ಈ ಪುಟವನ್ನು ಪ್ರಕಟಿಸಲಾಗಿದೆ

೮೯ಚತುರ್ಥಾಂಕಂ

ಆಜ್ಞಾನಾಂಧಕಾರವನ್ನು ಹೋಗಲಾಡಿಸಿ, ಜ್ಞಾನತೇಜವನ್ನು ಪ್ರಕಾಶ
ಗೊಳಿಸಬೇಕಾಗಿ ಪ್ರಾರ್ಥಿಸುವೆನು.
      (ಎಂದು ದೇವಕಿಯು ನಾರದರಿಗೆ ನಮಸ್ಕರಿಸುವಳು.)

ನಾರದ:- ಪುಣ್ಯಾತ್ಮಳೇ ! ಜ್ಞಾನಾನಂದಮಯನೂ, ಜ್ಞಾನಿಗ
ಳಿಗರಸನೂ, ಆಚಾರ್ಯರಿಗೆಲ್ಲರಿಗೂ ಆಚಾರ್ಯನೂ, ಪರಮಗುರುವೂ
ಆದ ಜಗನ್ನಾಥನೇ ನಿನಗೆ ಸುಲಭಸಾಧ್ಯನಾಗಿರುವನಮ್ಮ ! ದೇವಕೀ !
ನಿನಗೆ ನಿರತಿಶಯಾನಂದವುಂಟಾಗುವುದಮ್ಮ! ಎಷ್ಟೆ ಕಣ್ಮಗಳುಂ
ಟಾದಾಗ್ಯೂ ಹೆದರಬೇಡವಮ್ಮ!

ದೇವಕಿ:- ಆಜ್ಞೆಯನ್ನು ಶಿರಸಾವಹಿಸುವೆನು.

ನಾರದ:- ವಸುದೇವಾ ! ಸರ್ವಜ್ಞನಾದ ಭಗವಂತನು ನಿನ್ನ
ಕಷ್ಟ ಪರಂಪರೆಗಳನ್ನು ಚನ್ನಾಗಿಬಲ್ಲನು. ಕ್ಷೀಪ್ರದಲ್ಲಿಯೇ ನಿಮ್ಮ
ಬಂಧನಗಳೆಲ್ಲವೂ ಪರಿಹಾರವಾಗುವುವು. ಕಷ್ಟಸುಖಗಳನ್ನೆಲ್ಲಾ ಭಗ
ವಂತನಿಗರ್ಪಿಸಿ ನಿಶ್ಚಿಂತರಾಗಿ ಕಾಲಕಳೆಯಿರಿ. ನಿಮಗೆ ಮಂಗಳ
ವಾಗುವುದು.

ದೇವಕೀ ವಸುದೇವರು:- ಮಹದಾಜ್ಞೆ ! ( ಎಂದು ಕೈಮುಗಿ
ಯುವರು.)

ನಾರದ:- ನಾನಿನ್ನು ತೆರಳುವೆನು.
         (ಎಂದು ನಿಷ್ಕ್ರಮಿಸುವರು.)

              **** ****

     ಚತುರ್ಥಾಂಕಂ-ದ್ವಿತೀಯರಂಗಂ.

                   ಪ್ರದೇಶ-ಗೋಕುಲ,

    ಯಶೋದಾದೇವಿಯು ಗೋಪ ಸುಂದರಿಯರೊಡಗೂಡಿ ಶ್ರೀ
ಕೃಷ್ಣನನ್ನು ಉಯ್ಯಾಲೆಯಲ್ಲಿ ಕೂಡಿಸಿ ತೂಗುತ್ತಿರುವಳು.
     ಉದ್ಧವನು ಕೃಷ್ಣನ ಸಮೀಪದಲ್ಲಿ ಕುಳಿತಿರುವನು.

ಯಶೋದೆ:-
                          ರಾಗ - ಮೋಹನ ಅಥವಾ ರೇಗುಪ್ತಿ - ಅಟ,

     ತೂಗಿರೇ ಬಾಲನ | ತೂಗಿರೇ ಕೃಷ್ಣನ | ನಾಗವೇಣಿಯರೆಲ್ಲಾ ತೂಗಿರೇ ||ಪ||