ಈ ಪುಟವನ್ನು ಪ್ರಕಟಿಸಲಾಗಿದೆ

 ಕೃಷ್ಣಲೀಲೆ

ರಾಗ ರಂಜಿತವಾಗಿ ಹಾಡುತ ನೀವೆಲ್ಲ ಗೋಪ ಬಾಲನನ್ನು ತೂಗಿರೇ ||ಅ-ಪ|| ನಂದಗೋಕುಲಕೆ ಆನಂದವ ಬೀರುವ ಸುಂದರನಿವನನು ತೂಗಿರೇ ||ತೂಗಿ|| ಭವಹರನಿವ ಶಿವರಾಮ ರಕ್ಷಕನು| ನವಪದ್ಮಮುಖಿಯರೆ ತೂಗಿರೇ ||ತೂಗಿ||

Insert picture>>

ಗೋಪಿಯರು:- ಅಮ್ಮಾ ಯಶೋದೆ ! ಈ ಮುದ್ದುಬಾಲನಿಗೆ
ನಿದ್ರೆ ಬಂದಂತೆ ಕಾಣುವುದು. ತೂಕಡಿಸುತ್ತಿರುವನು.

ಯಶೋದೆ:- ಲತಾಂಗಿಯರೆ ! ನೀವೆಲ್ಲರೂ ಮನೋಹರವಾಗಿ
ಜೋಗುಳವನ್ನು ಹಾಡಿರಿ. ಕೃಷ್ಣನನ್ನು ನಿದ್ರೆಗೊಳಿಸೋಣ.