ಈ ಪುಟವನ್ನು ಪ್ರಕಟಿಸಲಾಗಿದೆ

೮೮ ಕೃಷ್ಣಲೀಲೆ

ಪುಣ್ಯವಶದಿಂದ ತಮ್ಮ ಸಂದರ್ಶನವು ಆಗಾಗ್ಗೆ ಲಭಿಸುತ್ತಿದೆ. ತಮ್ಮ
ಕಾರುಣ್ಯವು ನಮ್ಮ ಪಾಲಿಗೆ ಕಲ್ಪವೃಕ್ಷವಾಗಿ ನಮ್ಮನ್ನು ಸಂತೋಷ
ಗೊಳಿಸುತ್ತಿದೆ.

ನಾರದ:- ವಸುದೇವಾ! ಅಕಾರಣ ಕರುಣಾಪರಾಯಣನಾದ
ಶ್ರೀಮನ್ನಾರಾಯಣನೇ ನಿಮ್ಮವಶವರ್ತಿಯಾಗಿರುವಲ್ಲಿ ನನ್ನ ಕಾರುಣ್ಯ
ವೇನಿದೆ? ನಿಮ್ಮ ಧರ್ಮವೇ ನಿಮ್ಮನ್ನು ಕಾಪಾಡುತ್ತದೆ, ಸಜ್ಜನರಿಗೆ
ಎಂದೆಂದಿಗೂ ಭಯವಿಲ್ಲವು.

ದೇವಕಿ:- ಪೂಜ್ಯರೆ! ಗೋಕುಲಕ್ಕೆ ಹೋಗಿದ್ದಿರಾ ? ಮುದ್ದು
ಕುಮಾರನನ್ನು ನೋಡಿದಿರಾ ? ಕ್ಷೇಮವಾಗಿರುವನೆ?

ನಾರದ- ಸಾಧ್ವೀಮಣಿಯೆ ! ಅಖಂಡ ಬ್ರಹ್ಮಾಂಡಗಳಿಗೆ ಪ್ರಭು
ವಾಗಿ, ಅಖಿಲ ಲೋಕ ರಕ್ಷಕನಾಗಿ, ದುರ್ಜನರನ್ನು ಶಿಕ್ಷಿಸುವುದಕ್ಕಾ
ಗಿಯೂ, ಸಜ್ಜನರಿಗೆ ಕ್ಷೇಮವನ್ನುಂಟು ಮಾಡುವುದಕ್ಕಾಗಿಯೂ, ಭೂ
ಭಾರ ವರಿಹಾರಾರ್ಥವಾಗಿಯೂ, ಲೀಲಾಮಾನುಷ ಶರೀರವನ್ನು ಪರಿಗ್ರ
ಹಿಸಿ, ಯದುಕುಲದಲ್ಲಿ ನಿಮಗೆ ಪುತ್ರನಾಗಿ ಅವತರಿಸಿರುವ ಪರಂಧಾ
ಮನನ್ನು ನನ್ನ ಮಾನಸದಲ್ಲಿಯೂ, ಗೋಕುಲದಲ್ಲಿಯೂ, ಪಿಪೀಲಿಕಾದಿ
ಬ್ರಹ್ಮ ಪರ್ಯಂತವಾದ ಸಮಸ್ತ ಭೂತಕೋಟಿಯಲ್ಲಿಯೂ, ಸರ್ವದಾ
ನೋಡುತ್ತಿರುವೆನು. ಅಮ್ಮಾ! ನಿನ್ನ ಮುದ್ದು ಬಾಲಕನು ಮೂರ್ಲೋಕ
ಗಳಿಗೂ ಒಡೆಯನಮ್ಮ!

ಶ್ಲೋ|| ಅನನ್ಯಾಶ್ಚಿಂತಯಂತೋಮಾಂ| ಯೋಜನಾಃ ಪರ್ಯುಪಾಸತೇ||
      ತೇಷಾಂ ನಿತ್ಯಾಭಿಯುಕ್ತಾನಾಂ| ಯೋಗಕ್ಷೇಮಂ ವಹಾಮ್ಯಹಂ||

     ಏಕಚಿತ್ತ ಮನೋಭಾವದಿಂದ ತನ್ನನ್ನೇ ನಂಬಿರುವ ಭಕ್ತರ
ಯೋಗಕ್ಷೇಮಗಳನ್ನು ತಾನೇ ವಹಿಸತಕ್ಕವನಮ್ಮ ! ದೇವೀ ! ನಿನ್ನ
ಮುದ್ದು ಕುಮಾರನು ಕ್ಷೇಮವಾಗಿರುವನಮ್ಮ!

ದೇವಕಿ:- ಪೂಜ್ಯರೇ! ತಮ್ಮ ಧರ್ಮ ಗುಣವು ಪ್ರಶಂಸನೀಯ
ವಾದುದು. ನನ್ನಂತಹ ಪಾಮರರನ್ನು ಭವಸಾಗರದಿಂದ ಪಾರು
ಮಾಡಿಸಿ ಪರಮಾನಂದ ಪದನಿಗೆ ಮಾರ್ಗವನ್ನು ತೋರಿಸತಕ್ಕ ಕಾರಣ
ಗುರುಗಳಾದ ತಾವು ಆಗಾಗ್ಗೆ ದಯಮಾಡಿಸಿ, ನಮ್ಮನ್ನಾವರಿಸಿರುವ