ದಾದರೆ ಆಗಬಹುದು ಎಂದು ಹೇಳಿದರು. ಆತನು ಅದಕ್ಕೆ ಒಪ್ಪಿ ಒಂದು ಶುಭದಿವಸ ಶ್ರಾದ್ಧಾದಿಕ್ರಿಯೆಗಳನ್ನು ಮಾಡಿಸಿ, ಆತ್ಮ ಪಿಂಡವನ್ನು ಹಾಕಿಸಿ ಸನ್ಯಾಸವನ್ನು ಕೊಟ್ಟನು. ವೇದಾಂತಸಾಧನೆಯನ್ನು ಕುರಿತು ಪರಮಹಂಸರು ಹೀಗೆ ಹೇಳುತ್ತಿದ್ದರು. "ಗೋಸ್ವಾಮಿಯು ದೀಕ್ಷೆ ಕೊಟ್ಟು ಅನೇಕ ಸಿದ್ದಾಂತವಾಕ್ಯಗಳನ್ನು ಉಪದೇಶಮಾಡಿ ಮನಸ್ಸನ್ನು ನಿರ್ವಿಕಲ್ಪ ಮಾಡಿ ಆತ್ಮಧ್ಯಾನದಲ್ಲಿ ಮಗ್ನನಾಗುವಂತೆ ಹೇಳಿದನು. ಆದರೆ ಧ್ಯಾನಮಾಡುವುದಕ್ಕೆ ಕುಳಿತು ಎಷ್ಟು ಪ್ರಯತ್ನ ಮಾಡಿದರೂ ಮನಸ್ಸನ್ನು ನಿರ್ವಿಕಲ್ಪಮಾಡುವುದಕ್ಕೆ ಎಂದರೆ ನಾಮರೂಪಗಳ ಮೇರೆಯನ್ನು ದಾಟಿಸುವುದಕ್ಕೆ ನನಗೆ ಸಾಧ್ಯವಾಗಲಿಲ್ಲ. ಇತರ ವಿಚಾರಗಳಿಂದ ಮನಸ್ಸು ಸ್ವಾಭಾವಿಕವಾಗಿಯೇ ಪಾರಾಗುತ್ತಿತ್ತು. ಆದರೆ ಹೀಗೆ ವಾರಾದ ಒಡನೆಯೇ ಅದರಲ್ಲಿ ಜಗದಂಬೆಯ ಚಿರಪರಿಚಿತವಾದ ಚಿದ್ಘನೋಜ್ವಲಮೂರ್ತಿಯಡ ಆವಿರ್ಭಾವವಾಗಿ ಎಲ್ಲವಿಧವಾದ ನಾಮರೂಪಗಳನ್ನು ತ್ಯಾಗಮಾಡಬೇಕೆಂಬ ಸಂಕಲ್ಪವನ್ನು ಮರೆಸಿಬಿಡುತ್ತಿತ್ತು. ಮೇಲಿಂದ ಮೇಲೆ ಹೀಗಾಗುವದನ್ನು ನೋಡಿ ನಿರಾಶೆಯಾಗಿ ಅವನನ್ನು ಕುರಿತು— ಆಗುವದಿಲ್ಲ! ಮನಸ್ಸನ್ನು ಸಂಪೂರ್ಣವಾಗಿ ನಿರ್ವಿಕಲ್ಪ ಮಾಡಿ ಆತ್ಮ ಧ್ಯಾನದಲ್ಲಿ ಮುಳುಗಿಸಲು ನನ್ನ ಕೈಲಾಗುವುದಿಲ್ಲ——ಎಂದು ಹೇಳಿದೆನು. ಅದಕ್ಕೆ ಆತನು ಬಹಳೆ ಸಿಟ್ಟಾಗಿ ಏನು ! ಆಗುವುದಿಲ್ಲವೆ ? ಎಂಥಮಾತು! ಎಂದು ಹೇಳಿ, ಆ ಕೊರಡಿಯಲ್ಲಿ ಬಿದ್ದಿದ್ದ ಒಂದು ಗಾಜಿನ ಚೂರನ್ನು ತೆಗೆದುಕೊಂಡು ತೀಕ್ಷ್ಣವಾದ ಅದರ ಮೊನೆಯಿಂದ ನನ್ನ ಹುಬ್ಬಿನನಡುವೆ ಜೋರಾಗಿ ಎಳೆದು ಗಾಯಮಾಡಿ ಈ ಬಿಂದುವಿನ ಬಲದಿಂದ ಮನಸ್ಸನ್ನು ತಿರುಗಿಸು——ಎಂದು ಹೇಳಿದನು. ಆಗ ಪುನಃ ದೃಢಸಂಕಲ್ಪ ಮಾಡಿ ಧ್ಯಾನಕ್ಕೆ ಕುಳಿತೆನು. ಹಿಂದಿನಹಾಗೆ ಜಗದಂಬೆಯ ಮೂರ್ತಿಯ ಆವಿರ್ಭಾವವಾದ ಒಡನೆಯೇ ಜ್ಞಾನಖಡ್ಗದಿಂದ ಅದನ್ನು ಮನಸ್ಸಿನಲ್ಲಿಯೇ ಎರಡು ಹೋಳಾಗಿ ಸೀಳಿಹಾಕಿದೆನು. ಆಮೇಲೆ ಯಾವವಿಧವಾದ ಸಂಕಲ್ಪ
ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೮೬
ಈ ಪುಟವನ್ನು ಪ್ರಕಟಿಸಲಾಗಿದೆ
೭0
ಶ್ರೀ ರಾಮಕೃಷ್ಣಪರಮಹಂಸರ