ಕೃಷ್ಣ ಲೀಲೆ. ಪಂಚಮಾಂಕಂ-ಚತುರ್ಥರಂಗಂ. [ಗೋಕುಲ ಬೃಂದಾವನದ ಕುಂಜವನದಲ್ಲಿ ಗೋವಸಿಯರು ಶ್ರೀಕೃಷ್ಣ ಪರಮಾತ್ಮನನ್ನು ಗಾನರೂಪವಾಗಿ ಸೋತ್ರಮಾಡುವರು.] ಚಾರುಮತಿ:-ಶ್ಲ ! ಜಯತಿ ತೇ೭ ಧಿಕಂ ಜನ್ಮನಾವ್ರಜಃ | ಶ್ರಯ ಇಂದಿರಾ ಶಶ್ವದತ್ರಹಿ | ದಯಿತದೃಶ್ಯತಾಂ ದಿಕ್ಕು ತಾವಕಾಃ || ತ್ವಯುದ್ಧ ತಾಸವಃ ತ್ವಾಂ ವಿಚಿತೇ | ಶ್ರೀಕೃಷ್ಣಾ ! ನೀನು ಇಲ್ಲಿ ಅವತರಿಸಿದುದರಿಂದ ಈ ನಮ್ಮ ಗೋಕುಲವು ಸರೋತ್ತಮವೆನಿಸಿತು. ಭಾಗ್ಯದೇವತೆಯಾದ ಲಕ್ಷ್ಮಿ ಯು ನಮ್ಮಿ ಗೋಕುಲದಲ್ಲಿ ನೆಲೆಗೊಳ್ಳುವಂತಾಯಿತು. ಪ್ರಾಣ ನಾಥಾ ! ನಿನ್ನ ನುಗ್ರಹದಿಂದ ಸಮಸ್ತ ಸೌಭಾಗ್ಯಗಳೂ ಸಿದ್ದಿಸಿರುತ್ತವೆ. ಆದಾಗ ನಿನ್ನಲ್ಲಿಯೇ ನಮ್ಮ ಪ್ರಾಣಗಳನ್ನಿಟ್ಟು ನಿನ್ನ ವರಾಗಿ ನಿನ್ನ ನ್ನು ನೋಡಲಪೇಕ್ಷಿಸುತ್ತಿರುವ ನನಗೆ ನಿನ್ನ ಸಂದರ್ಶನವನ್ನು ಅನು ಗ್ರಹಿಸದೆ, ಹುಡುಕಿ ಹುಡುಕಿ ಹಂಬಲಿಸುವಂತೆ ನನ್ನನ್ನು ವ್ಯಥೆಗೆ ಗುರಿಮಾಡಿದೆಯಲ್ಲಾ ! ಕೃಷ್ಣಾ !! ನಮ್ಮನ್ನು ಕಟಾಕ್ಷಿಸಿ ನೋಡು !!! ನಂದಿನಿ:-ಶ್ವೇ | ಶರದುದಾಶಯೇ ಸಾಧುಜಾತಸತ್ | ಸರಸಿಜೋದರ ಶ್ರೀ ಮುಷಾದೃಶಾ || ಸುರತನಾಥತೇ ಶುಲ್ಕದಾಸಿಕಾಃ | ವರದನಿಘತೋ ನೇಹಕಿ೦ವಧಃ | ಶ್ರೀಕೃಷ್ಕಾ! ಆಹ್ಲಾದಕರವಾದ ಈ ಶರತ್ಕಾಲದ ಸಂಯೋಗ ದಿಂದ ಸೊಂಪಾಗಿ ಬೆಳೆದು ವಿರಾಜಿಸುತ್ತಿರುವ, ಕಮಲಪುಷ್ಪಗಳಿಗಿಂ ತಲೂ ಮನೋಹರವಾಗಿ ಕಂಗೊಳಿಸುತ್ತಿರುವ ನಿನ್ನ ಕಣ್ಣುಗಳ ಸೊಬಗಿನಿಂದಲೇ ನಮ್ಮನ್ನು ಹೀಗೆ ಕೊಲ್ಲುತ್ತಿರುವೆಯಲ್ಲಾ ! - ಶ್ರೀಕೃಷ್ಣಾ ! ನಾವು ನಿನಗೆ ಅಮೂಲ್ಯವಾಗಿ ಲಭಿಸಿದ ದಾನಿಯ ರಲ್ಲವೇ ! ನಾಧಾ ! ಎನ್ನೊ ಆಸೆಯಿಂದ ನಿನ್ನಲ್ಲಿಗೆ ಬಂದ ನನ್ನನ್ನು ಹೀಗೆ ನಿರಾಕರಿಸಬಹುದೆ ? ಆಯುಧವಿಲ್ಲದೆಯೇ ಕೊಲ್ಲುವುದನ್ನು ಹಿಂಸಾಕರವೋ ಅದರಂತೆಯೇ ಈ ನಿನ್ನ ಉಪೇಕ್ಷೆಯು ನಮ್ಮ ವಿಚಾ ರದಲ್ಲಿ ಆಕಸ್ತ ವಧೆಯಲ್ಲವೆ?
ಪುಟ:ಶ್ರೀ ಕೃಷ್ಣ ಲೀಲೆ.djvu/೧೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.