ಈ ಪುಟವನ್ನು ಪ್ರಕಟಿಸಲಾಗಿದೆ



5



ಯನ್ನು ತಿರಸ್ಕರಿಸತಕ್ಕ ಶರೀರಕಾಂತಿಯುಳ್ಳವನಾಗಿಯೂ, ಸರ್ವಾ
ಲಂಕಾರಶೋಭಿತನಾಗಿಯೂ, ಕೋಟಿಸೂರ್ಯ ಪ್ರಭಾಭಾಸಮಾನನಾಗಿ
ಯದುಕುಲದಲ್ಲವತರಿಸಿದನು. ದೇವತೆಗಳು ಪುಷ್ಪವರ್ಷವನ್ನು ಸುರಿ
ಸುತ ಪೂಮಾಲಿಕೆಗಳಿಂದ ಪೂಜಿಸಿದರು.

      ಇಂತು ಜಗದಾನಂದಕರವಾಗಿ ಅವತರಿಸಿದ ಭಗವಂತನ ಲೀಲಾವಿ
ಶೇಷವಾದ “ಶ್ರೀ ಕೃಷ್ಣ ಲೀಲೆ ” ಎಂಬೀ ಗ್ರಂಥದಲ್ಲಿ ವಿವರಿಸಿರುವ
ಗೋಪಿಯರು ಯಾರೆಂಬುದನ್ನು ವಿಚಾರಿಸಬೇಕಾದುದು ಅತ್ಯವಶ್ಯ
ಕವಾದವಿಷಯವು.

“ಓಂ|| ಶ್ರೀಮಹಾವಿಷ್ಣುಗ್ ಸಚ್ಚಿದಾನಂದಲಕ್ಷಣಗ್ ರಾಮಚಂದ್ರಂ
       ದೃಷ್ಟ್ಯಾ ಸರ್ವಾಂಗಸುಂದರಂ ಮುನಯೊವನಪಾಸಿನೊವಿಸ್ಮಿ
       ತಾ ಬಭೂವುಸ್ತಗ್ ಹೋಚುರ್ನೋವದ್ಯಮವತಾರಾನ್ಯೈಗ
       ಣ್ಯಂತೇ ಆಲಿಂಗಾವೋಭವಂತಮಿತಿ, ಭವಾಂತರೇಕೃಷ್ಣಾ
       ವತಾರೇ ಯೂಯಂಗೋಪಿಕಾಭೋತ್ವಾಮಾಮಾಲಿಂಗಧ”||
       (ಶ್ರೀ ಕೃಷ್ಣೋಪನಿಷತ್ತು)

       ಸಚ್ಚಿದಾನಂದ ಸ್ವರೂಪನಾದ ಶ್ರೀಮನ್ನಾರಾಯಣನು ಶ್ರೀರಾ
ಮಾವತಾರವನ್ನು ಪರಿಗ್ರಹಿಸಿ ಅರಣ್ಯವಾಸದಲ್ಲಿದ್ದಾಗ, ಸರ್ವಾಂಗ ಸುಂದ
ರನಾದ ಶ್ರೀರಾಮಚಂದ್ರನನ್ನು ನೋಡಿ ವಿಸ್ಮಿತರಾದ ಬ್ರಹ್ಮರ್ಷಿಗಳು
ಶ್ರೀರಾಮನನ್ನು ಆಲಿಂಗನಮಾಡಿಕೊಳ್ಳಬೇಕೆಂದು ಸಮ್ಮೋಹಗೊಂಡರು.
ಆಗ ಪರಮಾತ್ಮನಾದ ಶ್ರೀರಾಮನು ಬ್ರಹ್ಮರ್ಷಿಗಳ ಆಭೀಷ್ಟವನ್ನರಿತು
ಅವರೊಂದಿಗಿಂತೆಂದನು. ಎಲೈ ಬ್ರಹ್ಮರ್ಷಿಗಳಿರಾ ! ನಿಮ್ಮಭೀಷ್ಟವನ್ನು
ನಾನು ಬಲ್ಲೆನು. ಮುಂದೆ ನಾನು ಕೃಷ್ಣಾವತಾರವನ್ನು ಪರಿಗ್ರಹಿಸು
ವೆನು. ನೀವೆಲ್ಲರೂ ಗೋಪಿಯರಾಗಿ ಹುಟ್ಟಿರಿ. ಆಗ ನಿಮ್ಮ ಕೋರಿ
ಕೆಯನ್ನು ಸಫಲಗೊಳಿಸುವೆನು, ಎಂದಾಣತಿಯಿತ್ತನು. ಅದರಂತೆಯೇ
ವೇದಾಂತವೇದ್ಯನಾದ ಭಗವಂತನು ಶ್ರೀಕೃಷ್ಣನಾಗಿಯೂ, ಬ್ರಳ್ಮವೇ
ತ್ತರಾದ ಋಷಿಮುನಿಗಳು ಗೋಪಿಯರಾಗಿಯೂ ಅವತರಿಸಿದರು.