ಇದಾದಮೇಲೆ ಪರಮಹಂಸರು ಮಧುರಭಾವ ಸಾಧನೆಯಲ್ಲಿಪ್ರವೃತ್ತರಾಗಿ ಹೆಂಗಸರಿಗೆ ತಕ್ಕ ವೇಷಭೂಷಣಗಳನ್ನು ಹಾಕಿಕೊಳ್ಳಬೇಕೆಂದು ಅಪೇಕ್ಷಿಸಿದರು. ಪರಮಭಕ್ತ ಮಧುರಾಮೋಹನನುನಾನಾವಿಧವಾದ ಬಹಳ ಬೆಲೆಯುಳ್ಳ ವಸ್ತ್ರಾಭರಣಗಳನ್ನು ತಂದುಕೊಟ್ಟನು. ಇವೆಲ್ಲವನ್ನೂ ಧರಿಸಿಕೊಂಡು ಪರಮಹಂಸರು ರಾಧೆಯಭಾವದಲ್ಲಿ ಎಷ್ಟರಮಟ್ಟಿಗೆ ಮಗ್ನರಾದರೆಂದರೆ, ಅವರಿಗೆ ತಾವು ಗಂಡಸರೆಂಬ ಜ್ಞಾನವೇ ಸಂಪೂರ್ಣವಾಗಿ ಹೋಗಿ ಪ್ರತಿಚಿಂತೆ, ನಡವಳಿಕೆ,ಮಾತು, ಕಥೆ ಎಲ್ಲ ಹೆಂಗಸರ ಹಾಗಾಯಿತು. ಹೃದಯನು ಆವಿಚಾರವಾಗಿ, “ ಒಂದು ದಿನ ಮಧುರಾನಾಥನು ನನ್ನನ್ನು ಅಂತ:ಪುರಕ್ಕೆ ಕರೆದುಕೊಂಡುಹೋಗಿ ಹೇಳು ನೋಡೋಣ, ಇವರಲ್ಲಿ ನಿಮ್ಮಮಾವಯಾರು ? ಎಂದು ಕೇಳಿದನು. ನಾನು ಎಷ್ಟೋದಿನಗಳಿಂದ ಆತನ ಜೊತೆಯಲ್ಲಿಯೇ ಇದ್ದರೂ ಆಗ ಗುರುತು ಹಿಡಿಯುವುದಕ್ಕಾಗಲಿಲ್ಲ.” ಎಂದು ಹೇಳಿದನಂತೆ. ಹೀಗೆ ರಾಧೆಯ ಭಾವದಲ್ಲಿಯೇ ತನ್ಮಯರಾಗಿ ಸಾಧನೆ ಮಾಡುತ್ತಿರಲು ಶ್ರೀ ಕೃಷ್ಣನ ದರ್ಶನವಾಯಿತು. ಹಿಂದೆ ಪ್ರತ್ಯಕ್ಷವಾದ ಇತರ ದೇವಮೂರ್ತಿಗಳಂತೆಶ್ರೀ ಕೃಷ್ಣನ ಮೂರ್ತಿಯೂ ಅವರ ದೇಹದೊಳಗೇ ಐಕ್ಯವಾಯಿತು.
ಮಧುರಭಾವ ಸಾಧನೆಯು ಮುಗಿದ ಕೆಲವು ದಿನಗಳಲ್ಲಿಯೇಪರಮಹಂಸರು ತೋತಾಪುರಿಗೋಸ್ವಾಮಿ ಎಂಬೊಬ್ಬ ಸನ್ಯಾಸಿ ಯಿಂದ ಉಪದೇಶವನ್ನು ಪಡೆದು ವೇದಾಂತಮತಸಾಧನೆಗೆಆರಂಭಮಾಡಿದರು. ' ತೋತಾ ಪುರಿ ' ಎಂಬಾತನು, ನರ್ಮದಾತೀರದಲ್ಲಿ ಬಹುಕಾಲ ತಪಸ್ಸು ಮಾಡಿ ನಿರ್ವಿಕಲ್ಪ ಸಮಾಧಿಯನ್ನುಹೊಂದಿ ಬ್ರಹ್ಮಸಾಕ್ಷಾತ್ಕಾರವನ್ನು ಪಡೆದಿದ್ದನು. ಬ್ರಹ್ಮಜ್ಞಾನವಾದಮೇಲೆ ಆತನ ಮನಸ್ಸಿನಲ್ಲಿ ತೀರ್ಥಾಟನೆ ಮಾಡಬೇಕೆಂಬ ಸಂಕಲ್ಪಹುಟ್ಟಿತು. ಈ ಸಂಕಲ್ಪದ ಪ್ರೇರಣೆಯಿಂದ ಆತನು ಪುಣ್ಯಕ್ಷೇತ್ರದಿಂದ ಪುಣ್ಯಕ್ಷೇತ್ರಕ್ಕೆ ಹೋಗುತ್ತ ದಕ್ಷಿಣೇಶ್ವರಕ್ಕೆ ಬಂದು ಕಾಳಿದೇವಸ್ಥಾನದ ಒಂದು ಮಂಟಪದಲ್ಲಿ ಇಳಿದುಕೊಂಡನು. ಆಗ