ಈ ಪುಟವನ್ನು ಪರಿಶೀಲಿಸಲಾಗಿದೆ

ಸಂವತ್ಸರ ಶಾವಣ ಬಹುಳ ನವಮಿ ವಿದ್ದಾಪ್ಯಮಿ ಮಂಗಳವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದ ವೃಷಭಲಗ್ನದಲ್ಲಿ ಸಂಭವಿಸಿದ ಸರ್ವೋತ್ತಮವಾದ ಅಭಿಜನ್ಮುಹೂರ್ತದಲ್ಲಿ ವರಬ್ರಹ್ಮನಾದ ಶ್ರೀಮನ್ನಾರಾಯಣನು ಇಚ್ಛಾಮಾತ್ರವಾದ ಲೀಲಾಮಾನುಷ ಶರೀರವನ್ನು ಪರಿಗ್ರಹಿಸಿ,ಪರಮ ಪುಣ್ಯಾತ್ಮರಾದ ದೇವಕಿ ವಸುದೇವರಿಗೆ ಪುತ್ರನಾಗಿ ಮಧುರಾನಗರದ ಸೆರೆಮನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನವತರಿಸಿದನು.

                                         * ತತ್ಕಾಲಗ್ರಹ ಸಂಪತ್ತಿ, *


- - ಗುರು ಲಗ್ನ/ ಚಂದ್ರ, ರಾಹು
- - ರಾಶಿ ಚಕ್ರ ರಾಶಿ ಚಕ್ರ ಕುಜ/ ಬುಧ
- - ರಾಶಿ ಚಕ್ರ ರಾಶಿ ಚಕ್ರ ರವಿ/ಶನಿ
ಕೇತು - - - - ಶುಕ್ರ

ಶ್ರೀಕೃಷ್ಣ ಪರಮಾತ್ಮನು ಅವತರಿಸಿದ ಕಾಲದಲ್ಲಿ ದಿಕ್ಕುಗಳು ನಿರ್ಮಲಗಳಾದುವು. ಸೂರ್ಯಚಂದ್ರಾದಿ ಗ್ರಹತಾರೆಗಳು ಶಾಂತವಾಗಿ ಪ್ರಕಾಶಿಸಿದುವು. ಗಗನಮಂಡಲವು ನಿಷ್ಕಳಂಕವಾಗಿ ಶೋಭಿಸಿತು. ಸಮುದ್ರಗಳು ಉತ್ತುಂಗ ತರಂಗ ರಂಜಿತವಾಗಿ ಮೆರೆದುವು. ನದೀನದಗಳು ನಿರ್ಮಲ ಜಲವಾಹಿನಿಗಳಾಗಿ ಕಂಗೊಳಿಸಿದುವು. ಸರೋವರಗಳಲ್ಲಿ ಕಮಲ ಪುಷ್ಪಗಳು ಅರುಣ ಕಾಂತಿಯಿಂದ ರಾಜಿಸಿದುವು, ಮಲಯಮಾರುತವು ಬೀಸಲಾರಂಭಿಸಿತು. ಫಲ-ಪುಷ್ಪಶೋಭಿತಮಾದ ತರುಲಾದಿಗಳು ಸುಗಂಧ ಬಂಧುರವಾಗಿ ವಿರಾಜಿಸಿದುವು. ದೇವತೆಗಳಾದಿಯಾಗಿ ಸಾಧು ಸಜ್ಜನರಿಗೆ ಆನಂದವುಕ್ಕಳಿಸಿತು. ಇಂತಹ ಪರಮಮಂಗಳಕರವಾದ ಸುಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮನು ಪದ್ಮಪತ್ರಗಳಮೇಲೆ ಪೂರ್ವ ಶಿರಸ್ಕನಾಗಿಯೂ, ಶಂಖಚಕ್ರ ಗದಾಪದ್ಮಗಳನ್ನು ಧರಿಸಿದ ಚತುರ್ಭುಜ ಪ್ರಶಸ್ತನಾಗಿಯೂ, ಕಮಲಾಕ್ಷನಾಗಿಯೂ, ವೈಜಯಂತೀ ವನಮಾಲಾ ವಿರಾಜಿತನಾಗಿಯೂ, ಪೀತಾಂಬರಧಾರಿಯಾಗಿಯೂ, ಮೇಘಮಾಲಿಕೆ