ಈ ಪುಟವನ್ನು ಪ್ರಕಟಿಸಲಾಗಿದೆ
ಜಲಧಿಸದನ | ದುರಿತಶಮನ | ಪರಮಪಾವನ || ಪ ||
ಕಲಿತೆಸುಗುಣ | ಲಲಿತವದನ | ಪರಮಚರಣ | ದನುಜಹರಣ ||ಅ||ಪ||
ಮಂಗಳಾಂಗಮಾಧವಶೌರೀ | ಮೌನೀ೦ದ್ರವಿಮಲಮಾನಸ ಸಿಹ್ಮಾಸನ
ನಿಲಯಾ | ಸೌಭಾಗ್ಯಧಾತ ಸಂತತಶಿವರಾಮತೋಷಣಾ | ಕಮಲಾರ್ಚಿ
ತ ವಿಮಲಾಂಚಿತ ಕಮನೀಯಗುಣಾಭರಣಾ | ಸಮಸುಶೀಲ ಸುಜನಪಾಲ
ಬಣ್ಣಿಸಲು ನನ್ನಿಂದಾಗಬಲ್ಲದೇ? ಎಷ್ಟು ಬಣ್ಣಿಸಿದರೂ ಮತ್ತಷ್ಟು ಅಗಾ
ಧವಾಗಿಯೇ ತೋರುವುದು. ಚತುರ್ಮುಖನಾದ ಬ್ರಹ್ಮನಿಗೂ, ಷಣ್ಣು
ಖನಾದ ಕುಮಾರನಿಗೂ, ಸಹಸ್ರಮುಖನಾದ ಆದಿಶೇಷನಿಗೂ ಸಹಾ
ಅಸಾಧ್ಯವಾಗಿರುವಲ್ಲಿ ನನ್ನಂಥವನಿಗೆ ಸಾಧ್ಯವೇ? ಎಂದಿಗೂ ಸಾಧ್ಯವಲ್ಲ!
ಆದಾಗ್ಯೂ ಪರಂಧಾಮನು ಕರುಣಾಸಮುದ್ರನಾದುದರಿಂದ ಭಕ್ತರು
ತಮ್ಮ ಶಕ್ತ್ಯಾನುಸಾರವಾಗಿ ಮಾಡತಕ್ಕ ಸ್ಮರಣೆಗೆ ಸಂತುಷ್ಟನಾಗಿ,
ತನ್ನ ಅವ್ಯಾಜ ಕಾರುಣ್ಯದಿಂದ ಕಟಾಕ್ಷಿಸ ತಕ್ಕವನಾದ ಕಾರಣ ಭಕ್ತರಿಗೆ
ಸುಲಭಸಾಧ್ಯನಾಗಿರುವನು. ಇಂತಹ ಪರಮ ಕಾರುಣ್ಯಮೂರ್ತಿಯ