಂದು ಹೇಳಿದಳು.

ಭೈರವಿಯು ಭಕ್ತಿಶಾಸ್ತ್ರವನ್ನು ಚೆನ್ನಾಗಿ ಓದಿದ ಪಂಡಿತಳಾಗಿದ್ದಳು. ಆಕೆಯು ಚೈತನ್ಯ ಚರಿತಾಮೃತ, ಚೈತನ್ಯಭಾಗವತ ಮುಂತಾದ ಭಕ್ತಿ ಶಾಸ್ತ್ರಗ್ರಂಥಗಳಲ್ಲಿ ಚೈತನ್ಯದೇವನ ನಡೆನುಡಿ ಆಚಾರವ್ಯವಹಾರ ಮುಂತಾದುವುಗಳ ವಿಚಾರವಾಗಿ ಏನೇನು ಬರೆದಿದೆಯೊ ಅದರೊಡನೆ ಪರಮಹಂಸರ ಲಕ್ಷಣಗಳನ್ನೆಲ್ಲ ಹೋಲಿಸಿ