ಈ ಪುಟವನ್ನು ಪ್ರಕಟಿಸಲಾಗಿದೆ

೯೬ಕೃಷ್ಣಲೀಲೆ

ನೆನಲ್ಲಾ! ನನ್ನನ್ನು ಮಾತ್ರ ಎತ್ತು ಕುದುರೆಗಳು ಸೆಳೆಯುತ್ತಿರುವು ವೇನು ?

ಯಶೋದೆ:- ಕೃಷ್ಣಾ ! ಈ ವಿಚಿತ್ರಗಳನ್ನು ನಾನೇನು ಬಲ್ಲೆನು ?

   [ ಶ್ರೀಕೃಷ್ಣನು ಬಂಡಿಯ ಮೇಲೆ ಕುಳಿತು, ತನ್ನ ಕಾಲಿನಿಂದ
ಗಟ್ಟಿಯಾಗಿ ಒದೆಯುತ್ತಲೇ ಅದು ಭಯಂಕರಾಕಾರವಾದ ರಾಕ್ಷಸನಾಗಿ
ಪರಿಣಮಿಸುವುದು. ಕೃಷ್ಣನು ಅವನೊಂದಿಗೆ ಯುದ್ಧಮಾಡಿ ಅವನ
ನ್ನು ಸಂಹರಿಸುವನು. ಯಶೋದೆ ಮುಂತಾದವರು ಓಡಿಬಂದು
ಕೃಷ್ಣನನ್ನೆತ್ತಿಕೊಂಡು ಅಂತಃಪುರದೊಳಗೆ ಪ್ರವೇಶಿಸುವರು.]

                ***** *******

    ಚತುರ್ಥಾಕಂ-ತೃತೀಯ ರಂಗಂ.

          ಪ್ರದೇಶ:- ಗೋಕುಲದ ಬೀದಿ
.
     [ಗೋಪ ಸುಂದರಿಯರೆಲ್ಲರೂ ಜತೆಗೂಡಿ, ಶ್ರೀ ಕೃಷ್ಣನ ಮೇಲೆ ದೂರು ಹೇಳುವುದಕ್ಕಾಗಿ ಯಶೋದೆ ಬಳಿಗೆ ಬರುವರು.]
ರಾಧೆ, ಮಿತ್ರವಿಂದೆ, ನಂದಿನಿ, ಇಂದಲೇಖೆ, ಭಾನುಮತಿ ಮುಂ
ತಾದವರು ಪ್ರವೇಶಿಸುವರು.

ರಾಧೆ:- ಗೆಳತಿಯರೇ ! ಅಪ್ರಾಕೃತ ದಿವ್ಯಮಂಗಳ ಸ್ವರೂಪನಾದ
ಶ್ರೀ ಕೃಷ್ಣನನ್ನು ನೋಡಬೇಕೆಂಬ ಕೋರಿಕೆಯು ಬಾರಿ ಬಾರಿಗೂ
ತ್ವರೆ ಪಡಿಸುತ್ತಿರುವುದು. ನಂದ ಗೋಪನು ಗೋಕುಲದರಸನಾದುದ
ರಿಂದ ರಾಜಭವನಕ್ಕೆ ಕಾರಣವಿಲ್ಲದೆ ಪದೇ ಪದೇ ಹೋಗುವುದು ಮರ್ಯಾ
ದೆಯಲ್ಲವು. ಮಹಾರಾಣಿಯಾದ ಯಶೋದಾ ದೇವಿಯೇನೋ ಪರಮ
ಶಾಂತಚಿತ್ತಳೇ ಆಹುದು. ಆದಾಗ್ಯೂ ಕಾರಣವಿಲ್ಲದೆ ಹೋಗುವುದು ಸ
ರಿಯಲ್ಲ. ಆದುದರಿಂದ ಯಾವುದಾದರೊಂದು ಕಾರಣವನ್ನು ಕಲ್ಪಿಸ
ಬೇಕು. ಹಾಗೆ ಕಲ್ಪಿಸತಕ್ಕ ಕಾರಣವು ಸತ್ಯವಾಗಿರಬೇಕು. ಮತ್ತು
ನಮ್ಮ ಸಂಕಲ್ಪವೂ ಸಫಲವಾಗಬೇಕು. ಇದಕ್ಕೆ ತಕ್ಕ ಕಾರಣವಾವುದು?
(ಎಂದು ಸ್ವಲ್ಪಹೊತ್ತು ಯೋಚಿಸಿ). ಸರಿ ಸರಿ ! ಇದೀಗ ಸರಿಯಾದ
ಕಾರಣವು. ಶ್ರೀ ಕೃಷ್ಣನು ನಮ್ಮೆಲ್ಲರ ಮನೆಗಳಿಗೂ ಬಂದು ಹಾಲು,