ಈ ಪುಟವನ್ನು ಪ್ರಕಟಿಸಲಾಗಿದೆ

೯೭ಚತುರ್ಥಾಂಕಂ

ಮೊಸರು, ಬೆಣ್ಣೆಗಳನ್ನು ತಿಂದು ಹೋಗುವನಲ್ಲವೆ ಇದನ್ನೇ ಒಂದು
ಪ್ರವಾದವಾಗಿ ಕಲ್ಪಿಸಿ ಯಶೋದೆಯೊಂದಿಗೆ ದೂರು ಹೇಳಿ, ಈ ಮೂ
ಲಕವಾಗಿ ಕೃಷ್ಣಾನಂದವನ್ನು ಪಡೆಯೋಣ ! ಇದು ಸಮಂಜಸವಾದ
ಉಪಾಯವೆಂದು ನನಗೆ ತೋರುತ್ತದೆ ! ನೀವೇನು ಹೇಳುವಿರಿ?

ಗೋಪಿಯರು:- ರಾಧಾ ಮಣೀ ! ನಿನ್ನ ಬುದ್ಧಿ ಕುಶಲತೆಯು
ಕೊಂಡಾಡ ತಕ್ಕುದು. ಒಳ್ಳೆಯ ಉಪಾಯವನ್ನೇ ಯೋಚಿಸಿದೆ ! ಬಹಳ
ಸಮಂಜಸವಾಗಿದೆ ! ಹಾಗೆಯೇ ಮಾಡೋಣ !

ರಾಧೆ:- ತೆರಳಿರಿ ಹೋಗುವ !
          [ಎಲ್ಲರೂ ನಿಷ್ಕ್ರಮಿಸುವರು.]

'ಪ್ರದೇಶ':-ಯಶೋದೆಯ ಮನೆ.
ಯಶೋದೆಯು ಶ್ರೀಕೃಷ್ಣನನ್ನು ಮುದ್ದಾಡುತ್ತಿರುವಳು.
ಗೋಪಿಯರು ಪ್ರವೇಶಿಸುವರು.

ಗೋಪಿಯರು:- ರಾಗ - ಶಂಕರಾಭರಣ ಅಥವಾ ಶಹನ - ಏಕತಾಳ.

  ಅಹಾಹಾ ಈ ಕೃಷ್ಣನ ಕಾಟವ| ತಡೆಯಲದಾರಿ೦ದಾಗುವುದು||ಪ||
  ಓಹೋಹೋ ಇವನಾಡುವ ನುಡಿಗಳ | ತಿಳಿಸಲದಾರಿ೦ದಾಗುವುದೂ|| ಆಹಾ
                                                ಹಾ || ಅ-ಪ ||
  ಅನುದಿನ ಬರುವನು ನಮ್ಮ ಮನೆಗಳಿಗೆ ! ಹಾಲು ಮೊಸರು ಬೆಣ್ಣೆ ತಿನ್ನುವನು|
  ತಿನ್ನುತ ತಿನ್ನುತ ಚೆಲ್ಲುವನು | ಕಂಡರೆ ಹಾರುತಲೋಡುವನು || ಆಹಾಹಾ ||

  ಅಮ್ಮಾ ಯಶೋದೆ ! ಈ ಕೃಷ್ಣನ ತುಡುಗುತನವನ್ನು ಸಹಿಸ
ಲು ನಮ್ಮಿಂದಾಗದಮ್ಮ. ಬೆಳಗಾಗುತ್ತಲೇ ಮನೆ ಮನೆಗೂ ಬರುವನು.
ಬಂದರೆ ಸುಮ್ಮನಿರುವನೆ ? ಹಾಲು, ಮೊಸರು, ಬೆಣ್ಣೆಗಳನ್ನು ಕದ್ದು
ತಿನ್ನಿಸುವನು. ಅವು ತಿನ್ನುವಷ್ಟೂ ತಿಂದು ಮಿಕ್ಕುದನ್ನು ಕೋತಿಗಳಿಗೆ
ತಿನ್ನಿಸುವನು. ಅವು ತಿನ್ನದಿದ್ದರೆ ಕಂಡ ಹಾಗೆ ಚೆಲ್ಲಾಡುವನು. ಏಕೆಂ
ದು ಕೇಳಿದರೆ ನಸುನಗುತ ಓಡಿಹೋಗುವನು. ಹುಡುಗರನ್ನೆಲ್ಲಾ
ಒಂದೆಡೆಗೆ ಸೇರಿಸಿ, ತಾನು ದೊರೆಯೆಂತಲೂ, ಅವರೆಲ್ಲರೂ ಸೇವಕರೆಂ
ತಲೂ ಆಟವಾಡಿಸುವನು. ಯಾರಾದರೂ ಕೇಳಿದರೆ ಕೈಗೆ ಸಿಕ್ಕದೆ