ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಕೃಷ್ಣ ಲೀಲೆ ಕುಟಿಲಕುಂತಲಂ, ಶ್ರೀಮುಖಂಚತೇ | ಜಡದೀಕ್ಷಿತಾಂ, ಪಕ್ಷ ಕೃದೃಶಾಂ || ಶ್ರೀಕೃಷ್ಣಾ! ನೀನು ಗೋವುಗಳನ್ನಟ್ಟಿಕೊಂಡು ಕಾಡಿಗೆ ಹೋದಾಗ, ನಿನ್ನ ಅಗಲಿಕೆಯನ್ನು ಸಹಿಸಲಾರದ ನಮಗೆ, ನಿನ್ನನ್ನು ಪುನಃ ನೋಡುವತನಕ ಒಂದೊಂದು ತುಟಿಕಾಲವೂ ಒಂದೊಂದು ಯುಗವಾಗಿ ತೋರುತ್ತದೆ. ಸಂಧ್ಯಾಕಾಲದಲ್ಲಿ ನೀನು ಮನೆಗೆ ಬಂದ ಮೇಲೆ ಮುಂಗುರುಳುಗಳಿಂದ ಶೋಭಿತವಾದ ನಿನ್ನ ಮುದ್ದು ಮುಖ ವನ್ನು ನೋಡುತ್ತಲೇ ಪರಮಾನಂದವುಂಟಾಗುತ್ತದೆ. ಈ ತರನಾಡ ಸಂತೋಷದಲ್ಲಿ ಮಗ್ನರಾಗಿರತಕ್ಕವರು, ರೆಪ್ಪೆಹಾಕುವಷ್ಟು ಕಾಲವಾ ದರೂ ನಿನ್ನನ್ನು ನೋಡದೇ ಇರಲಾರರು. ಆದುದರಿಂದ ಅಂಥವರು ತಮಗೆ ಅನಿಮಿಷವನ್ನು (ಎವೆಯಿಡದಿರುವುದನ್ನು) ಕೊಡದೆ ಹೋದು ದಕ್ಕಾಗಿ ಬ್ರಹ್ಮನನ್ನು ಜಡನೆಂದು ಭಾವಿಸುವರು ! ಪುಷ್ಪವೇಣಿ:- ಶ್ಲ | ಪತಿ ಸುತಾನ್ವಯ, ಭ್ರಾತೃ ಬಾಂಧರ್ವಾ | ಅತಿ ಸಿಲಂಫ್ಯತೇ ಚಲಾಗತಾಃ | ಗತಿವಿದಸ್ತವೋ ದ್ವೀತಮೋಹಿತಾಃ | ಕಿತವಯೋಷಿತಃ, ಕಚೇಳಿ | ಶ್ರೀಕೃಷ್ಟ ! ಅಚ್ಯುತಾ ! ನಿನ್ನ ಅಪ್ರಾಕೃತ ದಿವ್ಯಮಂಗಳೆ ಸ್ವರೂಪವನ್ನು ಸಂದರ್ಶಿಸಿ, ತದೀಯ ಸಂವರ ರಸವನ್ನು ಅನುಭವಿಸ ಬೇಕಂಬ ಕುತೂಹಲದಿಂದ ನನ್ನ ಪತಿಗಳನ್ನೂ, ಪುತ್ರರನ್ನೂ, ನೆಂಟ ರನ್ನೂ, ಒಡಹುಟ್ಟಿದವರನ್ನೂ ಕೂಡಾ ಉಲ್ಲಂಘಿಸಿ, ನಿನ್ನ ಮುರಳಿ ಗಾನದಿಂದ ಮೋಹಿತರಾಗಿ ಬಂದಿರುವೆವು, ನೀನಿರುವ ಈ ದಾರಿ ಯನ್ನು ಬಹು ಪ್ರಯತ್ನ ಮಾಡಿ ಕಂಡು ಹಿಡಿದೆವು. ಇಂತಹ ಈ ರಾತ್ರಿ ಕಾಲದಲ್ಲಿ ನಿನ್ನನ್ನು ಒಲಿದು ಬಂದ ಕಾಮಿನಿಯರನ್ನು ಹೀಗೆ ನಿರಾ ಕರಿಸಬಹುದೆ ? ಇಂತಹ ಕಾವ್ಯವನ್ನು ನೀನೊಬ್ಬನಲ್ಲದೆ ಮತ್ತೆ ಯಾ ರಾದರೂ ಮಾಡುವರೆ ? ಭದ್ರ:-ಶ್ಲೋu ರಹಸಿಸಂವಿದಂ, ಹೃಚ್ಛಯೋದಯಂ | ಪ್ರಹಸಿಕಾನನಂ, ಪ್ರೇಮವೀಣಂ |