ಈ ಪುಟವನ್ನು ಪ್ರಕಟಿಸಲಾಗಿದೆ



ದ್ವಿತೀಯರಂಗಂ

ಗರ್ವದಿಂದ ಕೊಬ್ಬಿದವರಾಗಿ ಗೋಬ್ರಾಹ್ಮಣರೇ ಮುಂತಾದ ಸಾಧುಸಜ್ಞ
ನರನ್ನು ಬಾಧಿಸುತ್ತ, ಪತಿವ್ರತೆಯರಾದ ಸ್ತ್ರೀಯರನ್ನು ಭಂಗಪಡಿ
ಸುತ್ತ ತಮ್ಮ ಪ್ರತಾಪಕ್ಕೆ ಎದುರಿಲ್ಲವೆಂಬ ಧೈರ್ಯದಿಂದ ಮೆರೆಯು
ತ್ತಿರುವರು. ಕಂಸ, ನರಕ, ಶಿಶುಪಾಲ, ಜರಾಸಂಧಾದಿ ದುಷ್ಟ ರಕ್ಕ
ಸರ ಬಾಧೆಯನ್ನು ತಾಳಲಾರದೆ ಬ್ರಹ್ಮೇಂದ್ರಾದಿ ದೇವತೆಗಳು ಕ್ಷೀರಸಾ
ಗರಕ್ಕೆ ತೆರಳುತ್ತಿರುವರು. ಈಗಿನ ಸಂದರ್ಭವು, ಭಗವಂತನು ಭೂ
ಲೋಕದಲ್ಲವತರಿಸಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವುದಕ್ಕೆ
ತಕ್ಕುದಾಗಿರುವುದು. ನಾನು ಸಮಯೋಚಿತವಾಗಿ ಕಂಸಾದಿ ದುಷ್ಟ,
ಜಂತುಗಳನ್ನು ಹುರಿಗೊಳಿಸಿ ಅವರನ್ನು ಭಗವಂತನಿಂದ ನಿರ್ಮೂಲ
ಮಾಡಿಸುತ್ತೇನೆ; ಈ ಮೂಲಕ ಸಾಧುಸಜ್ಜನರಿಗೂ ಪತಿವ್ರತಾ ಸ್ತ್ರೀ
ಯರಿಗೂ ಕ್ಷೇಮವುಂಟಾಗಲಿ ! ನಾನು ಈಗಲೇ ವೈಕುಂಠಕ್ಕೆ ತೆರಳಿ
ಇಂದಿರಾರಮಣನನ್ನು ಸಂದರ್ಶಿಸುವೆನು;
        ಎಂದು ವೀಣಗಾನ ಮಾಡುತ್ತಾ ತೆರಳುವರು.

          --------------------------------

                  'ದ್ವಿತೀಯ ರಂಗಂ'
               ಪ್ರದೇಶ:- ಕ್ಷೀರಸಾಗರ.

      ಶ್ರೀಮನ್ನಾರಾಯಣನು ಲಕ್ಷ್ಮೀಸಮೇತನಾಗಿ ಶೇಷ
        ಪರ್ಯಂಕದಲ್ಲಿ ಪವಡಿಸಿರುವನು.ಬ್ರಹ್ಮಾದಿ
            ದೇವತೆಗಳು ಸ್ತುತಿಸುತ್ತಿರುವರು.

             ರಾಗ-ಹಿಂದುಸ್ಥಾನಿ ಕಾಪಿ-ಆದಿ

ದೇವಸಕಲಾಧಾರಾ | ಅಪಾರಾ || ಪ ||
ಪಾವನಗುಣಯುತ ಪರಮವಿನೋದ | ದೇವ || ಆ || ಪ || [ದೇವ||
ದಾನವಾಳಿ ವಿರಾಮ| ಸುನಾಮಾ | ಮಾನಿತಸಜ್ಜನ ಮ೦ಜುಳಭಾಷಣ||
ಶ್ರೀವರಾಮರಪಾಲಾ| ಸುಶೀಲಾ | ಭಾವಜಪಿತ ಶಿವರಾಮವಿಲೋಲ ||ದೇವ||

ಇಂದ್ರ :- ಶ್ಲೋ|| ಯಜ್ಣೇಶಾಚ್ಯುತ ಗೋವಿಂದ ಮಾಧವಾನಂತ ಕೇಶವ|
        ವಿಷ್ಣುಜಿಷ್ಣ ಹೃಷಿಕೇಶ ವಾಸುದೇವ ನಮೋಸ್ತುತೇ||