ಚತುರ್ಭಾdeo, ೧೭೩ [ಎಂದು ಗೌರಿಯು ಅಶರೀರವಾಣಿಯಾಗಿ ಅಭಯವನ್ನು ಕೊಡು ವಳು.. ಗೋಪಿಯರು:-(ಸಂತೋಷದಿಂದ) ಜಗನ್ಮಾತೆಯೇ ! ನಿನ್ನಾ ಜ್ಞೆಯಂತೆ ನಡೆಯುವೆವು. ಎಂದೆಲ್ಲರೂ ಪುನಃ ಕೈಮುಗಿದು ವಂದಿಸುವರು.] ನಂದಿನಿ:-ಭಗವತಿಯೇನೋ ಅನುಗ್ರಹಿಸಿದಳು. ಆದರೆ ಈಗೊ೦ ದು ನೂತನ ಸಂಶಯವುಂಟಾಗಿರುವುದಲ್ಲಾ ! ಕಲವು ಮಂದಿ ಗೋಪಿಯರು:-ನಿನದು ? ನಂದಿನಿ: ನೀವೆಲ್ಲರೂ ಕೃಹ್ಮಪರಮಾತ್ಮನಲ್ಲಿ ಏಕಾಂತ ಭಕ್ತಿ ಯನ್ನಾಚರಿಸಿರೆಂದಲ್ಲವೇ ದೇವಿಯ ಅಪ್ಪಣೆಯು! ಗೋಪಿಯರು:-ಅಹುದು ! ನಂದಿನಿ: ಏಕಾಂತ ಭಕ್ತಿಯೆಂದರೇ ಅದ್ಭವೇನು ? ಅದನ್ನು ಆಚರಿಸುವುದು ಹೇಗೆ ? ಕಳಾವತಿ:-ಇದು ಬಹಳ ಗಹನವಾದ ವಿಷಯವು. ಚಾರುಮತಿ:-ಈ ಗೂಢಾರವನ್ನು ವಿವರಿಸಿ ಎಲ್ಲರಿಗೂ ತಿಳಿ ಯುವಂತ ಬೋಧಿಸತಕ್ಕವಳು ರಾಧೆಯೊಬ್ಬಳೇ ಹೊರತು ಈ ವಿಷ ಯವು ಮತ್ತಾರಿಗೂ ಸಾಧ್ಯವಲ್ಲವು. ಗೋಪಿಯರೆಲ್ಲರೂ:-ರಾಧಾಮಣಿ ! ಏಕಾಂತಭಕ್ತಿರಹಸ್ಯ ವನ್ನು ಸುಲಭವಾದ ರೀತಿಯಿಂದ ನಮ್ಮೆಲ್ಲರಿಗೂ ಬೋಧಿಸು, ನಾವೆ ಲ್ಲರೂ ಶ್ರದ್ದೆಯಾಗಿ ಕೇಳುವೆವು. ರಾಧೆ:-ಗೋಪಿಯರೆ ! ನಿಮ್ಮ ನಿಮ್ಮ ಮನಸ್ಸಿನಲ್ಲಿ ಶ್ರೀಕೃಷ್ಣ ಪರಮಾತ್ಮನ ವಿಷಯವನ್ನು ಕುರಿತು ಯಾವ ವಿಧವಾದ ಅಭಿಪ್ರಾಯ ವಿರುವುದೋ ಅದನ್ನು ಒಬ್ಬೊಬ್ಬರಾಗಿ ಹೇಳುತ್ತ ಪ್ರಾರ್ಥಿಸಿರಿ. ತದ ನಂತರ ನನ್ನ ಮಾರ್ಗವನ್ನು ತಿಳಿಸುವೆನು. ದೇವಿಯ ಆಜ್ಞೆಯಂತ ಕುಂಜವನಕ್ಕೆ ಹೋಗುವ ತೆರಳಿರಿ. [ಗೋಪಿಯರೆಲ್ಲರೂ ಕುಂಜವನಕ್ಕೆ ತೆರಳುವರು.]
ಪುಟ:ಶ್ರೀ ಕೃಷ್ಣ ಲೀಲೆ.djvu/೧೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.