ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಸ್ತಾವನೆ


ನಾರದ:-ಮಂಗಳಸ್ತುತಿ.
ಕಾಂಭೋಜಿ ಅಥವಾ ಆರಭಿರಾಗ.
ಪಾಹಿ ಶ್ರೀ ವರಜಗನ್ನಾಥಾ ||ಪ|| ಪಾಹಿ ಪರಮಾನಂದದಾತಾ||ಅ-ಪ||
ನವವಿಕಚ ಸರಸಿರುಹ| ನಯನಯುಗಸುರವಿನುತ, ಗಗನಚರನದಿಜನಕ|
ಪರಮಚರಣ|| ಜಲಧಿಸುತ ಕುಚಕಲಶ ಲಲಿತಮೃಗಮದರುಚಿರ| ಪರಿ
ಮಿಳಿತ ನಿಜಹೃದಯ ಧರಣಿಭರಣಾ||ಪಾಹಿ|| ||೧|| ದ್ರುಹಿಣಮುಖ ಸುರನಿ
ಕರ ವಿಹಿತನುತಿ ಕಲಿತಗುಣ | ಕಟಿಘಟಿತ ರುಚಿರತರ ಕನಕವಸನ | ಭುಜ
ಗಪತಿ ವರಶಯನ ರಜತಗಿರಿ ಪತಿವಿನುತ, ಸತತಜಪತಪನಿಯಮ ಸುಜನ
ವರದಾ||ಪಾಹಿ|| ೨ || ತಿಮಿರಮಠ ಕಿಟನೃಹರಿ| ಮುದಿತ ಬಲಿನಿಹಿತಪದ,
ಪರಶುಧರ ದಶವದನ ದನುಜದಳನ | ಮುರದಮನ ಕಲಿಕಲುಷ ತತಿಹ
ರಣ। ಕರಿವರದ, ಪರಮಮುನಿನುತ ಚರಿತ ಗರುಡಗಮನಾ ಪಾಹಿ ॥೩॥

ಕರುಣಾ:- ಪ್ರಿಯೇ! ಬಹ್ಮಮಾನಸಪುತ್ರರೂ, ತ್ರಿಲೋಕ
ಸಂಚಾರಿಗಳೂ, ಸಂತತ ನಾರಾಯಣ ಧ್ಯಾನ ಪರಾಯಣರೂ, ಗಾನವಿ
ದ್ಯಾವಿಶಾರದರೂ ಆದ ನಾರದ ಮಹರ್ಷಿಗಳು, ಭಗವಂತನ ಸಂದರ್ಶ
ನಾರ್ಥವಾಗಿ ವೈಕುಂಠಕ್ಕೆ ತೆರಳುವಂತೆ ಕಾಣುತ್ತದೆ! ಆದ ಪ್ರಯುಕ್ತ
ನಾವಿನ್ನು ಸಾವಕಾಶಮಾಡದೆ ಪರಮಾತ್ಮನ ಸೇವೆಯಲ್ಲಿ ನಿರತರಾಗು
ವುದು ಶ್ರೇಯಸ್ಕರವು!
 
ಕಮಲೆ:-ಮಹದಾಜ್ಞೆ !
             (ಎಂದು ನಿಷ್ಕ್ರಮಿಸುವರು.)
                      ಇದು ಪ್ರಸ್ತಾವನೆ.
                     ಭಕ್ತವತ್ಸಲಾಯನಮಃ,