ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ.
೬೭

ಯನ್ನು ಗ್ರಹಣಮಾಡುತ್ತಿತ್ತಂತೆ. ಹೀಗೆ ಆತನು ಯಾವ ವಿಗ್ರಹದ ಅವಲ೦ಬನೆಯಿಂದ ತನಗೆ ದಿವ್ಯ ದರ್ಶನವಾಗಿತ್ತೋ ಆ ರಾಮವಿಗ್ರಹ ವನ್ನೇ ಸೇವೆಮಾಡುತ್ತ ಅನೇಕ ಪುಣ್ಯಕ್ಷೇತ್ರಗಳನ್ನು ಸುತ್ತಿಕೊಂಡು ದಕ್ಷಿಣೇಶ್ವರಕ್ಕೆ ಬಂದಿದ್ದನು.

ಪರಮಹಂಸರು ಜಟಾಧಾರಿಯನ್ನು ನೋಡಿದ ಕೂಡಲೆ, ಅವನ ವೃತ್ತಾಂತವನ್ನೆಲ್ಲ ತಿಳಿದುಕೊಂಡರು. ಮನೆದೇವರಾದ ರಘು ವೀರನನ್ನು ಯಥಾವಿಧಿಯಾಗಿ ಪೂಜೆಮಾಡುವುದಕ್ಕಾಗಿ ಬಹುದಿನಗಳ ಕೆಳಗೆ ರಾಮಮಂತ್ರದ ಉಪದೇಶವನ್ನು ಹೊಂದಿದ್ದರೂ ಅವರಿಗೆ ರಾಮಚಂದ್ರನು ತಾವು ಸೇವಿಸಬೇಕಾದ ಪ್ರಭು ಎಂಬ ದಾಸ ಭಾವವಿತ್ತೇ ಹೊರತು ಬೇರೆ ಭಾವವಿರಲಿಲ್ಲ. ಈಗ ಜಟಾಧಾರಿಯ ಹತ್ತಿರವಿದ್ದ ವಿಗ್ರಹವನ್ನು ನೋಡಿ ಅದೇ ರಾಮಚಂದ್ರನಲ್ಲಿ ವಾತ್ಸಲ್ಯ ಭಾವವು ಉತ್ಪನ್ನವಾಯಿತು. ಮಂತ್ರೋಪದೇಶ ಮೂಲಕ ಜಟಾ ಧಾರಿಯು ಹೇಳಿದ ಮಾರ್ಗವನ್ನು ಹಿಡಿದು ಪರಮಹಂಸರು ಬಾಲ ರಾಮಚಂದ್ರನ ದರ್ಶನಲಾಭವನ್ನು ಪಡೆದರು. ಆ ದಿವ್ಯಮೂರ್ತಿಯ ಧ್ಯಾನದಲ್ಲಿಯೇ ಮಗ್ನರಾಗಿರಲು ಅತ್ಯಲ್ಪ ಕಾಲದಲ್ಲಿ ಕೆಳಗೆ ಹೇಳುವ ಅಭಿಪ್ರಾಯದ ಪ್ರತ್ಯಕ್ಷಾನುಭವವುಂಟಾಯಿತು :——

ಜೋರಾಂ ದಶರಥಕಿ ಬೇಟಾ,
ಓಹಿರಾ೦ ಘಟ್ ಘಟ್ ಮೇಲೆ ಟಾ !
ಓಹಿರಾ೦ ಜಗತ್ ಪಶೇರಾ,
ಓಹಿರಾ೦ ಸಬ್ಸೇನೇಯಾರಾ||

ಆರ್ಥ:— ಶ್ರೀರಾಮಚಂದ್ರನು ದಶರಥಪುತ್ರನು ಮಾತ್ರವೇ ಅಲ್ಲ. ಪ್ರತಿಶರೀರವನ್ನೂ ಆಶ್ರಯಮಾಡಿ ಜೀವಭಾವದಿಂದ ಪ್ರಕಾಶಿ ಸುತ್ತಿದ್ದಾನೆ. ಹೀಗೆ ಪ್ರಾಣಿಗಳ ಆ೦ತರ್ಯದಲ್ಲಿ ಸೇರಿ ಜಗದ್ರೂಪ ವಾಗಿ ಇದ್ದರೂ ಜಗತ್ತಿನ ಎಲ್ಲಾ ಪದಾರ್ಥಗಳಿಂದಲೂ ಬೆರೆಯಾ ಗಿದ್ದಾನೆ. ಯಾವಾಗಲೂ ಮಾಯಾರಹಿತ ನಿರ್ಗುಣ ಸ್ವರೂಪ ದಲ್ಲಿ ಇರುತ್ತಾನೆ.