ರೌದ್ರರಸ, ಭಯಾನರಕಸ, ಶಾಂತರಸಗಳೆಂಬ ನವರಸಗಳೂ ತುಂಬಿ
ರುವುವೇ?
ಕರುಣಾ:-ಪ್ರಿಯೆ-ಕೇಳು !
ರಾಗ-ಕಾಂಭೋಜಿ- ಅಟತಾಳ.
ಆವರಸಕೋರಿದರೆ ಆರಸವಿರುವುದು! ||ಸ||
ದೇವದೇವನ ದಿವ್ಯ ಲೀಲೆಯೋಳು ರಮಣೀ||ಆವರಸ||ಅ- ಪ||.
ಅರಸರಿಗೆ ವೀರರಸ | ವಿಪ್ರರಿಗೆ ವೇದರಸ | ಪರಮಯೋಗೀಂದ್ರರಿಗೆ ತತ್ವ
ರಸವು| ವಿರಹಿಗಳಿಗರಿಯೆ ಶೃಂಗಾರರಸ ಕಾಣುವುದು | ಪರಮಪುರುಷನ
ಚಿತ್ರ ಚರಿತೆಯೊಳು ಸುದತೀ || ಆವರಸ ||
ಅರಿಗಳಿಗೆ ರೌದ್ರರಸ | ಗುರುಗಳಿಗೆ ಶಾಂತರಸ | ಸುರನರರೊಳಮಲರಿಗೆ
ಭಕ್ತಿರಸವು|| ನಿರತಶಿವರಾಮ ಸಂತೋಷಕಾರಣನಾದ ಹರಿಮುಕುಂದನು
ಸರ್ವ, ರಸಭರಿತನಬಲೇ||ಆವರಸ||
ಆದುದರಿಂದ ನಿಖಿಲ ರಸಾಮೃತಮೂರ್ತಿಯಾದ ಶ್ರೀ ಕೃಷ್ಣವರ
ಮಾತ್ಮನನ್ನು ಯಾರು ಯಾರು ಯಾವತೆರನಾಗಿ ಭಾವಿಸುವರೋ
ಅವರವರಿಗೆ ಆಯಾತೆರನಾದ ರಸವೇ ಕಾಣುವುದು! ಆಶ್ರಿತರಿಗೆ ಕಲ್ಪ
ತರುವಾದ ಶ್ರೀ ಕೃಷ್ಣಮೂರ್ತಿಯಲ್ಲಿ ನಿಷ್ಕಳಂಕವಾದ ಭಕ್ತಿಯುಳ್ಳ
ವರಿಗೆ, ಆತನು ಅಪ್ರಾಕೃತ ದಿವ್ಯಮಂಗಳಮೂರ್ತಿ ಯಾಗಿಯೇ ಕಾಣು
ವನು !
ಕಮಲೆ:-ಪ್ರಿಯಾ ! ಹಾಗಾದರೆ ನಾವು ಧನ್ಯರೇ ಸರಿ ! ಪರಮ
ಪಾವನವಾದ ಗಂಗಾಜಲವು ಸುಲಭ ಸಾಧ್ಯವಾಗಿ ಲಭಿಸುವಲ್ಲಿ ಅದನ್ನು
ತೊರೆದು, ಕಸದಗುಂಡಿಯ ನೀರನ್ನು ಬಯಸತಕ್ಕವರು ಮಂದಮತಿ
ಗಳಲ್ಲವೆ ?
ಕರುಣಾ:-ಆಮಾತಿನಲ್ಲಿ ಸಂಶಯವೇನಿದೆ ?
ಕಮಲೆ:-ವರಂತು ಸತ್ಕಾಲಕ್ಷೇಪ ವಿನೋದಿಗಳೂ, ಅನನ್ಯವಾದ
ಭಗವದ್ಭಕ್ತಿಯುಳ್ಳವರೂ, ರಸಜ್ಞಶೇಖರರೂ ಆದ ಸಭ್ಯಮಹಾಶಯ
ರನ್ನು "ಶ್ರೀ ಕೃಷ್ಣಲೀಲೆ" ಯಿಂದಲೇ ಸಂತೋಷಪಡಿಸಬಹುದಲ್ಲವೆ ?
ಕರುಣಾ: ನಿಶ್ಚಯ! ಹಾಗೆಯೇ ಮಾಡೋಣ!
ಎಂದು ಮಾತನಾಡುತ್ತಿರುವಾಗ್ಗೆ ವೀಣಾಗಾನವು ಕೇಳಿಸುವುದು.